ಚುನಾವಣಾ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ


ಧಾರವಾಡ, ಏ.2::ವಿಧಾನಸಭಾ ಚುನಾವಣೆಯನ್ನು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥಿತವಾಗಿ, ಪಾರದರ್ಶಕ ಮತ್ತು ಸುಗಮವಾಗಿ ಜರುಗಿಸಲು ಅನುವು ಆಗುವಂತೆ ವಿವಿಧ ಇಲಾಖೆ, ಶಾಲೆ, ಕಾಲೇಜು, ಬ್ಯಾಂಕ್ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಕಗೊಳಿಸಿ, ಈಗಾಗಲೇ ಆದೇಶಿಸಲಾಗಿದೆ. ಆದರೆ ಕೆಲವರು ಇನ್ನೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಂತವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಶಿಸ್ತು ಕ್ರಮ ಜರುಗಿಸಿ, ತಕ್ಷಣ ಅಮಾನತ್ತು ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಆಗಿದ್ದು, ಮಾದರಿ ನೀತಿ ಸಂಹಿತೆ ಅನುμÁ್ಠನದಲ್ಲಿದೆ. ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿ, ಆದೇಶಿಸಲಾಗಿದೆ. ಆದರೆ ಚೆಕ್‍ಪೆÇೀಸ್ಟ್ ಸೇರಿದಂತೆ ವಿವಿಧ ತಂಡಗಳಿಗೆ ನೇಮಕವಾದ ಕೆಲವು ಅಧಿಕಾರಿ, ಸಿಬ್ಬಂದಿಗಳು ತಮಗೆ ನೇಮಿಸಿದ ಕೆಲಸಕ್ಕೆ ಮತ್ತು ಸ್ಥಳಕ್ಕೆ ಇನ್ನೂ ಹಾಜರಾಗದಿರುವ ಕುರಿತು ಹಾಗೂ ಕೆಲವು ಅಧಿಕಾರಿಗಳು ತಮ್ಮ ಅಧೀನದ ಸಿಬ್ಬಂದಿಗಳನ್ನು ತಮ್ಮ ಕರ್ತವ್ಯಕ್ಕೆ ಕಳುಹಿಸುತ್ತಿರುವ ಕುರಿತು ಮಾಹಿತಿ ಬಂದಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಕರ್ತವ್ಯಲೋಪವೆಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಇದನ್ನು ತುರ್ತು ಪರಿಶೀಲಿಸಿ, ಈಗಾಗಲೇ ಚುನಾವಣಾ ಕರ್ತವ್ಯಕ್ಕೆ ನೇಮಿಸಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ತಮಗೆ ನೇಮಿಸಿದ ಸ್ಥಳದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು, ನಿಯಮಾನುಸಾರ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ನಾಳೆ ಏ.2 ರ ಬೆಳಿಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಆದೇಶ ಉಲ್ಲಂಘಿಸಿ ಗೈರುಹಾಜರು ಉಳಿದಿರುವ, ಬದಲಿ ಸಿಬ್ಬಂದಿ ಕಳಿಸುವವರ ವಿವರ ಸಲ್ಲಿಸಬೇಕು. ತಕ್ಷಣ ತಪ್ಪಿತಸ್ಥರ ಮೇಲೆ ಭಾರತ ಚುನಾವಣಾ ಆಯೋಗ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಗುರುದತ್ತ ಹೆಗಡೆ ಅವರು ಎಲ್ಲ ಚುನಾವಣಾಧೀಕಾರಿಗಳಿಗೆ ಆದೇಶಿಸಿದ್ದಾರೆ.