ಚುನಾವಣಾ ಆಯೋಗ ‌ಬಿಜೆಪಿಯ ಗಿಣಿ: ಮಮತಾ ವಾಗ್ದಾಳಿ

ಕೊಲ್ಕತ್ತಾ, ಏ‌.26- ಕೇಂದ್ರ ಚುನಾವಣಾ ಆಯೋಗ ಬಿಜೆಪಿಯ ಗಿಣಿ , ಹೀಗಾಗಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ.ಹೀಗಾಗಿ ಚುನಾವಣಾ ರ್ಯಾಲಿ ರದ್ದು ಪಡಿಸುವಂತೆ ಮನವಿ ಮಾಡಿದರೂ ಕ್ಯಾರೆ ಅನ್ನದೆ ಬಿಜೆಪಿಗೆ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದರು.

ಚುನಾವಣಾ ಸಭೆಗಳಿಗಳಿಗೆ ಅವಕಾಶ ಮಾಡಿಕೊಟ್ಟ ಚುನಾವಣಾ ಆಯೋಗದ ಕ್ರಮವನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳ ವಿರುದ್ದ ಕೊಲೆ ಪ್ರಕರಣ ದಾಖಲಿಸಬೇಕಾಗುತ್ತದೆ ಅಲ್ಲದೆ ಮುಂದೆ ಪ್ರಚಾರ ಸಭೆಗೆ ಅವಕಾಶ ಮಾಡಿಕೊಟ್ಟರೆ ಮತ ಎಣಿಕೆ ನಿಲ್ಲಿಸುವಂತೆ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಮದ್ರಾಸ್ ಹೈಕೋರ್ಟ್ ಕ್ರಮವನ್ನು ಅವರು ಸ್ವಾಗತಿಸಿದರು.ದೇಶದಲ್ಲಿ ಕಾನೂನು ನ್ಯಾಯದ ಮೇಲೆ ನಂಬಿಕೆ ಇದೆ ಎನ್ನುವುದು ಇಂತಹ ಪ್ರಕರಗಳಿಂದ ತಿಳಿಯಲಿದೆ ಎಂದರು.

ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲು ಚುನಾವಣೆಯಿಂದಲೇ ಕಾರಣ ಇದರ ಜವಬ್ದಾರಿ ಯನ್ನು ಚುನಾವಣಾ ಆಯೋಗ ಹೊರಬೇಕು. ಕೊವಿಡ್ ಸೋಂಕು ಹೆಚ್ಚಾಗುತ್ತಿದ್ದರೂ ಪಶ್ಚಿಮ‌ ಬಂಗಾಳದಲ್ಲಿ 8 ಹಂತದ ಚುನಾವಣೆಗೆ ಅವಕಾಶ ಮಾಡಿಕೊಡುವ ಮೂಲಕ ಬಿಜೆಪಿ ಪಕ್ಷ ಆಡಿಸಿದಂತೆ ಆಡುತ್ತಿದೆ ಎಂದು ಅವರು ದೂರಿದ್ದಾರೆ‌,

ಕೊರೋನಾ ಸೋಂಕು ಹೆಚ್ಚಳಕ್ಕೆ ಒಂದು ಕಡೆ ಬಿಜೆಪಿಯ ಚುನಾವಣಾ ಅಧಿಕಾರ ದಾಹ ಮತ್ತು ಮತ್ತೊಂದು ಕಡೆ ಚುನಾವಣಾ ಆಯೋಗದ ವೈಫಲ್ಯ ಕಾರಣ ಎಂದು ಅವರು ಬಾಗ್ದಾಳಿ ನಡೆಸಿದ್ದಾರೆ‌

ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವೇ ನಡೆಸುತ್ತಿಲ್ಲ.‌ಬದಲಾಗಿ ಬಿಜೆಪಿಯ ಕೈಗೊಂಬೆಯಾಗಿ ವರ್ತನೆ ಮಾಡುತ್ತಿದೆ ಎಂದು ಅವರು ದೂರಿದರು.

ಪ್ರಧಾನಿಯೂ ಹೊಣೆ:

ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಲು ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ದಾಹ ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.