ಚುನಾವಣಾ ಆಯೋಗದಿಂದ ವೆಚ್ಚ ವೀಕ್ಷಕರ ನೇಮಕ


ಬಳ್ಳಾರಿ,ಏ.15: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ಸಂಬಂಧಿಸಿದಂತೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸುವ ಸಲುವಾಗಿ, ಚುನಾವಣಾ ಆಯೋಗವು ಜಿಲ್ಲೆಗೆ ಮೂವರು  ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
91-ಕಂಪ್ಲಿ ವಿಧಾನಸಭಾ ಕ್ಷೇತ್ರ ಮತ್ತು 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ರಾವುತ್ ಮನೀಶ್ ಮಹೇಂದ್ರ  ಮೊ.9141010824, ಬಳ್ಳಾರಿ ಗ್ರಾಮೀಣ-93 ವಿಧಾನಸಭಾ ಕ್ಷೇತ್ರಕ್ಕೆ ಯುಧಸ್ತ್ ಕುಮಾರ್ ಅವರ ಮೊ.9141010825, ಬಳ್ಳಾರಿ ನಗರ-94 ವಿಧಾನಸಭಾ ಕ್ಷೇತ್ರ ಮತ್ತು 95-ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅನಿಸ್ ಖಾನ್  ಮೊ.9141010826 ಅವರು ನೇಮಕಗೊಂಡಿದ್ದು, ಇವರು ಅಧಿಸೂಚನೆ ದಿನದಿಂದ ನಿಯೋಜನೆಗೊಂಡಿರುತ್ತಾರೆ. ಚುನಾವಣೆ ಅಕ್ರಮ ಕಂಡುಬಂದಲ್ಲಿ ನೇರವಾಗಿ ಇವರನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.