ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಘೋಷಣೆ ಸೋಮಶೇಖರರೆಡ್ಡಿ ಆಸ್ತಿ ರೂ. 46 ಕೋಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.16: ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ ಚರಾಸ್ತಿ ಹಾಗೂ ಚಿರಾಸ್ತಿ ಸೇರಿದಂತೆ 47 ಕೋಟಿ ರೂ ಅಧಿಕ ಆಸ್ತಿ ಹೊಂದಿದ್ದಾರೆ. ಆದರೆ ಸ್ಥಿರಾಸ್ತಿಗಿಂತಲೂ ಆಧಿಕ ಸಾಲ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಶನಿವಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ.
ರೆಡ್ಡಿಯವರ ಚರಾಸ್ತಿ ಮೌಲ್ಯ 16,16,94,374 ರೂ, ಪತ್ನಿ ವಿಜಯಮ್ಮ ಅವರ ಚರಾಸ್ಥಿ ಮೌಲ್ಯ 1,06, 80,425 ರೂ, ಮೊದಲ ಮಗ ಜಿ.ರಾಜಸಂದೀಪ್ ರೆಡ್ಡಿ ಚರಾಸ್ಥಿ 1,98,60,054 ರೂ, 2ನೇ ಮಗ ಜಿ.ಶ್ರವಣಕುಮಾರರೆಡ್ಡಿ ಹೆಸರಿನಲ್ಲಿ 2.72 ಕೋಟಿ ಮೌಲ್ಯದ ಚರಾಸ್ಥಿ ಇದೆ.
ಶಾಸಕರ ಹೆಸರಿನಲ್ಲಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ 30.90 ಕೋಟಿ ರೂ, ಪತ್ನಿ ಹೆಸರಿನಲ್ಲಿ 10.95 ಕೋಟಿ ರೂ, ಮೊದಲ ಪುತ್ರನ ಹೆಸರಿನಲ್ಲಿ 95 ಲಕ್ಷ ರೂ., 2ನೇ ಮಗನ ಹೆಸರಿನಲ್ಲಿ 75 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ತಮಗೆ ಪಿತ್ರಾರ್ಜಿತವಾಗಿ 20.94 ಕೋಟಿ ರೂ ಮೌಲ್ಯದ ಆಸ್ತಿ ಬಂದಿದೆ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿರುವುದು ಸ್ವಂತ ಗಳಿಕೆ ಎಂದರು.
ರೆಡ್ಡಿಯವರ ಸಾಲ 30.01 ಕೋಟಿ ರೂ, ಅವರ ಪತ್ನಿಯ ಸಾಲ 3.32 ಕೋಟಿ ರೂ, ಮೊದಲ ಮಗನ ಹೆಸರಿನಲ್ಲಿ 2.19 ಕೋಟಿ ರೂ, 2ನೇ ಮಗನ ಹೆಸರಿನಲ್ಲಿ 1.95 ಕೋಟಿ ರೂ, ಸಾಲ ಇದೆ. ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವುದಾಗಿ ಅವರು ಹೇಳಿದ್ದಾರೆ.
ತಮ್ಮ ಕೈಯಲ್ಲಿ 5.68 ಲಕ್ಷ ರೂ ನಗದು, ಪತ್ನಿಯ ಬಳಿ 3.14 ಲಕ್ಷ ನಗದು, ರಾಜಸಂದೀಪ ರೆಡ್ಡಿ ಬಳಿ 92.971 ರೂ, ನಗದು. ಶ್ರವಣಕುಮಾರ್ ಬಳಿ 72500 ರೂ ನಗದು, ಅಲ್ಲದೆ ತಮ್ಮ ಬಳಿ 1.45 ಕೋಟಿ ರೂ ಮೌಲ್ಯದ 2 ಕೆಜಿ 558 ಗ್ರಾ ಚಿನ್ನ, 13.77 ಲಕ್ಷ ಮೌಲ್ಯದ 17 ಕೆಜಿ, 218 ಗ್ರಾಂ ಬೆಳ್ಳಿ ಆಭರಣಗಳು ಇವೆ. ಪತ್ನಿಯ ಬಳಿ 1 ಕೋಟಿ ಮೌಲ್ಯದ 1 ಕೆಜಿ 756 ಗ್ರಾಂ ಚಿನ್ನಾಭರಣ, ಇಬ್ಬರ ಮಕ್ಕಳ ಬಳಿ ತಲಾ 6.83 ಲಕ್ಷದ 120 ಗ್ರಾಮ ಚಿನ್ನಾಭರಣ ಇದೆ.
ಸೋಮಶೇಖರರೆಡ್ಡಿ ದಬಾರಿ ಬೆಲೆ ಬಾಳುವ ಕಾರುಗಳ ಒಡೆಯರಾಗಿದ್ದಾರೆ. 18.75 ಲಕ್ಷ ರೂ ಮೌಲ್ಯದ ಟೋಯೋಟೋ ಇನ್ನೊವಾ ಕಾರು 21.17 ಲಕ್ಷ ರೂ ಮೌಲ್ಯದ ಕೀಯಾ ಕಾರು, 37,73 ಲಕ್ಷ ರೂ ಮೌಲ್ಯದ ಟೋಯೋಟೋ ಫಾರ್ಚೂನರ್ ಕಾರು, 1.03 ಕೋಟಿ ರೂ ಮೌಲ್ಯದ ಹೋಲ್ವೋ ಕಾರು, 56 ಸಾವಿರ ಮೌಲ್ಯದ ಹೊಂಡಾ ಯಾಕ್ವಿಟ್ ಸ್ಕೂಟರ್ ಇದೆ. ಬಳ್ಳಾರಿ ಹೊರವಲಯದ ಅಂದ್ರಾಳ್, ಬಿಸಲಳ್ಳಿ, ಸಂಗನಕಲ್ಲು ಗ್ರಾಮಗಳಲ್ಲಿ ಸೋಮಶೇಖರರೆಡ್ಡಿ ಅವರ ಪುತ್ರರ ಹೆಸರಿನಲ್ಲಿ ಕೃಷಿ ಜಮೀನಿ ಇದೆ. ಬಳ್ಳಾರಿಯ ವಿವಿಧೆಡೆ, ಬೆಂಗಳೂರಿನ ಪ್ರತಿಷ್ಠಿತಾ, ಟಿ.ಆರ್. ನಗರದಲ್ಲಿ ನಿವೇಶನ, ಕನ್ನಿಂಗ್ ಯ್ಯಾಂ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಪ್ಲಾಟ್ ಗಳು, ಬೆನ್ಸನ್ ಟೌನ್ ನಲ್ಲಿ ಪ್ಲಾಟ್ ಗಳು ರೆಡ್ಡಿ ಮತ್ತು ಅವರ ಪತ್ನಿಗೆ ಇವೆ.