ಚುನಾವಣಾ ಅಧಿಸೂಚನೆ ಪ್ರಕಟ, ಇಂದಿನಿಂದ ನಾಮಪತ್ರಗಳ ಸ್ವೀಕಾರ ಪ್ರಕ್ರಿಯೆ ಆರಂಭ

ಅಥಣಿ :ಎ.13: ರಾಜ್ಯವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಇಂದು ಅಥಣಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ರಾಜಶೇಖರ ವಿಜಾಪುರೆ ಚುನಾವಣಾ ಅಧಿಸೂಚನೆ ಹೊರಡಿಸಿದರು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು. ದಿ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಥಣಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಲು ಒಂದು ಕೌಂಟರ್ ತೆರೆಯಲಾಗಿದೆ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಮತ್ತು ಸೂಚಕರು ಮಾತ್ರ ಒಳಗಡೆ ಬಂದು ನಾಮಪತ್ರ ಸಲ್ಲಿಸಬೇಕು ಎಂದು ಅಥಣಿ ವಿಧಾನಸಭಾ ಚುನಾವಣಾ ಅಧಿಕಾರಿ ರಾಜಶೇಖರ ವಿಜಾಪುರೆ ಹೇಳಿದರು.
ತಮ್ಮ ಕಛೇರಿಯಲ್ಲಿ ಮಾತನಾಡಿ ಅಥಣಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಹೆಚ್ಚಿನ ಮತದಾನ ಆಗುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ಶಾಂತಿಯುತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಯುವ ದೃಷ್ಟಿಯಿಂದ ಸೂಕ್ತ ಭದ್ರತಾ ಹಾಗೂ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಲಾಗಿದೆ. ದಿ.21ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಎ.24ರಂದು ಕೊನೆಯ ದಿನವಾಗಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೆ ಪೂರ್ವ ತಯಾರಿಯ ಭಾಗವಾದ ಎಪಿಕ್ ಕಾರ್ಡ್‍ನ ಮುದ್ರಣ ಹಾಗೂ ವಿತರಣೆ, ಮತಗಟ್ಟೆಗಳು, ಮತಯಂತ್ರಗಳ ತರಬೇತಿ, ನಾಮನಿರ್ದೇಶನದ ಪ್ರಕ್ರಿಯೆ, ಮಾದರಿ ನೀತಿ ಸಂಹಿತೆ ಹಾಗೂ ಕಾನೂನು ಸುವ್ಯವಸ್ಥೆ ಅನುಷ್ಠಾನ ಮತಚೀಟಿಗಳ ವಿತರಣೆ, ಮತದಾನದ ದಿನದ ಪೂರ್ವ ತಯಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಒಟ್ಟು 22,3088 ಮತದಾರರಿದ್ದು ಒಟ್ಟು 260 ಮತಗಟ್ಟೆಗಳಲ್ಲಿ ದಿನಾಂಕ 10-5-2023 ರಂದು ಚುನಾವಣೆ ನಡೆಯಲಿದೆ ಅದರಲ್ಲಿ 130 ವೆಬ್ ಕಾಸ್ಟಿಂಗ್ ಮತಗಟ್ಟೆಗಳು ಇರುತ್ತವೆ ಎಂದು ಚುನಾವಣಾ ಅಧಿಕಾರಿ ರಾಜಶೇಖರ ಬಿಜಾಪುರ ತಿಳಿಸಿದರು
ಮತಕ್ಷೇತ್ರದ ವ್ಯಾಪ್ತಿಯಲ್ಲಿ 22 ಸೆಕ್ಟರ್ ಅಧಿಕಾರಿಗಳು, 09 ಎಫ್, ಎಸ್, ಟಿ 03 ವಿಎಸ್,ಟಿ ಮತ್ತು 02 ಚೆಕ್ ಪೆÇೀಸ್ಟ್ ತಂಡಗಳು ಕಾರ್ಯನಿರ್ವಹಿಸುತ್ತವೆ, ಸಾರ್ವಜನಿಕರ ಗಮನಕ್ಕೆ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ಸಂಪರ್ಕಿಸಲು ಕೋರಿದರು
ಆಯೋಗದ ಎಲ್ಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸ ಬೇಕು ಹಾಗೂ ಜಾಗೃತ ಮತದಾರರು ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಸೂಚಿಸಿದರು.