ಚುನಾವಣಾ ಅಕ್ರಮಕ್ಕೆ ಕಣ್ಗಾವಲು-ಮತದಾರರ ಅನುಕೂಲಕ್ಕೆ ದೂರು ನಿರ್ವಹಣಾ-ಸಹಾಯವಾಣಿ ಕೇಂದ್ರ

ವಿಜಯಪುರ:ಮಾ.30: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‍ಗಳ ಸ್ಥಾಪನೆ, ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ದೂರುಗಳಿಗಾಗಿ ದೂರು ನಿರ್ವಹಣಾ ಕೋಶ, ಮತದಾರರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 27 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 11 ಅಂತರರಾಜ್ಯ ಹಾಗೂ 16 ಅಂತರ ಜಿಲ್ಲಾ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 2 ಅಂತರ ಜಿಲ್ಲಾ, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1 ಅಂತರ ಜಿಲ್ಲಾ, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 2, ಬಬಲೇಶ್ವರ ಮತಕ್ಷೇತ್ರದಲ್ಲಿ 3 ಅಂತರ ಜಿಲ್ಲಾ ಹಾಗೂ 4 ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.
ಅದರಂತೆ ಬಿಜಾಪುರ ನಗರ ಮತಕ್ಷೇತ್ರದಲ್ಲಿ 3 ಅಂತರ ಜಿಲ್ಲಾ, ನಾಗಠಾಣ ಮತಕ್ಷೇತ್ರದಲ್ಲಿ 1 ಅಂತರ ಜಿಲ್ಲಾ ಹಾಗೂ 6 ಅಂತರ್ ರಾಜ್ಯ, ಇಂಡಿ ಮತಕ್ಷೇತ್ರದಲ್ಲಿ 1 ಅಂತರ ಜಿಲ್ಲಾ ಹಾಗೂ 1 ಅಂತರ್ ರಾಜ್ಯ ಚೆಕ್‍ಪೋಸ್ಟ್ ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 3 ಅಂತರ್ ಜಿಲ್ಲಾ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳ ವಿವರ : ಈವರೆಗೆ ಜಿಲ್ಲೆಯಾದ್ಯಂತ ಅಕ್ರಮವಾಗಿ ಸಾಗಿಸಲಾಗುತ್ತಿರುವ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 12 ಲಕ್ಷ ರೂ, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 20.94 ಲಕ್ಷ ರೂ., ಬಬಲೇಶ್ವರ ಮತಕ್ಷೇತ್ರದಲ್ಲಿ 23.10 ಲಕ್ಷ ರೂ., ಬಿಜಾಪುರ ನಗರ ಮತಕ್ಷೇತ್ರದಲ್ಲಿ 49.46 ಲಕ್ಷ ರೂ., ನಾಗಠಾಣ ಮತಕ್ಷೇತ್ರದಲ್ಲಿ 81.23 ಲಕ್ಷ ರೂ., ಇಂಡಿ ಮತಕ್ಷೇತ್ರದಲ್ಲಿ 48.42 ಲಕ್ಷ ರೂ. ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 11 ಲಕ್ಷ ರೂ. ಸೇರಿದಂತೆ 2,46,17,540 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 61.420 ಲೀ., ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 291.07 ಲೀ., ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 262.98 ಲೀ., ಬಬಲೇಶ್ವರ ಮತಕ್ಷೇತ್ರದಲ್ಲಿ 238.76 ಲೀ., ಬಿಜಾಪುರ ನಗರ ಮತಕ್ಷೇತ್ರದಲ್ಲಿ 194.25 ಲೀ., ನಾಗಠಾಣ ಮತಕ್ಷೇತ್ರದಲ್ಲಿ 9476.56 ಲೀ., ಇಂಡಿ ಮತಕ್ಷೇತ್ರದಲ್ಲಿ 225.64 ಲೀ, ಸಿಂದಗಿ ಮತಕ್ಷೇತ್ರದಲ್ಲಿ 478.58 ಲೀ. ಸೇರಿದಂತೆ ಜಿಲ್ಲೆಯಾದ್ಯಂತೆ ಒಟ್ಟು 12.731.8 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಬಿಜಾಪುರ ನಗರ ಮತಕ್ಷೇತ್ರದಲ್ಲಿ 2.028 ಕೆ.ಜಿ., ಇಂಡಿ ಮತಕ್ಷೇತ್ರದಲ್ಲಿ 70.955 ಕೆ.ಜಿ., ಸಿಂದಗಿ ಮತಕ್ಷೇತ್ರದಲ್ಲಿ 0.906 ಕೆ.ಜಿ. ಸೇರಿದಂತೆ ಒಟ್ಟು 73.889 ಕೆ.ಜಿ. ಮಾದವಸ್ತುಗಳನ್ನು ಹಾಗೂ ಬಿಜಾಪುರ ನಗರ ಮತಕ್ಷೇತ್ರದಲ್ಲಿ 0.0603 ಬಂಗಾರ 10.525 ಬೆಳ್ಳಿ, ನಾಗಠಾಣ ಮತಕ್ಷೇತ್ರದಲ್ಲಿ 0.084, ಸಿಂದಗಿ ಮತಕ್ಷೇತ್ರದಲ್ಲಿ 34.95 ಬಂಗಾರ 2.1 68 ಬೆಳ್ಳಿ ಸೇರಿದಂತೆ ಒಟ್ಟು 179.24 ಗ್ರಾಂ ಬಂಗಾರ ಹಾಗೂ 12.693 ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 3.8 ಕೋಟಿ, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1 ಲಕ್ಷ, ಬಬಲೇಶ್ವರ ಮತಕ್ಷೇತ್ರದಲ್ಲಿ 15.96 ಲಕ್ಷ, ಬಿಜಾಪುರ ನಗರ ಮತಕ್ಷೇತ್ರದಲ್ಲಿ 5.89 ಲಕ್ಷ, ನಾಗಠಾಣ ಮತಕ್ಷೇತ್ರದಲ್ಲಿ 12.15 ಲಕ್ಷ, ಸಿಂದಗಿ ಮತಕ್ಷೇತ್ರದಲ್ಲಿ 7.35 ಲಕ್ಷ ರೂ. ಸೇರಿದಂತೆ ಜಿಲ್ಲೆಯಾದ್ಯಂತೆ ಒಟ್ಟು 3.51,14,916 ರೂ. ಮೊತ್ತದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ 2,46,17,540 ರೂ. ನಗದು, 12,731.8 ಲೀಟರ್ ಮದ್ಯ, 73.889 ಕೆ.ಜಿ. ಮಾದಕ ವಸ್ತುಗಳು, 179.24 ಗ್ರಾಂ.12.693 ಕೆ.ಜಿ. ಬೆಳ್ಳಿ, 3,51,14,916 ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 7,08,58,017.42 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೂರು ನಿರ್ವಹಣಾ ಕೋಶ : ಜಿಲ್ಲಾ ಹಂತದಲ್ಲಿ ಹಾಗೂ ವಿಧಾನಸಭಾ ಮತಕ್ಷೇತ್ರವಾರು ದೂರು ನಿರ್ವಹಣಾ ಕೋಶವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಚುನಾವಣಾ ವಿಷಯದ ಕುರಿತು ದೂರು ಸಲ್ಲಿಸಲು ತೋಟಗಾರಿಕೆ ಇಲಾಖೆ ಉಪನಿರ್ದೇಶ ಸಿದ್ರಾಮಯ್ಯ ಬರಗಿಮಠ (ಮೊ:9448999232) ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಹಂತದ ದೂರು ನಿರ್ವಹನಾ ಕೋಶ ಸಂಖ್ಯೆ : 08352-22122, 222101, 221261 ಸಂಖ್ಯೆಗೆ ದೂರು ಸಲ್ಲಿಸಬಹುದಾಗಿದೆ.
ಮತದಾರ ಸಹಾಯವಾಣಿ : ಮತದಾರರ ಅನುಕೂಲಕ್ಕಾಗಿ ಜಿಲ್ಲಾ ಹಂತದಲ್ಲಿ ಸಹಾಯವಾಣಿ ಕೇಂದ್ರ 1950 (ಟೋಲ್ ಫ್ರಿ) ಸ್ಥಾಪಿಸಲಾಗಿದೆ.
ಸಿ-ವಿಜಿಲ್ : ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹ ಸಿ-ವಿಜಿಲ್ (ಪಬ್ಲಿಕ್ ಆಪ್) ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಸಿ-ವಿಜಿಲ್ ಆಪ್ ಮೂಲ ದೂರು ಸಲ್ಲಿಸಬಹುದಾಗಿದ್ದು, ದೂರುಗಳನ್ನು ದೂರುದಾರರು ಸಲ್ಲಿಸಿದ ಸ್ಥಳದ ಸಮೀಪದಲ್ಲಿರುವ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ರವಾನಿಸಿ ಕೂಡಲೇ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
0 ವರ್ಷ ಮೇಲ್ಪಟ್ಟ ಮತದಾರರು : ಪ್ರಸ್ತುತ ಜಿಲ್ಲೆಯಲ್ಲಿ ಇ.ಆರ್.ಓ.ನೆಟ್ ತಂತ್ರಾಶದ ಪ್ರಕಾರ ಒಟ್ಟು 38,727 ಜನ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ 20295 ವಿಶೇಷ ಚೇತನ ಮತದಾರರಿದ್ದಾರೆ. ಅಂಚೆ ಮತ ಪತ್ರ ವಿತರಿಸುವ ಕುರಿತಂತೆ ಭಾರತ ಚುನಾವಣಾ ಆಯೋಗ ನಿಡುವ ನಿರ್ದೇಶನಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಈ ಕುರಿತು ನೋಡಲ್ ಅಧಿಕಾರಿಗಳಾಗಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಅಶೋಕ ಕಲಘಟಗಿ (ಮೊ:9449027183) ಅವರನ್ನು ನೇಮಿಸಲಾಗಿದೆ.