ಚುನಾಯಿತ ಪ್ರತಿನಿಧಿಗಳಿಗೆ ಮುಖ್ಯಾಧಿಕಾರಿ ಅಗೌರವ – ಆಕ್ರೋಶ

ಲಿಂಗಸುಗೂರು.ಏ.೨೬-ಪುರಸಭೆಗೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ನೇತೃತ್ವದಲ್ಲಿ ಸಿಬ್ಬಂದಿ ಚುನಾಯಿತ ಪ್ರತಿನಿಧಿಗಳಿಗೆ ಅಗೌರವ ತೋರುತ್ತಿರುವ ಬಗ್ಗೆ ಅಧ್ಯಕ್ಷ, ಉಪಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಾಧಿಕಾರಿಗಳಾಗಿ ಅಗಮಿಸಿದ ದಿನದಿಂದ ಈದಿನದವರೆಗೆ ಆಡಳಿತ ಮಂಡಳಿಯನ್ನು ವಿಶ್ವಾಸಕ್ಜೆ ಪಡೆಯದೆ ತುಗಲಕ್ ದರ್ಬಾರ ನಡೆಸಿದ್ದಾರೆ. ಇವರ ದುರಾಡಳಿತಕ್ಕೆ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ಯಾಮೀಲು ಆಗಿದ್ದಾರೆ.
ಬೆಳಿಗ್ಗೆ ೮ಕ್ಕೆ ಬರಬೇಕಾದ ಸಿಬ್ಬಂದಿ ೧೦-೩೦ರ ನಂತರವೆ ಬರುತ್ತಾರೆ. ಹೆಳೋರು, ಕೆಳೋರು ಯಾರು ಇಲ್ಲದಾಗಿದೆ ಎಂದು ಅಸಮಾಧಾನಗಗೊಂಡ ಸದಸ್ಯರು ಹಾಜರಾತಿ ಪುಸ್ತಕದಲ್ಲಿ ಗೈರು ಹಾಜರಿ ಹಾಕಿದ್ದು ಕಂಡು ಬಂತು.
ಕುಡಿಯುವನೀರಿನ ತುರ್ತು ಸಭೆ ಕರೆಯಲು ಹೇಳಿದರು. ಕೂಡ ಕ್ಯಾರೆ ಎನ್ನುತ್ತಿಲ್ಲ. ಕುಡಿಯುವ ನೀರು, ನಿರ್ವಹಣೆ ಹೆಸರಲ್ಲಿ ಹಾಗೂ ಸಂತೆ ತೆರಿಗೆ ಹೆರಸಲ್ಲಿ ಹಗಲು ಧರೋಡೆ ನಡೆಸಿದ್ದಾರೆ.
ಈ ಎಲ್ಲ ವಿಷಯಗಳ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಗೊಂಡ ಆಡಳಿತ ಮಂಡಳಿ ವಿಶ್ವಾಸದೊಂದಿಗೆ ಆಡಳಿತ ನಡೆಸಬೇಕು. ಆದರೆ ಇಲ್ಲಿನ ಮುಖ್ಯಾಧಿಕಾರಿ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅವಮಾನ ಮಾಡುತ್ತ ಏಕತರ್ಫಿ ನಿರ್ಣಯ ಕೈಗೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸುದರು.
ಮುಖ್ಯಾಧಿಕಾರಿ, ಸಿಬ್ಬಂದಿ ತುಗಲಕ್ ದರ್ಬಾರ ಆಡಳಿತದಿಂದ ಬೇಸತ್ತಿದ್ದೇವೆ. ಶೀಘ್ರದಲ್ಲಿಯೆ ಪುರಸಭೆಗೆ ಬೀಗ ಜಡಿದು ಬಯಲಲ್ಲಿ ಆಡಳಿತ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ ಎಚ್ಚರಿಕೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಮಾತನಾಡಿ, ಮುಖ್ಯಾಧಿಕಾರಿ ದುರ್ವರ್ತನೆ, ಅಡಳಿತ ಮಂಡಳಿಗೆ ಅಗೌರವ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯಮನಪ್ಪ ದೆಗುಲಮರಡಿ, ಬಸವರಾಜ ಯತಗಲ್ ಸೇರಿದಂತೆ ಪುರಸಭೆ ಸದಸ್ಯರು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.