
ಮಾನ್ವಿ ಆ ೨೯ :- ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತಿ ಹಾಗೂ ಒಂದೇ ಮಾತರಂ ಯುವ ಸಂಘದ ನೇತೃತ್ವದಲ್ಲಿ ಸಮಾಜ ಸೇವೆಯಲ್ಲಿ ಪುರಸ್ಕೃತರಾದ ಅಶೋಕ ತಡಕಲ್, ರವಿಶರ್ಮ ಜಾನೇಕಲ್, ಶಿವಕುಮಾರ್ ಸಜ್ಜನ್, ಕೆ ಎಂ ಬಾಷ, ಅಗ್ನಿಶಾಮಕ ರಾಜಾಸಾಬ್, ದೇವಣ್ಣ ಭಜಂತ್ರಿ ಇವರಿಗೆ ಸನ್ಮಾನಿಸಿದರು.
ಪಟ್ಟಣದ ಶಾಸಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೆಬೂಬ್ ಮದ್ಲಾಪೂರ, ಹಾಗೂ ಸಬ್ಜಲಿ ಸಾಬ್ ಇವರು ವಿಶೇಷ ಉಪನ್ಯಾಸವನ್ನು ನೀಡಿದರು, ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೈಯಾದ್ ತಾಜ್ಜುದ್ದೀನ್ ಸೇರಿದಂತೆ ಅನೇಕರು ಇದ್ದರು.