ಚುಟುಕು ಸಾಹಿತ್ಯ ಪರಿಷತ್ತಿನಿಂದ ಕೆ.ಸಿ.ಚರಣ್‌ಗೆ ಸನ್ಮಾನ

ಕೋಲಾರ,ಮೇ,೨೮-ಮನುಷ್ಯ ಹೆಚ್ಚು ವಿದ್ಯಾವಂತನಾಗುತ್ತ ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾನೆ, ಇಂದಿನ ಯುವ ಜನಾಂಗಕ್ಕೆ ಜೀವನದ ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಶಿಕ್ಷಣ ದೊರೆಯುತ್ತಿದೆ, ನಾವೂ ಬದುಕಿ, ಇತರರನ್ನೂ ಬದುಕಿಸುವಂತಹ ಮಾನವೀಯತೆಯನ್ನು ಆಳವಡಿಸಿ ಕೊಳ್ಳುವಂತ ಮನಸ್ಥಿತಿ ಎಲ್ಲರಲ್ಲೂ ಬರುವಂತಾಗ ಬೇಕೆಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.
ನಗರದ ಕುರುಬರಪೇಟೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕೇಂದ್ರದಲ್ಲಿ ಸರ್ಕಾರಿ ಶಾಲೆ (ಜೂನಿಯರ್ ಕಾಲೇಜ್) ಕನ್ನಡ ಮಾದ್ಯಮದಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ.ಚರಣ್‌ರನ್ನು ಸನ್ಮಾನಿಸಿ ಮಾತನಾಡಿ, ಕೇವಲ ಅಂಕ ಗಳಿಕೆಗಾಗಿ ಅಲ್ಲದೆಯೇ ಜ್ಞಾನ ಗಳಿಕೆಗಾಗಿ ಓದಬೇಕು, ಈ ಮೂಲಕ ವಿದ್ಯಾರ್ಥಿಗಳು ವಿದ್ಯಾವಂತರಾಗಿಯೂ ಜ್ಞಾನವಂತರಾಗಿಯೂ ಸಾಧನೆ ಮಾಡುವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಎಎಸ್‌ಐ ಕೆ.ಎನ್.ರವೀಂದ್ರನಾಥ್,, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, , ಬೆಮೆಲ್ ಶ್ರೀನಿವಾಸ್, ಸಮಾಜ ಸೇವಕ ಆನಂದ್ ರೆಡ್ಡಿ, ಕುಡಾ ಮಾಜಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಡಾ.ಪೋಸ್ಟ್ ನಾರಾಯಣಸ್ವಾಮಿ, , ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸದಸ್ಯರಾದ ಉಪನ್ಯಾಸಕ ಶರಣಪ್ಪ ಗಬ್ಬೂರು, ಗೌರಿಪೇಟೆ ವೆಂಕಟೇಶ್ ಮೂರ್ತಿ, ಆನಂದ್, ವೀರಾಪುರ ಮಂಜುನಾಥ್ ಪೋಷಕರಾದ ಪತ್ರಕರ್ತ ಚಂದ್ರು, ರಮ್ಯಾ, ಅಂಚೆ ವಿಜಯ್ ಇದ್ದರು.