ಚುಟುಕು ಸಾಹಿತ್ಯಕ್ಕೆ ಬೀದರನಲ್ಲಿ ಮನ್ನಣೆ

ಬೀದರ:ಡಿ.21: ಬೀದರ ಜಿಲ್ಲಾ ಮತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಎಲೆಮರೆ ಕಾಯಿಯಂತರಿರುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸಮಾಜದಲ್ಲಿ ಒಂದು ವಿನೂತನ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರಿಗೆ ಅವರ ಪ್ರತಿಭೆಯ ಬೆಳಕು ಚೆಲ್ಲುತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಹಿರಿಯ ಕಾದಂಬರಿಗಾರ್ತಿ ಶ್ರೀಮತಿ ಸಾಧನಾ ರಂಜೋಳಕರ್ ಅವರು ನುಡಿದರು

ಅವರು ದಿನಾಂಕ 19-12-2020 ರಂದು ಬೀದರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮತಿ ಪುಪಾ ಕನಕ ಜಿ. ಅವರ ಮನೆಯಲ್ಲಿ ಆಯೋಜಿಸಿದ ‘ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ಅವರು ಮಾತನಾಡಿ, ಕರೋನಾ ಹಾವಳಿಯ ಇಂತಃ ಸಂದರ್ಭದಲ್ಲಿ ಹೆಚ್ಚು ಜನಜಂಗುಳಿ ಜಮಾಯಿಸದೇ ಸಾಮಾಜಿಕ ಅಂತರ ಮತ್ತು ಆರೋಗ್ಯದ ಹಿತದೃಷ್ಠಿಯಿಂದ ಫೇಸ್‍ಬುಕ್ ಲೈವ್ ಕಾರ್ಯಕ್ರಮದ ಮೂಲಕ ಸಾಹಿತಿಗಳ ಬದುಕು ಮತ್ತು ಬರಗವನ್ನು ‘ಮನೆಯಂಗಳದಲ್ಲಿ ಮಾತು ಕಾರ್ಯಕಮದ’ ಮೂಲಕ ಬಿತ್ತರಿಸಲಗುತ್ತಿದೆ. ಹಾಗೂ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 50 ವರ್ಷಗಳ ಈ ಸುವರ್ಣ ಮಹೋತ್ಸವ ಕಾರ್ಯಕಮ್ರದಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುತಿದೆ ಎಂದರು.

ಕಾರ್ಯಕ್ರಮದ ಕೇಂದ್ರಬಿಂದು ಹಾಗೂ ಚುಟುಕು ಸಾಹಿತಿಯಾದ ಶ್ರೀಮತಿ ಪುಷ್ಪಾ ಜಿ. ಕನಕ ಅವರು ಮಾತನಾಡಿ ಶ್ರೀಮತಿ ಶಾಂತಾಬಾಯಿ ಶ್ರೀ ಸಿದ್ದಪ್ಪ ಗುನ್ನಾ ದಂಪತಿಗಳ ಉದರದಲ್ಲಿ ಹಳ್ಳಿಖೇಡದಲ್ಲಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣ ಸಂತಪುರದಲ್ಲಿ ಹಾಗೂ ಬಸವಕಲ್ಯಾಣದಲ್ಲಿ ಮುಗಿಸಿದ್ದು, ಬೀದರನಲ್ಲಿ ಡಿಗ್ರಿ ಮುಗಿಸಿದ್ದು 1989 ರಲ್ಲಿ ದುಬಲಗುಂಡಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತಿರುವಾಗ ಒಬ್ಬ ಪ್ರೌಢಶಾಲಾ ಶಿಕ್ಷಕರು ಪುಸ್ತಕ ಮಾಡುತಿರುವೆವು ನಿಮ್ಮ ಕವಿತೆ ನೀಡಿ ಎಂದು ಕೇಳಿದರು. ಅಂದು ನಾ ಬರೆದ ಕವನ ಪ್ರಥಮ ಪುಸ್ತಕದಲ್ಲಿ ಮತ್ತು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಕಂಡಾಗ ನನಗೆ ಅಪಾರ ಸಂತಸವಾಗಿತ್ತು. ನಾನು 8ನೇ ಕ್ಲಾಸಿನಲ್ಲಿರುವಾಗಲೆ ನನ್ನ ಬರವಣಿಗೆ ಆರಂಭಗೊಂಡಿದೆ. ನನ್ನ ಸಾಹಿತ್ಯಕ್ಕೆ ಧನಶ್ರೀ ಮಾಣಿಕರಾವ ಅವರು ಪ್ರೇರಣೆಯಾಗಿದ್ದರು ಎಂದರು.

ಸೇಡೋಳ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಂತರೆಡ್ಡಿ ಜಂಪಾ ಅವರ ನೇತೃತ್ವಲ್ಲಿ ಅವಕಾಶ ಸಿಕ್ಕಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲು ಅನುಕೂಲವಾಯಿತು. ಗುಂಡಪ್ಪ ಕನಕ ಅವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಮೇಲೆ ನನ್ನ ಪತಿ ನನ್ನ ಸಾಹಿತ್ಯಕ್ಕೆ ನೀರೇರೆದು ಪೋಷಿಸಿದರು. ನನ್ನೆಲ್ಲಾ ಸಾಹಿತ್ಯಿಕ ಕಾರ್ಯಚಟುವಟಿಕೆಗಳಿಗೆ ಸ್ಪೂರ್ತಿ ನೀಡುತ್ತ ಸದಾ ನನ್ನ ಬೆನ್ನಿಗೆ ಪತಿ ಗುಂಡಪ್ಪ ನಿಂತಿರುವುದರಿಂದಲೇ ನಾನು ಇಷೊಂದು ಸಾಹಿತ್ಯ ರಚನೆ ಮಾಡಲು ಕಾರಣವಾಯಿತು ಎಂದರು. ಬೀದರಿಗೆ ಬಂದು ನೆಲೆಸಿದಾಗ ದೇಶಾಂಶ ಹುಡುಗಿ, ಶಂಭುಲಿಂಗ ವಾಲ್ದೊಡ್ಡಿ, ಶಿರೋಮಣಿ ತಾರೆ, ಹಂಶಕವಿ, ಇಂದುಮತಿ ಬಂಡಿ, ಡಾ. ಎಂ. ಜಿ. ದೇಶಪಾಂಡೆ ಮತಿತ್ತರರ ಹಿರಿಯರ ಮಾರ್ಗದರ್ಶನ ಮತ್ತು ಸಂಪರ್ಕದಿಂದಾಗಿ ಧರಿನಾಡು ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವೆ ಎಂದರು. 2018 ರಲ್ಲಿ ಚಂಢಿಘಡದಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವೆ. ವಚನ 2008 ರಲ್ಲಿ ‘ವಚನ ಸುಮ’, 2013 ರಲ್ಲಿ ‘ಪುಟಾಣಿ ಬಯಕೆ’, 2017 ರಲ್ಲಿ ‘ಹನಿ ಮಂಜರಿ’, ಪುಸ್ತಕಗಳು ಸಾಹಿತ್ಯಲೋಕಕ್ಕೆ ಅರ್ಪಿತಗೊಂಡಿವೆ. ಎಂದು ಸಂತಸ ವ್ಯಕ್ತಪಡಿಸಿದರು. ವಿಶೆಷವಾಗಿ ಚುಟುಕು ಸಾಹಿತ್ಯಕ್ಕೆ ನಾನು ಹೆಚಿನ್ಚ ಒಲವು ತೋರಿರುವೆ. ಇದರಿಂದ ನನಗೆ ಸಾಹಿತಿ ಮತ್ತು ಪ್ರೇೀಕ್ಷಕರಿಂದ ಸ್ಪೂರ್ತಿ ದೊರಕಿದೆ ಎಂದು ಹೇಳತ್ತಾ,

ಜೀವನದ ಅಳತೆಪಟ್ಟಿ

ಸರಿಯಾಗಿದ್ದರೆ ಬಾಳಲ್ಲಿ

ಮೂಡುವುದು ಸರಳ ರೇಖೆ,

  • ತಂದೆ ಎಂಬ ಕೈವಾರ ಗಟ್ಟಿಯಾಗಿರದಿದ್ದರೆ

ಮನೆಯೆಂಬ ವೃತ್ತ ಅಂಕು-ಡೊಂಕಾಗುವುದು

ಹೆಂಡಿತೊಬ್ಬಳು ಕೋನಮಾಪಕ

ಗಂಡನು ಬಂದಾಗ ಲಂಬಕೋನ

ಅವರ ಮನೆಯವರು ಬಂದಾಗ ಲಘೂಕೋನ

ತವರೂರಿನವರು ಬಂದಾಗ ವಿಶಾಲ ಕೋನ

ಹೀಗಿರುವುದು ಅವಳ ದೃಷ್ಟಿಕೋನ

ಆನರ ಮೆಚ್ಚಿನ ಮಂತ್ರಿ

ಶಾಸಕರಾಗಿ ಕುಂತ್ರಿ

ಬಿಡ್ರಿ ಬುದ್ದಿ ಕಂತ್ರಿ

ಹಾಳ ಮಾಡಬ್ಯಾಡ್ರಿ ಕಂಟ್ರಿ ಹೀಗೆ ತಮ್ಮ ಚುಟುಕುಗಳನ್ನು ಹೇಳುತ್ತಾ ಹಾಸ್ಯದಲ್ಲಿಯೇ ಉತ್ತಮ ಸಂದೇಶ ರವಾನಿಸಿದರು.

¸ಂುವಾದಕರಾಗಿ ರೇಣುಕ ಮಠ ಅವರು ಆಗಮಿಸಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಸಾಹಿತಿಗಳಲಿ ವಿಶಾಲ ಮನೋಭಾವನೆಯಿರಬೇಕು ಹೆಸರಿದ್ದರೆ ಮಾತ್ರ ಕಾರ್ಯಕ್ರಮಕ್ಕೆ ಬರುತ್ತಾರೆ. ಈ ಸಂಸ್ಕøತಿ ಬದಲಾಗಬೇಕು ಎಂದು ಅವರ ಪ್ರಶ್ನೆಗಳಿಗೆ ಪುಷ್ಪಾ ಜಿ. ಕನಕ ಅವರು ಉತ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಎಸ್. ಮನೋಹರ ಅವರು ಮಾತನಾಡಿದರು. ಬೀದರ ತಾಲ್ಲೂಕಾ ಕಸಾಪ ಗೌರವ ಕಾರ್ಯದರ್ಶಿ ಕಲ್ಯಾಣರಾವ ಚಳಕಾಪುರೆ ನಿರೂಪಿಸಿದರೆ ಮೇನುಕಾ ಪಾಟೀಲ್ ಸ್ವಾಗತಿಸಿದರು. ಕೊನೆಯಲ್ಲಿ ಶಿವಕುಮಾರ ಚನಶೆಟ್ಟಿ ವಂದಿಸಿದರು. ಗುಂಡಪ್ಪಾ ಕನಕ, ವೀರೇಶ್ವರಿ ಮೂಲಗೆ, ಶ್ವೇತಾ ಕನಕ, ಸುಮಿತ ಕನಕ, ರತ್ನಮ್ಮ, ಮಂಗಲಾ ಚನಶೆಟ್ಟಿ, ಮಂಗಲಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.