ಚುಟುಕು ಸಮ್ಮೇಳನ ಅಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ

ಕೋಲಾರ ಜ,೧೩-ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ ೧೮ ಭಾನುವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದು, ಸಮ್ಮೇಳನ ಅಧ್ಯಕ್ಷರಾಗಿ’ ಶಿಕ್ಷಕರ ಮುಖಂಡ ಜಿ. ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ನಾರಾಯಣಪ್ಪ ಪ್ರಕಟಿಸಿದರು.
ನಗರದ ಕುರುಬರಪೇಟೆಯ ಪರಿಷತ್ ಕಾರ್ಯಾಲಯದಲ್ಲಿ ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ನಡೆದಿದ್ದು, ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ಪರಿಷತ್ ಮಾಜಿ ಜಿಲ್ಲಾ ಅಧ್ಯಕ್ಷರು ಆಗಿರುವ ಶ್ರೀಯುತರ ಗಣನೀಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಬೆಳ್ಳಿ ಹಬ್ಬ ನೆನಪನ್ನು ಮತ್ತಷ ಅರ್ಥಪೂರ್ಣಗೊಳಿಸಲು, ಚುಟುಕು ಕವಿಗೋಷ್ಠಿ, ವಿಚಾರಗೋಷ್ಠಿ, ಧ್ವಜಾರೋಹಣ, ಉದ್ಘಾಟನೆ, ಸಾಧಕರಿಗೆ ಸನ್ಮಾನ, ಸಮಾರೋಪ ಕಾರ್ಯಕ್ರಮಗಳ ಮೂಲಕ ಚುಟುಕು ಸಾಹಿತ್ಯ ಮತ್ತಷ ಶ್ರೀಮಂತ ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಿಲ್ಲೆ ಮತ್ತು ರಾಜ್ಯದ ಚುಟುಕು ಕವಿಗಳಿಗೆ ಅವಕಾಶ ಕಲ್ಪಿಸಿ, ಸಾಹಿತ್ಯವನ್ನು ಪಸರಿಸುವ ಈ ಮಹತ್ವಪೂರ್ಣ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಲು ಅವರು ಮನವಿ ಮಾಡಿದರು. ಪರಿಷತ್ತಿನ ಪದಾಧಿಕಾರಿಗಳಾದ ಅಪ್ಪಿ ನಾರಾಯಣಸ್ವಾಮಿ, ಕೋ.ನ ಪರಮೇಶ್ವರ, ಬಿ ಶಿವಕುಮಾರ್, ಇ.ಸಿ.ಓ ಕೆ. ಶ್ರೀನಿವಾಸ್, ರವೀಂದ್ರ ಸಿಂಗ್, ಟಿ ಸುಬ್ಬರಾಮಯ್ಯ, ಡಾ. ಶರಣಪ್ಪ ಗಬ್ಬೂರು, ಪೋಸ್ಟ್ ನಾರಾಯಣಸ್ವಾಮಿ, ಚಿಟ್ನಹಳ್ಳಿ ರಾಮಚಂದ್ರ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಪ್ರಾಧ್ಯಾಪಕರಾದ ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.