ಚುಂಚಶ್ರೀಗೆ ಅಪಮಾನ ಹೇಳಿಕೆ: ನಗರದಲ್ಲಿ ಒಕ್ಕಲಿಗರ ಆಕ್ರೋಶ

ಮೈಸೂರು: ಮಾ.25:- ಚುಂಚಶ್ರೀಗಳಿಗೆ ಅಪಮಾನವ ಆಗುವ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂದು ಆರೋಪಿಸಿ ಮೈಸೂರಿನಲ್ಲಿ ಶುಕ್ರವಾರ ವಿವಿಧ ಒಕ್ಕಲಿಗ ಸಮುದಾಯದ ನಾಯಕರು ನಾನಾ ರೀತಿಯಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮೈಸೂರಿನ ಅಡ್ಡಂಡ ಕಾರ್ಯಪ್ಪ ನಿನ್ನೆ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಚುಂಚಶ್ರೀಗಳ ಹೆಸರು ಪ್ರಸ್ತಾಪಿಸಿ ಚುಂಚಶ್ರೀಗಳು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಇತರರಿಗೆ ಅಲ್ಲ. ಹಾಗೆಯೇ ಉರಿಗೌಡ, ನಂಜೇಗೌಡ ವಿಚಾರವಾಗಿಯೂ ಮತ್ತಷ್ಟು ಸಂಶೋಧನೆ ಸ್ಚಾಮೀಜಿ ನಡೆಸಲಿ ಎಂಬಿತ್ಯಾದಿ ಮಾತುಗಳನ್ನಾಡಿದ್ದರು. ಈ ಹಿನ್ನಲೆಯಲ್ಲಿ ಇಂದು ಈ ಬಗ್ಗೆ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ನನ್ನೂರು ನಮ್ಮೋರು ಟ್ರಸ್ಟ್ ಇನ್ನಿತರ ಸಂಘಟನೆಯ ನಾಯಕರ ರಂಗಾಯಣಕ್ಕೆ ಪ್ರವೇಶಿಸಿ ಅವರೊಟ್ಟಿಗೆ ಚರ್ಚಿಸಲು ಮುಂದಾದರು. ಇದೇ ವೇಳೆ ಅವರನ್ನು ಗೇಟ್‍ನಲ್ಲೇ ತಡೆದ ಪೆÇಲೀಸರು ಬಂಧಿಸಿ ಸಂಜೆಗೆ ಬಿಡುಗಡೆಗೊಳಿಸಿದರು. ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಪ್ರಶಾಂತ್ ಗೌಡ, ಗಿರೀಶ್‍ಗೌಡ, ನಾಗಣ್ಣ, ಒಂಟಿಕೊಪ್ಪಲು ರವಿ, ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ, ಸಂಘದ ಮಾಜಿ ನಿರ್ದೇಶಕ ಶ್ರೀನಿವಾಸ್, ಅಭಿಷೇಕ್, ಹರೀಶ್‍ಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮೊದಲಾದವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಚಪ್ಪಲಿ ಏಟು: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅಡ್ಡಂಡ ಕಾರ್ಯಪ್ಪ ಭಾವಚಿತ್ರಕ್ಕೆ ಚಪ್ಪಲಿ ಎಟು ಪಡೆದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರನ್ನು ವಜಾ ಮಾಡದಿದ್ದರೆ ಮುಂದೆ ದೊಡ್ಡ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಮಂಜೇಗೌಡ, ಅನಿಲ್, ಗಿರೀಶ್ ಗೌಡ, ವಿಜಯನಗರ ಮಂಜು, ಹೇಮಾವತಿ, ನರಸಿಂಹೇಗೌಡ, ಸತೀಶ್ ಗೌಡ, ಕುಮಾರ್ ಗೌಡ, ರಾಜಕೀಯ ರವಿ, ದರ್ಶನ್ ಗೌಡ, ಆನಂದ್, ಶಿವಲಿಂಗಯ್ಯ, ಕೃಷ್ಣಯ್ಯ, ಪ್ರಭಾಕರ ಉಪಸ್ಥಿತರಿದ್ದರು.