ಚುಂಚಶ್ರೀಗಳು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ

ಮೈಸೂರು: ಮಾ.24:- ಒಕ್ಕಲಿಗ ಸಮುದಾಯಕ್ಕಾಗಿ ನಿರ್ಮಲಾನಂದ ಸ್ವಾಮೀಜಿ ಇದ್ದಾರೆ ಬೇರೆಯವರಿಗೆ ಆ ಸ್ವಾಮೀಜಿ ಅಲ್ಲ. ಉರಿಗೌಡ ಹಾಗೂ ನಂಜೇಗೌಡರ ಕುರಿತು ಇನ್ನಷ್ಟು ಸಂಶೋಧನೆ ಆಗಲಿ ಎಂದು ಸ್ವಾಮೀಜಿ ಹೇಳಲಿ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ಮೈಸೂರಿನಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉರಿಗೌಡ, ನಂಜೇಗೌಡರ ಕಾಲ್ಪನಿಕ ಚಿತ್ರಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವ ವೇಳೆ ಮೇಲೆ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಸ್ವಾಮೀಜಿ ಮಧ್ಯ ಪ್ರವೇಶ ಮಾಡಿದ್ದಾರೆ. ಏಕೆಂದರೆ ಅವರಿಗೆ ಅವರದೇ ಆದ ಸಮಸ್ಯೆ ಇದೆ. ಇಡೀ ಒಕ್ಕಲಿಗ ಸಮುದಾಯವನ್ನು ಒಂದಾಗಿ ಇಟ್ಟುಕೊಳ್ಳುವುದು ಅವರ ಕರ್ತವ್ಯವಾಗಿದೆ. ಅದನ್ನು ಅವರು ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಅವರನ್ನು ನಾನು ಶ್ಲಾಘಿಸುತ್ತೇನೆ. ಏಕೆಂದರೆ, ಆ ಸಮುದಾಯಕ್ಕೆ ಇರುವುದೇ ಆ ಸ್ವಾಮೀಜಿಯಾಗಿದ್ದು, ಬೇರೆಯವರಿಗೆ ಅಲ್ಲ ಎಂದರು.
ಏಕೆಂದರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದುಕೊಂಡು ಬಂದು ನೀ ಅವರಿಗೆ ಬೆಂಬಲ ಕೊಡಬೇಕಪ್ಪ, ಒಕ್ಕಲಿಗ ಮುಖ್ಯಮಂತ್ರಿ ಆಗುವುದೇ ಅಪರೂಪ. ನೀ ಅವರನ್ನು ಬೀಳಿಸುವುದು ಬೇಡ ಎಂದು ಸಂತೈಸುತ್ತಿದ್ದರು. ಆದರೆ, ಮತ್ತೆ ಕುರುಬರೂ ಇವರಿಗೆ ಬತ್ತಿ ಇಟ್ಟರು. ಸಿದ್ದರಾಮಯ್ಯ ಎನ್ನಬಹುದು. ಸಿದ್ದರಾಮಯ್ಯ ನಿರ್ಮಲಾನಂದ ಶ್ರೀ ಮಾತು ಕೇಳಲ್ಲ. ಯಾಕೆಂದರೆ ಅವರಿಗೆ ಬೇರೆ ಸ್ವಾಮೀಜಿ ಇದ್ದಾರೆ. ಇದೊಂದು ಜಾತಿ ರಾಜಕಾರಣದ ಪ್ರಸಂಗ. ಅದು ಅವರ ವಿಚಾರಕ್ಕೆ ಬಿಟ್ಟಿದ್ದಾಗಿದೆ. ಆದರೆ, ಒಕ್ಕಲಿಗರಲ್ಲಿ ಅಶ್ವಥ್‍ನಾರಾಯಣ್, ಸಿ.ಟಿ.ರವಿ, ಅಶೋಕ್ ಇದ್ದಾರೆ ಅಲ್ಲವೆ? ಸ್ವಾಮೀಜಿಗೆ ಎಲ್ಲರೂ ಒಂದೆ. ಅದಕ್ಕಾಗಿ ಇದನ್ನು ರಾಜಕೀಯಕ್ಕಾಗಿ ಬಳಸುವುದು ಬೇಡವೆಂದು ಇದನ್ನು ಪ್ರಸ್ತಾಪಿಸಬೇಡಿ ಎಂದು ಹೇಳಿರಬಹುದು. ಸ್ವಾಮೀಜಿಯವರು ಹೇಳಲಿ ಇದು ಇನ್ನಷ್ಟು ಸಂಶೋಧನೆ ಆಗಲಿ ಎಂದು, ಏಕೆಂದರೆ ಇಡೀ ಒಕ್ಕಲಿಗ ಸಮಾಜ ಟಿಪ್ಪುವಿನ ಪರ ಇರಲಿಲ್ಲ ಎಂದು ಹೇಳುವುದು ಅನೇಕ ವಿಚಾರಗಳಿಂದ ವ್ಯಕ್ತವಾಗುತ್ತದೆ ಎಂದರು.
ಹಾಗಂತ ಒಕ್ಕಲಿಗರು ಬ್ರಿಟಿಷರ ಪರವೂ ಇರಲಿಲ್ಲ. ಟಿಪ್ಪುವಿಗೆ ವಿರುದ್ಧವಾಗಿದ್ದರು ಎಂದೂ ಹೇಳಿದ್ದೇವೆ. ಅಷ್ಟೆ ಅಲ್ಲದೆ ಮರಾಠರು, ನಿಜಾಮರು, ಕೊಡವರು, ಕೇರಳದ ನಾಯ್ಡುಗಳು ಸಹ ಟಿಪ್ಪುವಿನ ವಿರುದ್ಧ ಇದ್ದರೂ ಇವೆರೆಲ್ಲಾ ದೇಶದ್ರೋಹಿಗಳಾ? ಮುಸ್ಲಿಮರು ಮಾತ್ರ ದೇಶ ಭಕ್ತರು ಎಂದರೆ ತಪ್ಪಾಗುತ್ತೇ. ಭಾಷೆ, ದೌರ್ಜನ್ಯ, ಮಂತಾತರ ಹಾಗೂ ದೇವಸ್ಥಾನ ದ್ವಂಸದ ಕಾರಣಕ್ಕಾಗಿ ಟಿಪ್ಪುವಿನ ವಿರೋಧಿಗಳಾದರು ಎಂದು ವಿವರಿಸಿದರು.
ತಮಿಳುನಾಡಿನ ಸ್ವಾತಂತ್ರ್ಯ ವೀರರ ಪೆÇೀಟೊವನ್ನು ಕಾಲ್ಪನಿಕವಾಗಿ ನಾಟಕಕ್ಕೆ ಉರಿಗೌಡ, ನಂಜೇಗೌಡರ ಹೆಸರಿನಲ್ಲಿ ಬಳಸಿದ್ದೇವೆ. ತಮಿಳುನಾಡಿನ ಇಬ್ಬರೂ ಸ್ವಾತಂತ್ರ್ಯ ಯೋಧರ ಸಾಮಾನ್ಯ ಸೈನಿಕರಂತೆ ಬಂದವರು ಬಳಿಕ ಟಿಪ್ಪು ಹತ್ಯೆ ಮಾಡಿದರೂ ಎಂಬುದಕ್ಕೆ ಡಾ.ಹಿಮ ಮುತ್ತಣ್ಣ ಕೃತಿಯಲ್ಲಿ ಉಲ್ಲೇಖವಿದೆ. ಉರಿಗೌಡ ಹಾಗೂ ನಂಜೇಗೌಡರು ಇದ್ದರೂ ಎಂಬುದಕ್ಕೆ ದಾಖಲೆಗಳಿವೆ. ಹತ್ಯೆ ಬಳಿಕ ಬ್ರಿಟಿಷರು ನಮ್ಮಿಂದಲೇ ಟಿಪ್ಪುವಿನ ಹತ್ಯೆ ಆಯಿತೆಂದು ಪ್ರಶಂಸೆ ಪಡೆದುಕೊಂಡರು. ಈ ವೇಳೆ ಈ ಇಬ್ಬರೂ ಪಲಾಯಾನ ಮಾಡುತ್ತಾರೆ. ಹತ್ತಾರು ವರ್ಷ ಮರೆಯಾಗಿರುತ್ತಾರೆಂಬುದಕ್ಕೆ ಎನ್.ಎಸ್.ದೇವಿಪ್ರಸಾದ್ ಅವರ ?ಅಮರ ಸುಳ್ಯ ದಂಗೆ? 1834ರಲ್ಲಿ ಬ್ರಿಟಿಷರ ಪಾರುಪತ್ಯದ ಕೃತಿಯಲ್ಲಿ ಉಲ್ಲೇಕವಿದೆ ಎಂದರು.