ಚೀಲೂರು ಗ್ರಾಮಪಂಚಾಯಿತಿಯ ನೂತನ ಸದಸ್ಯರಿಂದ ಶಾಸಕರಿಗೆ ಸನ್ಮಾನ

ಹೊನ್ನಾಳಿ.ಜ.೪;  ; ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 45 ಗ್ರಾಮಪಂಚಾಯಿತಿಗಳಲ್ಲಿ 35 ಕ್ಕೂ ಹೆಚ್ಚು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದು, ಎರಡು ಮೂರು ಪಂಚಾಯಿತಿಗಳು ಮಾತ್ರ ಅತಂತ್ರವಾಗಿದ್ದು ಅವುಗಳನ್ನು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಹೊನ್ನಾಳಿಯ ಶಾಸಕರ ನಿವಾಸಕ್ಕೆ ಗ್ರಾಮಪಂಚಾಯಿತಿಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು  ಸ್ವಯಂ ಪ್ರೇರಿತವಾಗಿ ಭೇಟಿ ನೀಡಿ ಶಾಸಕರಿಗೆ ಅಭಿನಂದಿಸಿದರು. ಇದೇ ವೇಳೆ ಮಾತನಾಡಿ ಶಾಸಕರು,ಗೆದ್ದ ಅಭ್ಯರ್ಥಿಗಳು ಗೆಲುವು ಸಾಧಿಸಿದೆವೆಂದು ಹಿಗ್ಗದೇ, ಸೋತ ಅಭ್ಯರ್ಥಿಗಳು ಸೋತಿವೆಂದು ಕುಗ್ಗದೇ ಎಲ್ಲಾರೂ ಒಟ್ಟಾಗಿ ಹೋದಾಗ ಮಾತ್ರ ಗ್ರಾಮಗಳ ಅಭಿವೃದ್ದಿ ಸಾಧ್ಯ ಎಂದು ಕಿವಿ ಮಾತು ಹೇಳಿದರು. ಅಧಿಕಾರ ಎಂಬುದು ನೀರ ಮೇಲಿನ ಗುಳ್ಳೆ ಇದ್ದಂತೆ ಎಂದ ಶಾಸಕರು, ಗೆದ್ದ ಅವಧಿಯಲ್ಲಿ ಗ್ರಾಮಗಳನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವಂತೆ ತಿಳಿ ಹೇಳಿದರು.ಕೆಲ ಗ್ರಾಮಪಂಚಾಯಿತಿಯಲ್ಲಿ ನಮ್ಮ ನಡುವಿನ ತಿಕ್ಕಾಟದಿಂದ ಅವುಗಳು ಕೈತಪ್ಪಿದ್ದು ಕಾರ್ಯಕರ್ತರು ಮುಖಂಡರು ವೈಮಸ್ಸು ಬಿಟ್ಟು ಎಲ್ಲರೂ ಒಂದಾಗಿ ಕೆಲಸ ಮಾಡುವಂತೆ ಸೂಚಿಸಿದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಾದ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು, ಗೆದ್ದ ಅಭ್ಯರ್ಥಿಗಳು ಗೆದ್ದಿವೆಂದು ಬೀಗದೇ ಹಳ್ಳಿಗಳನ್ನು ಅಭಿವೃದ್ದಿ ಮಾಡುವಂತೆ ತಿಳಿಸಿದರು. ಗೆದ್ದ ಅಭ್ಯರ್ಥಿಗಳು ಕಾರ್ಯಕರ್ತರು ಮುಖಂಡರು ಗ್ರಾಮಸ್ಥರು ವಿಶ್ವಾಸವನ್ನು ತೆಗೆದುಕೊಂಡು ಕೆಲಸ ಮಾಡ ಬೇಕೆಂದರು.ಇನ್ನು ಗ್ರಾಮಪಂಚಾಯಿತಿ ಚುನಾವಣೆ ಮುಂಬರುವು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ದಿಕ್ಸೂಚಿಗಿದೆ ಎಂದ ಶಾಸಕರು, ಅವುಗಳಲ್ಲೂ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು. ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳನ್ನು ಧೂಳು ಮುಕ್ತ ಗ್ರಾಮಗಳನ್ನು ಮಾಡಲು ಪಣ ತೊಟ್ಟಿದ್ದು ಮುಂದಿನ ದಿನಗಳಲ್ಲಿ ಅವಳಿ ತಾಲೂಕುಗಳನ್ನು ಧೂಳು ಮುಕ್ತ ಮಾಡುವ ಮೂಲಕ ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆ ಎಂದರು