ಚೀರನಹಳ್ಳಿ ಗ್ರಾಮದಲ್ಲಿ ಯುವಕರಿಗೆ ಮತದಾನದ ಜಾಗೃತಿ ಅಭಿಯಾನ 

ಹೊಳಲ್ಕೆರೆ.ಏ.28:ತಾಲ್ಲೂಕಿನ ಕಸಬಾ ಹೋಬಳಿಯ ಚೀರನಹಳ್ಳಿ ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ -2023 ರ ಸಾರ್ವತ್ರಿಕ ಚುನಾವಣೆ ಪ್ರಯುಕ್ತ  ಗ್ರಾಮದ ಯುವಕರಿಗೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಫ್ಲೇಯಿಂಗ್‌ ಸ್ಕ್ಯಾಡ್‌ ಅಧಿಕಾರಿ ಜಿ.ಎಸ್.ಸುರೇಶ್‌ ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು  ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕೆಂದು ಮತದಾನ ಪವಿತ್ರವಾದದ್ದು ಅದನ್ನು ಆಸೆ ಆಮಿಷಗಳಿಗೆ ಬಲಿಯಾಗಿ ನಿಮ್ಮ ಮತಾದಿಕಾರದ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳಿ ಎಂದು ಕರೆ ನೀಡಲಾಯಿತು. ನೀವು ಮತದಾನದಲ್ಲಿ ಭಾಗವಹಿಸುವಿಕೆ ಪ್ರಜಾಪ್ರಭುತ್ವಕ್ಕೆ ವರದಾನ ಎಂಬ ವಿಚಾರ ತಿಳಿಸಲಾಯಿತು. ಕಡ್ಡಾಯವಾಗಿ ಮೇ 10 ರಂದು ತಮ್ಮ ಅಮೂಲ್ಯವಾದ ಮತವನ್ನು ತಪ್ಪದೇ ಚಲಾಯಿಸುವಂತೆ ವಿಶೇಷವಾಗಿ ಸಾರ್ವಜನಿಕರಿಗೆ ಮನ ಮುಟ್ಟುವಂತೆ ತಿಳಿಯಪಡಿಸಿದರು ನಮ್ಮ ಮತ ನಮ್ಮ ಹಕ್ಕು ತಪ್ಪದೇ ಮತದಾನ ಮಾಡಿ ಎಂದು, ಭವ್ಯ ಭಾರತ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು,ಮತದಾನ ಜಾಗೃತಿಯನ್ನು ಕುರಿತು ಚುನಾವಣಾ ದಿನಾಂಕದಂದು ಕಡ್ಡಾಯವಾಗಿ ಚಲಾಯಿಸುವಂತೆ ಮತದಾರರಿಗೆ ಅರಿವು ಮೂಡಿಸಿ ಮತ್ತು ಮತದಾರರಿಗೆ  ಪ್ರತಿಜ್ಞಾ ವಿಧಿ ಭೋದಿಸಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಸಿವಿಜಿಲ್ ಆಪ್‌ ಮೂಲಕ ಒಂದು ಪಕ್ಷಗಳು/ ವ್ಯಕ್ತಿಗಳು ಮಾದರಿ ನೀತಿ ಸಂಹಿತೆ ನೀತಿ ಉಲ್ಲಂಘನೆ ಮಾಡಿದರೆ ಅವುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ನಾಗರಿಕರು ಸಿವಿಜಲ್ ಆಪ್‌ ಬಳಸಬಹುದಾಗಿದೆ ಎಂದು ಜನಜಾಗೃತಿಯನ್ನು ಮೂಡಿಸಲಾಯಿತು. ಚೀರನಹಳ್ಳಿ ಗ್ರಾಮಸ್ಥರು ಹಾಗೂ ಪೋಲಿಸ್‌ ಸಿಬ್ಬಂದಿ ಪಿ.ಬಿ.ರಂಗಸ್ವಾಮಿ ಉಪಸ್ಥಿತರಿದ್ದರು.