ಚೀನಾ ಸೋಂಕು ಹೆಚ್ಚಳ

ಬೀಜಿಂಗ್, ನ.೧೨: ಚೀನಾದಲ್ಲಿ ಕೋವಿಡ್ ಸೋಂಕು ಪ್ರಕರಣ ದಿಢೀರನೆ ಹೆಚ್ಚಿರುವುದರಿಂದ ಮತ್ತೆ ಕಠಿಣ ನಿರ್ಬಂಧ ಜಾರಿಯಾಗಿದೆ.
ಚೀನಾ ೧೪,೮೭೮ ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ, ಅದರಲ್ಲಿ ೧,೭೧೧ ರೋಗಲಕ್ಷಣಗಳು ಮತ್ತು ೧೩,೧೬೭ ಲಕ್ಷಣರಹಿತವಾಗಿವೆ, ಯಾವುದೇ ಹೊಸ ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿಲ್ಲ, ಇದರೊಂದಿಗೆ ಚೀನಾ ೨೭೧,೯೬೮ ಪ್ರಕರಣಗಳನ್ನು ರೋಗಲಕ್ಷಣಗಳೊಂದಿಗೆ ದೃಢಪಡಿಸಿದೆ.
ದಕ್ಷಿಣದ ಪ್ರಮುಖ ಪ್ರಾಂತ ಗುವಾಂಗ್‌ಝಾವು ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸುಮಾರು ೧.೮ ದಶಲಕ್ಷ ಜನತೆ ಶನಿವಾರ ಮನೆಯಲ್ಲೇ ಇದ್ದು ಕೋವಿಡ್ ಸೋಂಕು ಪರೀಕ್ಷೆಗೆ ಒಳಗಾಗಬೇಕು ಎಂದು ಆಡಳಿತ ಸೂಚಿಸಿದೆ.
ಈ ಮಧ್ಯೆ ದಕ್ಷಿಣ ಚೀನಾದ ಬಹುತೇಕ ನಗರಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಈ ಮಧ್ಯೆ, ಚೀನಾಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಗದಿಯಾಗಿರುವ ಕನಿಷ್ಠ ಕ್ವಾರಂಟೈನ್ ಅವಧಿಯನ್ನು ೭ ದಿನದಿಂದ ೫ ದಿನಕ್ಕೆ ಇಳಿಸಲಾಗಿದೆ. ವಿದೇಶದ ಉದ್ಯಮಿಗಳು, ಕ್ರೀಡಾಳುಗಳು ಸೋಂಕು ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ (ಕ್ವಾರಂಟೈನ್‌ಗೆ ಒಳಪಡದೆ) ತಿರುಗಾಡಲು ಅವಕಾಶವಿದೆ. ಆದರೆ, ಈಗಲೂ ಶೂನ್ಯ ಕೋವಿಡ್ ಕಾರ್ಯಯೋಜನೆ ಜಾರಿಯಲ್ಲಿದೆ ಎಂದು ಸರಕಾರ ಘೋಷಿಸಿದೆ.

ಸೂಪರ್ ಮಾರ್ಕೆಟ್ ಅಥವಾ ಸಾರ್ವಜನಿಕ ಕಟ್ಟಡಗಳಿಗೆ ಭೇಟಿ ನೀಡಬೇಕಿದ್ದರೆ, ಆಯಾ ದಿನ ನಡೆಸುವ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು. ಗುವಾಂಗ್‌ಝಾವೊದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು ಬಸ್ಸು, ರೈಲು ಸಂಚಾರವೂ ಸ್ಥಗಿತಗೊಂಡಿದೆ. ಇಲ್ಲಿಂದ ಬೀಜಿಂಗ್ ಹಾಗೂ ಇತರ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ರದ್ದಾಗಿದೆ. ನೈಋತ್ಯದ ಕೈಗಾರಿಕಾ ನಗರ ಚೋಂಗ್‌ಖ್ವಿಗ್‌ನ ಕೆಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.