ಚೀನಾ ಸಿಸಿಟಿವಿ ಅಳವಡಿಕೆ ನಿಷೇಧಕ್ಕೆ ಕೈ ಆಗ್ರಹ

ನವದೆಹಲಿ,ಮಾ.೬-ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಚೀನಾ ಮೂಲಕ ಕ್ಲೋಸ್ ಸಕ್ರ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸುವಂತೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ನಿನಾಂಗ್ ಎರಿಂಗ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಬೇಹುಗಾರಿಕೆ ನಡೆಸಲಿರುವ ಹಿನ್ನೆಲೆಯಲ್ಲಿ ಚೀನಿ ಬೆದರಿಕೆಯನ್ನು ತಡೆಯಲು ಭಾರತ ಸರ್ಕಾರ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಚೀನಾದ ಹ್ಯಾಕರ್‌ಗಳಿಂದ ಭಾರತೀಯ ಸಂಸ್ಥೆಗಳ ಮೇಲೆ “ನಿಯಮಿತ ದಾಳಿ” ಮಾಡುತ್ತಾರೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಮನೆಗಳಲ್ಲಿ ಅದರ ಚೀನಾ ಮೂಲದ ಸಿಸಿಟಿಟಿ ಬಳಕೆಯ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಪಾಸಿಘಾಟ್ ಪಶ್ಚಿಮದ ಶಾಸಕ ಮತ್ತು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಿನೊಂಗ್ ಎರಿಂಗ್,ದೇಶದಲ್ಲಿ ಬಳಸಲಾಗುವ ಚೀನಾ ನಿರ್ಮಿತ ಸಿಸಿಟಿವಿಗಳನ್ನು ಚೀನಾ ಬೇಹುಗಾರಿಕೆಗೆ ಬಳಸುತ್ತಿದೆ. ಹೀಗಾಗಿ ಅವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬೆದರಿಕೆಯನ್ನು ಎದುರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಅರಿವು ಅಸಮರ್ಪಕವಾಗಿದೆ. ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ತರುತ್ತಿವೆ ಈ ಬಗೆ ಜಾಗೃತರಾಗಿರಬೇಕು ಎಂದು ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳು ಭಾರತ ವಿರೋಧಿ ಶಕ್ತಿಗಳಿಗೆ ಪರಿಣಾಮಕಾರಿಯಾಗಿ ಕಣ್ಣು ಮತ್ತು ಕಿವಿಯಾಗಬಲ್ಲವು ಎನ್ನುವುದರ ಬಗ್ಗೆ ಮಾಹಿತಿ ನೀಡದ ಅವರು ಭಾರತದ ಐಟಿ ಮೂಲಸೌಕರ್ಯದ ಮೇಲೆ ಚೀನಾ ದಾಳಿ ಮಾಡುವ ಮೂಲಕ ಪದೇ ಪದೇ ಹಗೆತನವನ್ನು ಪ್ರದರ್ಶನ ಮಾಡಲಿದೆ ಎಂದು ಹೇಳಿದ್ದಾರೆ.
ಶಂಕಿತ ರಾಜ್ಯ ಪ್ರಾಯೋಜಿತ ಚೀನೀ ಹ್ಯಾಕರ್‍ಗಳಿಂದ ಸೈಬರ್-ಬೇಹುಗಾರಿಕೆ ಅಭಿಯಾನ ಸಮರ್ಥಿಸಿಕೊಂಡಿರುವ ಅಮೇರಿಕಾ ಮೂಲದ ಬೆದರಿಕೆ ಗುಪ್ತಚರ ಸಂಸ್ಥೆಯ ವರದಿ ಉಲ್ಲೇಖಿಸಿರುವ ಅವರು ಕೂಡಲೇ ಚೀನಾ ಮೂಲದ ಸಿಸಿಟಿವಿಗಳನ್ನು ಭಾರತದಲ್ಲಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.