ಚೀನಾ ರಾಯಭಾರಿ ತಂಗಿದ್ದ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ: ನಾಲ್ವರ ಸಾವು

ಲಾಹೋರ್,ಏ.೨೨- ಚೀನಾದ ರಾಯಬಾರಿ ತಂಗಿದ್ದ ಪಾಕಿಸ್ತಾನದ ಕ್ವೆಟ್ಟಾ ನಗರದ ಐಶಾರಾಮಿ ಹೋಟೆಲ್ ಬಳಿ ಸಂಭವಿಸಿದ ಪ್ರಭಲ ಬಾಂಬ್ ಸ್ಪೋಟ ಪ್ರಕರಣದಲ್ಲಿ ಕನಿಷ್ಠ ೪ ಮಂದಿ ಮೃತಪಟ್ಟು ೧೨ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಹೋಟೆಲ್‌ನಲ್ಲಿ ಚೀನಾದ ರಾಯಬಾರಿ ಸೇರಿದಂತೆ ಅಲ್ಲಿನ ಉನ್ನತ ನಿಯೋಗ ತಂಗಿತ್ತು.ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿಯನ್ನು ಗುರಿಯಾಗಿಸಿಕೊಂಡು ಕಾರು ಪಾರ್ಕಿಂಗ್ ಜಾಗದಲ್ಲಿ ಈ ಬಾಂಬ್ ಸ್ಪೋಟ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಂಬ್ ಸ್ಫೋಟಗೊಂಡಾಗ ಚೀನಾದ ರಾಯಬಾರಿ ಹೋಟೆಲ್ ನಲ್ಲಿ ಇರಲಿಲ್ಲ ಎಂದು ಒಳಡಾಳಿತ ಸಚಿವ ಶೇಖ್ ರಶೀದ್ ಅಹಮದ್ ಅವರು ತಿಳಿಸಿದ್ದು ಇದೊಂದು ಭಯೋತ್ಪಾದಕರ ದಾಳಿಯಾಗಿದೆ. ಈ ಬಗ್ಗೆ ಎಲ್ಲೆಡೆ ಬಿಗಿ ಭದ್ರತೆ ಮತ್ತು ಕಟ್ಟೆಚ್ಚರ ವಹಿಸಲು ಪೋಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಲುಚಿಸ್ತಾನ್ ಪ್ರಾಂತ್ಯದ ಅಫ್ಘನ್ ಗಡಿಯಲ್ಲಿರುವ ಹೋಟೆಲ್ ಮುಂಭಾಗ ಈ ಬಾಂಬ್ ಸ್ಪೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ಪಾಕಿಸ್ತಾನದಲ್ಲಿರುವ ತಾಲಿಬಾನ್ ಸಂಘಟನೆ ಹೊತ್ತುಕೊಂಡಿದೆ.
ಅಫಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಬುಡಕಟ್ಟು ಪ್ರದೇಶದಲ್ಲಿ ಇತ್ತೀಚೆಗೆ ತಾಲಿಬಾನ್ ಸೇರಿದಂತೆ ಇನ್ನಿತರೆ ಉಗ್ರ ಸಂಘಟನೆಗಳು ದಾಳಿ ಮಾಡುತ್ತಿದ್ದಾರೆ.ಅದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ.
ತಾಲಿಬಾನ್ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿದೆ. ಯಾವ ಕಾರಣಕ್ಕಾಗಿ ದಾಳಿ ನಡೆಸಿದೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಾಗಿದೆ.
ಕಾರು ಪಾರ್ಕಿಂಗ್‌ನಲ್ಲಿ ಪ್ರಭಲ ಕಾರು ಬಾಂಬ್ ಸ್ಪೋಟ ಸಂಭವಿಸಿ ಇತರೆ ಕಾರುಗಳಿಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿ ೧೨ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದ ಕುರಿತು ಮಾಹಿತಿ ನೀಡಿರುವ ಒಡಾಳಿತ ಸಚಿವ ಶೇಖ್ ರಶೀದ್ ಅಹಮದ್ ಅವರು,ಇದೊಂದು ಭಯೋತ್ಪಾದಕರ ದಾಳಿಯಾಗಿದೆ. ಈ ಬಗ್ಗೆ ಎಲ್ಲೆಡೆ ಬಿಗಿ ಭದ್ರತೆ ಮತ್ತು ಕಟ್ಟೆಚ್ಚರ ವಹಿಸಲು ಪೋಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.