ಚೀನಾ ಪ್ರಸ್ತಾಪ ಭಾರತ ತಿರಸ್ಕಾರ

ನವದೆಹಲಿ,ಅ.೩೦-ಪೂರ್ವ ಲಡಾಕ್‌ನಲ್ಲಿ ಜಮಾವಣೆ ಮಾಡಲಾಗಿರುವ ಸೇನಾ ವಾಪಾಸಾತಿ ಕುರಿತಂತೆ ಭಾರತ ಮತ್ತು ಚೀನಾ ನಡುವಣ ೮ನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ.
ಆದರೆ, ಫಿಂಗರ್ -೪ ಬೆಟ್ಟಗುಡ್ಡಗಳ ಸಮೀಪ ಉತ್ತರ ಭಾಗದ ಫಂಗಾಂಗ್ ಸೊ ಭಾಗದಲ್ಲಿ ಭಾರತ ಜಮಾವಣೆ ಮಾಡಿರುವ ಸೇನೆಯನು ವಾಪಸ್ ಕರೆಸಿಕೊಳ್ಳಬೇಕೆಂಬ ಚೀನಾದ ಲಿಬರೇಷನ್ ಆರ್ಮಿ ಪ್ರಸ್ತಾಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
ನ.೩ ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೆ ೧೯ನೇ ಕೇಂದ್ರೀಯ ಸಮಿತಿ ಸಮಾವೇಶ ಪೂರ್ಣವಾಗುತ್ತಿರುವ ಸಂದರ್ಭದಲ್ಲೆ ಭಾರತ ಮತ್ತು ಚೀನಾ ನಡುವಣ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಈ ವಿದ್ಯಮಾನಗಳ ಬೆನ್ನಲ್ಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೂರ್ವ ಲಡಾಕ್‌ನಲ್ಲಿ ನಿಯೋಜಿಸಲಾಗಿರುವ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸಿದ್ಧವಿದೆ. ಆದರೆ, ಚೀನಾ ವಿಧಿಸಿರುವ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಫಿಂಗರ್ ೩ ಮತ್ತು ಫಂಗಾಂಗ್ ತ್ಸೊ ಪ್ರದೇಶದಲ್ಲಿ ಭಾರತೀಯ ಸೇನೆಯನ್ನು ಜಮಾವಣೆ ಮಾಡಲಾಗಿದೆ. ಆದರೆ, ಪಿಎಲ್‌ಎ ವಿಧಿಸಿರುವ ಷರತ್ತಿನ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಮಾತುಕತೆಯ ಬಗ್ಗೆ ಮಾಹಿತಿ ಹೊಂದಿರುವ ಹಿರಿಯ ಸೇನಾ ಕಮಾಂಡರ್‌ಗಳು ತಿಳಿಸಿದ್ದಾರೆ.
ಆದರೆ, ಚೀನಾ ಫಿಂಗರ್ -೫ನಲ್ಲಿ ಸೇನೆ ಕಾವಲು ಕಾಯುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದು, ಫಿಂಗರ್-೪ ಅಕ್ಸಾಯ್ ಚಿನ್ ಆಕ್ರಮಿತ ಪ್ರದೇಶವಾಗಿದ್ದು, ಇದು ವಿವಾದದಿಂದ ಕೂಡಿದೆ ಎಂದು ಭಾರತ ಸ್ಪಷ್ಟಪಡಿಸಿದೆ.