ಚೀನಾ ದ್ವಂದ್ವಕ್ಕೆ ಭಾರತ ಎಚ್ಚರಿಕೆ

ನವದೆಹಲಿ,ನ.೧೩- ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ, ತನ್ನ ಸೇನಾ ಪಡೆಗಳನ್ನು ಕಡಿತ ಮಾಡಿದೆ ಎನ್ನುವ ಮೂಲಕ ದಿಕ್ಕುತಪ್ಪಿಸುತ್ತಿದೆ. ಇಂತಹ ದ್ವಂದ್ವ ಮತ್ತು ದ್ರೋಹಕ್ಕೆ ತಕ್ಕ ಉತ್ತರ ನೀಡಲು ಭಾರತ ಸೇನೆಯೂ ಕೂಡ ಸಿದ್ದವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ನೇರವಾಗಿ ಎಚ್ಚರಿಕೆ ನಿಡಿದ್ದಾರೆ.
ಚೀನಾದ ಗಡಿಯಲ್ಲಿನ ಪರಿಸ್ಥಿತಿ “ಸ್ಥಿರ ಆದರೆ ಅನಿರೀಕ್ಷಿತ” ಚೀಆದ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ಪಡೆಗಳನ್ನು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಕಡಿಮೆ ಮಾಡಿಲ್ಲ ಬದಲಾಗಿ ಪಡೆ ಹೆಚ್ಚಿಸುವ ಮೂಲಕ ಸಂಪರ್ಕಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ. ಇಂತಹ ನಂಬಿಕೆ ದ್ರೋಹಕ್ಕೆ ತಿರುಗೇಟು ನೀಡಲು ಶಕ್ತವಾಗಿರುವುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚೀನಾದ ದ್ವಂದ್ವ ಮತ್ತು ದ್ರೋಹದ ವಿರುದ್ಧ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
“ಚೀನೀಯರು ಏನು ಹೇಳುತ್ತಾರೆ ಮತ್ತು ಅವರು ಏನು ಮಾಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ವಂಚನೆಯ ಒಂದು ಭಾಗವಾಗಿದೆ, ಲಿಖಿತವಾಗಿ ಇರುವುದಕ್ಕಿಂತ ಹೆಚ್ಚಾಗಿ ಅವರ ಕ್ರಿಯೆಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
೨೦೨೦ರ ಏಪ್ರಿಲ್-ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕದ ನಡುವಿನ ಘರ್ಷಣೆಯಲ್ಲಿ ನಂತರ ಎದುರಾದ ಬಿಕ್ಕಟ್ಟನ್ನು ಪರಿಹರಿಸಲು ಭಾರತ ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆಗ ನಡೆಸುತ್ತಿದೆ. ಇದುವರೆಗಿನ “ಈ ಮಾತುಕತೆಯಿಂದಾಗಿ, ಏಳರಲ್ಲಿ ಐದಕ್ಕೆ ನಾವು ನಿರ್ಣಯ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಮಾತುಕತೆ ದಿನಾಂಕ ಶೀಘ್ರ ನಿಗಧಿ:
ಭಾರತ- ಚೀನಾ ನಡುವೆ ೧೭ನೇ ಸುತ್ತಿನ ಕಾಪ್ರ್ಸ್ ಕಮಾಂಡರ್-ಮಟ್ಟದ ಮಾತುಕತೆಗಾಗಿ ದಿನಾಂಕ ನಿಗಧೀ ಮಾಡಲು ಸಮಯ ಎದುರು ನೋಡುತ್ತಿದ್ದೇವೆ. ಎಂದು ಜನರಲ್ ಪಾಂಡೆ ಹೇಳಿದ್ದಾರೆ.ಭಾರತ ಮಾತುಕತೆಗೆ ಉತ್ಸಾಹ ತೋರಿದ್ದರೂ ಚೀನಾ ಇದುವರೆಗೆ ಸೇನೆ ಇದುವರೆಗೆ ಕೈಗೊಳ್ಳಲು ಯಾವುದೇ ಒಲವನ್ನು ತೋರಿಸಿಲ್ಲ ಎಂದು ಹೇಳಿದ್ದಾರೆ.
ಕಳೆದ ೩೦ ತಿಂಗಳುಗಳಿಂದ ಪೂರ್ವ ಲಡಾಖ್ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ನಿಯೋಜಿಸಲಾದ ತಮ್ಮ ೫೦,೦೦೦ ಕ್ಕೂ ಹೆಚ್ಚು ಸೈನಿಕರನ್ನು ಎರಡು ದೇಶಗಳು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ,
“ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂ ಧಿಸಿದಂತೆ, ರಸ್ತೆಗಳು, ಹೆಲಿಪ್ಯಾಡ್‌ಗಳು, ಏರ್‍ಫೀಲ್ಡ್ ಗಳು,ಹಾದುಹೋಗುವವರೆಗೂ ರಸ್ತೆಗಳು ಸೇರಿದಂತೆ ಸೇನೆಯ ನಿಯಮಗಳಲ್ಲಿ ಇದು ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಜಿ-೬೯೫ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ ವಿವಾದಿತ ಪ್ರದೇಶದ ಅಕ್ಸಾಯ್ ಚಿನ್ ಮೂಲಕ ಹಾದು ಹೋಗುತ್ತದೆ ಮತ್ತು ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಟಿಬೆಟಿಯನ್ ಸ್ವಾಯತ್ತ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ ಎಂದಿದ್ದಾರೆ.