ಚೀನಾ ಜತೆ ವ್ಯವಹಾರ: ರಾಷ್ರ್ಟೀಯ ಭದ್ರತೆ ಬಗ್ಗೆ ಎಚ್ಚರವಿರಲಿ

ನವದೆಹಲಿ.ಮೇ.೧೮- ಭಾರತೀಯ ಸಂಸ್ಥೆಗಳು ಚೀನಾದೊಂದಿಗಿನ ತಮ್ಮ ವ್ಯವಹಾರಗಳಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಲಹೆ ನೀಡಿದ್ದಾರೆ

ಇದು ನೆರೆಯ ದೇಶದಿಂದ ಏನನ್ನೂ ಪಡೆಯಲಾಗುವುದಿಲ್ಲ ಎಂದು ಅರ್ಥವಲ್ಲ ,ಆದರೆ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ

ದೆಹಲಿಯಲ್ಲಿ ಆಯೋಜಿಸಿದ್ದ ಸಿಐಐ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಚೀನಾದ ಮಾರುಕಟ್ಟೆ ಪ್ರವೇಶ, ಹೂಡಿಕೆಗಳು, ತಂತ್ರಜ್ಞಾನಗಳು ಅಥವಾ ಶಿಕ್ಷಣ ಮತ್ತು ಪ್ರವಾಸೋದ್ಯಮದ ಬಗ್ಗೆ ಮಾತನಾಡುವಾಗ ಭಾರತದ ಆರ್ಥಿಕ ಆದ್ಯತೆಗಳು ಹಿತಾಸಕ್ತಿಗಳು ದೇಶಕ್ಕೆ ಹೊಂದಿಕೆಯಾಗಬೇಕು ಎಂಬುದನ್ನು ಗಮನಿಸಿರಬೇಕು ಎಂದು ಹೇಳಿದ್ದಾರೆ.

ರಕ್ಷಣೆ, ಸೆಮಿಕಂಡಕ್ಟರ್‌ಗಳು ಮತ್ತು ಡಿಜಿಟಲ್‌ಗಳಂತಹ ಡೊಮೇನ್‌ಗಳಲ್ಲಿ ’ಮೇಕ್ ಇನ್ ಇಂಡಿಯಾ’ಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಭಾರತೀಯ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ

“ಚೀನಾದ ಬಗ್ಗೆ ಕಾಳಜಿ ಇರುವಲ್ಲಿ,ಇನ್ನೂ ಈ ದೇಶದ ಜನರನ್ನು ಪ್ರೋತ್ಸಾಹಿಸುತ್ತೇವೆ ಭಾರತದಲ್ಲಿ ಉತ್ಪಾದನೆ, ಭಾರತದಲ್ಲಿ ಮೂಲ, ಭಾರತದಿಂದ ಖರೀದಿಸಿ” ಎಂದು ಕಿವಿ ಮಾತು ಹೇಳಿದ್ದಾರೆ.

ಚೀನಾದೊಂದಿಗೆ ಕೆಲಸ ಮಾಡುವ ಜನರನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ, ಆದ ಭಾರತೀಯ ಆಯ್ಕೆಯು ನಿಮಗೆ ಲಭ್ಯವಿದ್ದರೆ ಭಾರತೀಯ ಕಂಪನಿಗಳೊಂದಿಗೆ ಕೆಲಸ ಮಾಡಲು ಹೆಚ್ಚು ಇಷ್ಟಪಡುತ್ತೇವೆ.ಅದು ದೇಶದ ರಾಷ್ಟ್ರೀಯ ಭದ್ರತೆಗೆ ಒಳ್ಳೆಯದು ಎಂದಿದ್ದಾರೆ

ಆರ್ಥಿಕ ಚಟುವಟಿಕೆಯ “ಆಯುಧೀಕರಣ” ಮತ್ತು ಕಚ್ಚಾ ವಸ್ತುಗಳ ಪ್ರವೇಶ ಅಥವಾ ಪ್ರವಾಸೋದ್ಯಮದ ಸ್ಥಿರತೆಯನ್ನು ರಾಜಕೀಯ ಒತ್ತಡ ಬೀರಲು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ