ಚೀನಾ ಗಡಿ ಖ್ಯಾತೆ: ಭಾರತದ ಬೆಂಬಲಕ್ಕೆ ಅಮೇರಿಕಾ: ಭರವಸೆ

ನವದೆಹಲಿ, ಅ. 27- ಗಡಿಭಾಗದಲ್ಲಿ ಚೀನಾದ ಹೆದರಿಕೆಗೆ ಭಾರತ ಬಗ್ಗುವ ಅಗತ್ಯವಿಲ್ಲ ಭಾರತದೊಂದಿಗೆ ಅಮೆರಿಕ ಸದಾ ನಿಲ್ಲಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.

ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದಲ್ಲಿ ಭಾರತದ ಅನೇಕ ಯೋಧರು ಹುತಾತ್ಮರಾಗಿದ್ದಾರೆ ಇದು ದುಃಖದ ಸಂಗತಿ. ಭಾರತ ಇಂತಹ ಯಾವುದೇ ಬೆದರಿಕೆಗೆ ಬಗ್ಗುವ ಅಗತ್ಯವಿಲ್ಲ ನಾವು ನಿಮ್ಮೊಂದಿಗಿದ್ದೇವೆ ಎಂದು ಅವರು ಭರವಸೆ ನೀಡಿದ್ದಾರೆ.

2+2 ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಮೈಕ್ ಪಾಂಪಿಯೋ, ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಆಡಳಿತರೂಢ ಚೀನಾ ಸರ್ಕಾರ ಗಡಿಭಾಗದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುತ್ತಿಲ್ಲ ಅದಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು, ಚೀನಾ ಒಡ್ಡುವ ಯಾವುದೇ ರೀತಿಯ ಬೆದರಿಕೆಯನ್ನು ಎದುರಿಸಲು ಭಾರತಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಅವರು ತಿಳಿಸಿದ್ದಾರೆ.

ಭಾರತಕ್ಕೆ ಅಗತ್ಯ ಎದುರಾದಾಗ ಎಲ್ಲ ರೀತಿಯ ಸಹಾಯ ಸಹಕಾರವನ್ನು ಅಮೆರಿಕ ನೀಡಲಿದೆ ಇದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದು ಹೇಳಿರುವ ಅವರು ಹಿಂದೂ ಮಹಾಸಾಗರದಲ್ಲಿ ಉಭಯ ದೇಶಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ರಾಷ್ಟ್ರಗಳಿಗೆ ನಡುಕ ಹುಟ್ಟುವಂತೆ ಮಾಡಿದ್ದೇವೆ . ಸೈಬರ್ ಭದ್ರತೆ ಸೇರಿದಂತೆ ಅನೇಕ ವಿಷಯಗಳಲ್ಲಿ ಪರಸ್ಪರ ಮಾತುಕತೆ ಹಾಗೂ ಒಪ್ಪಂದಕ್ಕೆ ಉಭಯ ದೇಶಗಳು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಆಡಳಿತರೂಢ ಚೀನಾದ ಕಮ್ಯುನಿಸ್ಟ್ ಪಕ್ಷ ಸ್ನೇಹ ಬಾಂಧವ್ಯಕ್ಕೆ ತದ್ವಿರುದ್ದವಾದ ಪಕ್ಷ ಆ ಪಕ್ಷ ಆಡಳಿತವಿರುವ ದೇಶದಲ್ಲಿ ಸ್ನೇಹ ಸಂಪಾದಿಸುವುದು ಬಾಂಧವ್ಯ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಹೇಳಿದ್ದಾರೆ

ಭಾರತದ ಭೇಟಿಯಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ಇನ್ನಷ್ಟು ಸ್ನೇಹ ಸಂಬಂಧ ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೈಕ್ ಪಾಂಪಿಯೋ,
ಭವಿಷ್ಯದಲ್ಲಿ ಉತ್ತಮ ಸ್ನೇಹ ಸಂಬಂಧವನ್ನು ಒಂದು ವಿಶ್ವಾಸ ಹೊರಹಾಕಿದರು.

ಭಾರತ ಮತ್ತು ಅಮೆರಿಕ ಭವಿಷ್ಯದಲ್ಲಿ ಇನ್ನಷ್ಟು ಸ್ನೇಹ ಗಟ್ಟಿ ಮಾಡಿಕೊಳ್ಳುವ ಜೊತೆಗೆ ಹಲವು ವಿಷಯಗಳಲ್ಲಿ ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಸಿದ್ಧವಿದೆ ಈ ಮೂಲಕ ಜಗತ್ತಿನ ಎರಡು ಪ್ರಜಾಪ್ರಭುತ್ವ ದೇಶಗಳು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ‌