ಚೀನಾ ಗಡಿಯಲ್ಲಿ ಎರಡನೇ ಎಸ್-೪೦೦ ನಿಯೋಜನೆ

ದೆಹಲಿ, ಜು.೨೫- ಮುಂದಿನ ಮೂರು ತಿಂಗಳಲ್ಲಿ ಭಾರತಕ್ಕೆ ರಷ್ಯಾದಿಂದ ಎರಡನೇ ಎಸ್-೪೦೦ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪೂರೈಕೆಯಾಗಲಿದ್ದು, ಚೀನಾದ ಉತ್ತರದ ಗಡಿ ಪ್ರದೇಶದಲ್ಲಿ ನಿಯೋಜನೆಯಾಗಲಿದೆ ಎಂದು ಮೂಲಗಳು ತಿಳಿಸಿದೆ. ಸಹಜವಾಗಿಯೇ ಇದು ಭಾರತದ ಭಾರತದ ವಾಯು ರಕ್ಷಣಾ ವ್ಯವಸ್ಥೆಗೆ ಆನೆಬಲ ನೀಡಲಿದೆ.
ವಿಶ್ವದಲ್ಲೇ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಎಸ್-೪೦೦ ಟ್ರಿಯಾಂಫ್, ಭಾರತದ ವಾಯು ರಕ್ಷಣಾ ವ್ಯವಸ್ಥೆಗೆ ಅಕ್ರಮವಾಗಿ ಪ್ರವೇಶಿಸುವ ವಿದೇಶದ ಯಾವುದೇ ಯುದ್ದ ವಿಮಾನ, ಡ್ರೋನ್, ಬಾಂಬರ್, ಕ್ಷಿಪಣಿಗಳನ್ನು ಕ್ಷಣಾರ್ಧದಲ್ಲಿ ಧ್ವಂಸಗೊಳಿಸುವ ಶಕ್ತಿಯನ್ನು ಹೊಂದಿದ್ದು, ಈಗಾಗಲೇ ಮೊದಲನೇ ಸಮೂಹ (ರೆಜಿಮೆಂಟ್) ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಾಯುವ್ಯ ಭಾರತದ ಗಡಿಯಲ್ಲಿ ನಿಯೋಜಿಸಲಾಗಿದೆ. ಇದೀಗ ಮುಂದಿನ ೨-೩ ತಿಂಗಳ ಅವಧಿಯಲ್ಲಿ ರಷ್ಯಾದಿಂದ ಎರಡನೇ ಸ್ವಾಡ್ರನ್ ಭಾರತಕ್ಕೆ ಆಗಮಿಸಲಿದ್ದು, ಚೀನಾದ ಗಡಿ ಪ್ರದೇಶದಲ್ಲಿ ನಿಯೋಜಿಸಲಾಗುವುದು ಎನ್ನಲಾಗಿದೆ. ರಷ್ಯಾ-ಉಕ್ರೇನ್ ನಡುವಿನ ಯುದ್ದದ ಹಿನ್ನೆಲೆಯಲ್ಲಿ ಎಸ್-೪೦೦ ಪೂರೈಕೆಯಲ್ಲಿ ಕೊಂಚ ತಡವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಎರಡನೇ ರೆಜಿಮೆಂಟ್ ಈಗಾಗಲೇ ರಷ್ಯಾದಿಂದ ಹೊರಡಿದ್ದು, ಶಿಪ್ ಹಾಗೂ ಸಮುದ್ರದ ಮೂಲಕ ಭಾರತಕ್ಕೆ ಮುಂದಿನ ಮೂರು ತಿಂಗಳಲ್ಲಿ ಆಗಮಿಸಲಿದೆ ಎನ್ನಲಾಗಿದೆ. ಕಳೆದ ಎಪ್ರಿಲ್‌ನಲ್ಲಿ ಎಸ್-೪೦೦ ಟ್ರಿಯಾಂಫ್‌ಗೆ ಸಂಬಂಧಿಸಿದ ಸಿಮ್ಯುಲೇಟರ್ ಹಾಗೂ ಇತರೆ ಉಪಕರಣಗಳನ್ನು ಭಾರತಕ್ಕೆ ಪೂರೈಸಲಾಗಿತ್ತು. ಇತ್ತೀಚಿಗಿನ ದಿನಗಳಲ್ಲಿ ಲಡಾಕ್, ಎಲ್‌ಎಸಿಯಲ್ಲಿ ಚೀನಾದ ಯುದ್ದ ವಿಮಾನಗಳ ಹಾರಾಟಗಳ ಪ್ರಮಾಣ ಹೆಚ್ಚಿದ್ದು, ಇದರ ನಡುವೆ ಇದೀಗ ಭಾರತ ಎಸ್-೪೦೦ ಈ ಪ್ರದೇಶದಲ್ಲಿ ನಿಯೋಜಿಸುತ್ತಿರುವುದು ಎದುರಾಳಿ ರಾಷ್ಟ್ರದ ಪಾಳಯದಲ್ಲಿ ಭಯ ಸಹಜವಾಗಿಯೇ ಭಯ ಮೂಡಿಸಿದೆ. ಇನ್ನು ೨೦೧೮ರಲ್ಲಿ ಎಸ್-೪೦೦ ಖರೀದಿಸಲು ಭಾರತೀಯ ಸರ್ಕಾರ ರಷ್ಯಾದೊಂದಿಗೆ ೫ ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ ಅನ್ವಯ ರಷ್ಯಾದಿಂದ ೫ ಎಸ್-೪೦೦ ರೆಜಿಮೆಂಟ್‌ಗಳು ಭಾರತಕ್ಕೆ ಬರಲಿದೆ. ಅದೂ ಅಲ್ಲದೆ ಇತ್ತೀಚಿಗೆ ಭಾರತಕ್ಕೆ ಅಮೆರಿಕಾವು ಕಾಟ್ಝಾ ಒಪ್ಪಂದದ ನಿರ್ಬಂಧದಿಂದ ವಿನಾಯಿತಿ ಕೂಡ ನೀಡಿತ್ತು.