ಚೀನಾ ಇತಿ, ಮಿತಿ ಮೀರಿ ವರ್ತನೆ ಭಾರತ ಆರೋಪ

ನವದೆಹಲಿ,ಆ.೬- ಭಾರತ- ಚೀನಾ ನಡುವೆ ಸೇನೆಯ ನಡುವೆ ಸಂಘರ್ಷ ನಡೆದಿರುವಾಗಲೇ ಚೀನಾ ತನ್ನ ವಾಯ ಪ್ರದೇಶವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿದೆ.
ಎರಡೂ ದೇಶಗಳ ನಡುವೆ ವಿಶ್ವಾಸ ವರ್ಧಕ ಕ್ರಮ ಕೈಗೊಳ್ಳಲು ಮಾತಕತೆ ನಡೆಯುತ್ತಿರುವ ನಡುವೆ ಚೀನಾ ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿದೆ ಎಂದು ಭಾರತ ಆರೋಪಿಸಿದೆ.
ಗಡಿ ಭಾಗದಲ್ಲಿ ಚೀನಾ ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರ ಗಳೊಂದಿಗೆ ಜಮಾಯಿಸಿದ್ದಾರೆ .ಇದು ಒಪ್ಪಂದಕ್ಕೆ ವಿರುದ್ದವಾದುದು ಎಂದು ಆರೋಪಿಸಿದೆ. ಮೇ ೨೦೨೦ ರಿಂದ ಪೂರ್ವ ಲಡಾಖ್‌ನಲ್ಲಿ ನಡೆದ ಸೈನಿಕರ ಸಂಘರ್ಷದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಡುತ್ತಿದೆ.
ಮೇಜರ್ ಜನರಲ್ ನೇತೃತ್ವದ ಭಾರತೀಯ ಸೇನಾ ನಿಯೋಗ ಪೂರ್ವ ಲಡಾಖ್‌ನ ಚುಶುಲ್-ಮೊಲ್ಡೊ ಗಡಿ ಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕೌಂಟರ್‌ಪಾರ್ಟ್‌ನೊಂದಿಗೆ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿ ಚೀನಾ ನಡೆಯನ್ನು ವಿರೋದಿಸಿದೆ.
ಚೀನಾದ ಸೈನಿಕರು ಪ್ರಚೋದನಕಾರಿ ವರ್ತನೆ ನಿಗ್ರಹಿಸುವ ಅಗತ್ಯವಿದೆ ಎನ್ನುವ ವಿಷಯವನ್ನೂ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ..
ಭಾರತೀಯ ವಾಯ ಸೇನೆಯ ಕಾರ್ಯಾಚರಣೆಯ ಘಟಕದ ಏರ್ ಕಮೋಡೋರ್ ನೇತೃತ್ವದ ಭಾರತೀಯ ನಿಯೋಗದ ಕಳೆದ “ಜೂನ್ ನಿಂದ ಈ ಪ್ರದೇಶದಲ್ಲಿ ಹೆಚ್ಚಿದ ಚೀನೀ ವಾಯು ಚಟುವಟಿಕೆ ಹತ್ತಿಕ್ಕಲು ಹಲವು ಕ್ರಮ ಕೈಗೊಳ್ಳಲಾವಗಿದೆ.
ಒಪ್ಪಂದ ಪ್ರಕಾರ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ೧೦ ಕಿ.ಮೀ ದೂರದಲ್ಲಿ ಸೇನೆ ನಿಯೋಜಿಸಬೇಕು ಎನ್ನುವ ನಿಮಯ ಇದೆ ಆದರೆ ಚೀನಾ ಈ ನಿಯಮವನ್ನು ಉಲ್ಲಂಘಿಸಿದೆ ಎಂದು ಭಾರತ ದೂರಿದೆ..