ಚೀನಾದಿಂದ ಮತ್ತೆ ಭಾರತಕ್ಕೆ ಬಂತು ಕೊರೋನಾ: 19 ಮಂದಿಗೆ ಸೋಂಕು

ವುಹಾನ್,ನ.2- ವಂದೇ ಭಾರತ್ ಮಿಷನ್ ಯೋಜನೆಯಡಿ ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕಳೆದ ಹಲವು ತಿಂಗಳಿಂದ ಕರೆ ತರುವ ಕೆಲಸ ವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಚೀನಾದ ವುಹಾನ್ ನಿಂದ ಬಂದ ವಂದೇ ಭಾರತ್ ಮಿಷನ್ ವಿಮಾನದಲ್ಲಿ ದೆಹಲಿಗೆ ಬಂದ 19 ಮಂದಿಗೆ ಕೋರೋನಾ ಸೋಂಕು ದೃಡ ಪಟ್ಟಿದೆ.ಹೀಗಾಗಿ ಚೀನಾದಿಂದ ಭಾರತಕ್ಕೆ ಸೋಂಕು ಮತ್ತೆ ಬಂದಿದೆ.

ಇದು ವಿಮಾನದಲ್ಲಿ ಇದ್ದವರನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೀನಾದಿಂದ ಭಾರತಕ್ಕೆ ವಂದೇ ಭಾರತ್ ಮಿಷನ್ ಯೋಜನಯಡಿ ವಿಮಾನದಲ್ಲಿ‌ ಬರುತ್ತಿದ್ದ ಬೇರೆ ವಿಮಾನಗಳು ಮತ್ತಷ್ಟು ವಿಳಂಬವಾಗಲಿದೆ.

ವುಹಾನ್ ನಿಂದ 277 ಮಂದಿಯನ್ನು ವಿಶೇಷ‌‌‌ ವಿಮಾನದ ಮೂಲಕ ದೆಹಲಿಗೆ ಕರೆಯಲಾಗಿತ್ತು. ‌ಈ ಪೈಕಿ 58 ಮಂದಿಗೆ ಕೋರೊನಾ ಸೋಂಕಿನ‌ ಶಂಕೆಯ ಹಿನ್ನೆಲೆಯನ್ನು ವಿವಿಧ ಹೋಟೆಲ್ ಮತ್ತು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಅದರಲ್ಲಿ 19 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ‌.‌ಹೀಗಾಗಿ ಭಾರತಕ್ಕೆ ಬರಲು ಸಿದ್ದರಾಗಿದ್ದ ಚೀನಾದ ವಿವಿಧ ಭಾಗಗಳಲ್ಲಿ ಇರುವ ಭಾರತೀಯರ ವಿಳಂಬ ವಾಗುವ ಸಾದ್ಯತೆಗಳಿವೆ.

23 ಸಾವಿರ‌ ವಿ್ಯದ್ಯಾರ್ಥಿಗಳು
ಭಾರತಕ್ಕೆ ಬರಲು ಕಾತುರ:

ಚೀನಾದಿಂದ ಭಾರತಕ್ಕೆ ಬರಲು 1500 ಮಂದಿ ಭಾರತೀಯರು ನೋಂದಣಿ ಮಾಡಿಕೊಳ್ಳಲಾಗಿದೆ.
ಚೀನಾದ ವಿವಿಧೆಡೆ 23 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಭಾರತಕ್ಕೆ ಬರಲು ಕಾತುರರಾಗಿದ್ದಾರೆ.

ಅಕ್ಟೋಬರ್ 23 ರಂದು ವುಹಾನ್ ನಿಂದ ದೆಹಲಿಗೆ ಬಂದ ವಿಮಾನದಲ್ಲಿ 19 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.‌ಹೀಗಾಗಿ ಇನ್ನಿತರೆ ಭಾರತೀಯರ ಆಗಮನ‌ ಮತ್ತಷ್ಟು ವಿಳಂಬ ವಾಗುವ ಸಾದ್ಯತೆಗಳಿವೆ