ಚೀನಾದಿಂದ ಭಾರತೀಯರಿಗೆ ೬೦ ಸಾವಿರ ವೀಸಾ

ನವದೆಹಲಿ, ಮೇ.೩೧- ೨೦೨೩ರ ಮೊದಲ ಐದು ತಿಂಗಳಲ್ಲಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಚೀನಾದ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ೬೦,೦೦೦ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ.
ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಈ ಕುರಿತು ಮಾತನಾಡಿ,
ಈ ವರ್ಷದ ಮೊದಲ ೫ ತಿಂಗಳಲ್ಲಿ, ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್, ವ್ಯಾಪಾರ, ಅಧ್ಯಯನ, ಪ್ರವಾಸಿ, ಕೆಲಸ, ಕುಟುಂಬ ಪುನರ್ಮಿಲನ ಸೇರಿದಂತೆ ಇತರ ಉದ್ದೇಶಗಳಿಗಾಗಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ೬೦,೦೦೦ ವೀಸಾಗಳನ್ನು ನೀಡಿದೆ ಎಂದರು.
ಇನೆ, ಪ್ರವಾಸೋದ್ಯಮ, ವ್ಯಾಪಾರ ಅಧ್ಯಯನ, ಕೆಲಸ ಮತ್ತು ಕುಟುಂಬ ಪುನರ್ಮಿಲನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಭಾರತೀಯ ಪ್ರಜೆಗಳಿಗೆ ವೀಸಾಗಳನ್ನು ಕೊಡಲಾಗಿದೆ.
ಮೂಲಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಅಂದ್ರೆ, ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶಿ ಪ್ರವಾಸಿಗರು ದೇಶಕ್ಕೆ ಪ್ರವೇಶಿಸಲಿದ್ದಾರೆ ಎಂದು ಚೀನಾ ಘೋಷಿಸಿದೆ.