ಚೀನಾದಲ್ಲಿ ನವೆಂಬರ್ ವೇಳೆಗೆ ಲಸಿಕೆ ಸಿದ್ಧ

ಬೀಜಿಂಗ್, ಸೆ.೧೫- ವಿಶ್ವದ ವಿವಿಧ ಭಾಗಗಳಲ್ಲಿ ಕೋರೋನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿರುವ ನಡುವೆಯೇ ಚೀನಾದಲ್ಲಿ ಅಭಿವೃದ್ಧಿ ಪಡಿಸಿರುವ ಲಸಿಕೆ ನವಂಬರ್ ನಲ್ಲಿ ಸಾಮಾನ್ಯ ಜನರ ಮೇಲೆ ಬಳಕೆಗೆ ಬಹುತೇಕ ಸಿದ್ದವಾಗಲಿದೆ.
ಚೀನಾದ ರಾಷ್ಟ್ರೀಯ ದೈತ್ಯ ಔಷಧ ತಯಾರಿಕಾ ಕಂಪನಿ ಸಿನೋಫಾರ್ಮ ಮತ್ತು ಅಮೇರಿಕಾದ ಪಟ್ಟಿಯಲ್ಲಿ ಸೇರಿರುವ ಸಿನೋವಾಕ್‌ಬಯೋಟೆಕ್ ಸಂಸ್ಥೆ ಮೂರು ಲಸಿಕೆಯನ್ನು ರಾಜ್ಯ ತುರ್ತು ಸೇವಾ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗುತ್ತಿದೆ.
ಚೀನಾದಲ್ಲಿ ನಾಲ್ಕು ಕೋರೋನೋ ಲಸಿಕೆ ಅಂತಿಮ ಹಂತದಲ್ಲಿದೆ ನವಂಬರ್ ನಲ್ಲಿ ಸಾರ್ವಜನಿಕ ಬಳಕೆಗೆ ಸಿದ್ದವಾಗಲಿದೆ ಎಂದು ಅಲ್ಲಿನ ಔಷಧ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಲ್ಲಿ ೪ ಕೋರೋನಾ ಲಸಿಕೆಗಳು ಅಂತಿಮ ಹಂತದಲ್ಲಿದೆ. ಕಳೆದ ಜುಲೈ ತಿಂಗಳಲ್ಲಿ ತುರ್ತು ಕಾರ್ಯಕ್ರಮದ ಯೋಜನೆ ಲಸಿಕೆಯನ್ನು ಜನರ ಮೇಲೆ ಪ್ರಯೋಗ ಮಾಡಲಾಗಿದೆ.
ನಾಲ್ಕು ಲಸಿಕೆಗಳ ಪೈಕಿ ಮೂರು ಲಸಿಕೆಗಳು ನವಂಬರ್ ನಲ್ಲಿ ಸಾರ್ವಜನಿಕರ ಬಳಕೆಗೆ ಬಹುತೇಕ ಸಿದ್ಧವಾಗಲಿದೆ ಎಂದು ಜೈವಿಕ ಸುರಕ್ಷತಾ ಮುಖ್ಯ ತಜ್ಞ ಗುಜೆನ್ ವೂ ಹೇಳಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಈಚೆಗೆ ನಡೆದ ಮಾನವರ ಮೇಲಿನ ಪ್ರಯೋಗಗಳು ಯಶಸ್ವಿಯಾಗಿದ್ದು ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿರುವ ಲಸಿಕೆಯನ್ನು ನವೆಂಬರ್ ನಿಂದ ಸಾಮಾನ್ಯ ಜನರ ಮೇಲೆ ಪ್ರಯೋಗ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಸಿನೋ ಫಾರ್ಮ ಸಂಸ್ಥೆ ಈ ವರ್ಷದ ಅಂತ್ಯದ ವೇಳೆಗೆ ಕೋರೋಣ ಲಸಿಕೆ ಸಾರ್ವಜನಿಕ ಬಳಕೆಗೆ ಸಿದ್ಧವಾಗಲಿದೆ ಎಂದು ಹೇಳಿತ್ತು.
೯.೨೫ ಲಕ್ಷ ಸಾವು:
ಕೊರೋನಾ ಸೋಂಕಿನಿಂದಾಗಿ ಜಗತ್ತಿನಲ್ಲಿ ಇದುವರೆಗೂ ಒಂಬತ್ತು ಲಕ್ಷದ ೨೫ ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನೋ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಕೆಲಸ ನಡೆಯುತ್ತಿದೆ.