
ನವದೆಹಲಿ,ಏ.೧೨- ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿದೆ, ನಮ್ಮದೇ ರಾಜ್ಯಕ್ಕೆ ಹೋಗಲು ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಭಾರತ, ಚೀನಾಕ್ಕೆ ತಿರುಗೇಟು ನೀಡಿದೆ.
ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದಕ್ಕೆ ಚೀನಾ ತಗಾದೆ ತಗೆದ ಕ್ರಮವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ಗೃಹ ಸಚಿವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಬಾರದು ಎಂದು ಹೇಳಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ.ಇದು ಚೀನಾದ ಪ್ರಾದೇಶಿಕ ಸಮಗ್ರತೆ ಉಲ್ಲಂಘಿಸಿದೆ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಅನುಕೂಲಕರವಾಗಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
“ಚೀನಾದ ಅಧಿಕೃತ ವಕ್ತಾರರು ಮಾಡಿದ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಭಾರತದ ಯಾವುದೇ ರಾಜ್ಯಗಳಿಗೆ ಭೇಟಿ ಮಾಡುವಂತೆ ಕೇಂದ್ರ ಗೃಹ ಸಚಿವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳೀದ್ದಾರೆ.
ಅವಿಭಾಜ್ಯ ಅಂಗ :
“ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ, ಮತ್ತು ಯಾವಾಗಲೂ ಉಳಿಯುತ್ತದೆ. ಅಂತಹ ಭೇಟಿಗಳನ್ನು ಆಕ್ಷೇಪಿಸುವುದು ಚೀನಾಕ್ಕೆ ಯಾವುದೇ ಕಾರಣಗಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಚೀನಾಕ್ಕೆ ತಿರುಗೇಟು ನೀಡಿದೆ.
ಅರುಣಾಚಲ ಪ್ರದೇಶದ ೧೧ ಸ್ಥಳಗಳಿಗೆ ಚೀನೀ ಹೆಸರುಗಳನ್ನು ಮರುನಾಮಕರ ಮಾಡಿದ ನಂತರ ಭಾರತ ಚೀನಾಕ್ಕೆ ತಿರುಗೇಟು ನೀಡಿತ್ತು. ರಾಜ್ಯದಲ್ಲಿ ನಡೆದ ಜಿ ೨೦ ಸಭೆಗೆ ಪ್ರತಿಕ್ರಿಯೆಯಾಗಿ ಭಾರತವು ಆಕ್ಷೇಪಣೆಗಳ ಹೊರತಾಗಿಯೂ ನಡೆಸಿದೆ
ಭಾರತವು ಕಳೆದ ವಾರ ಶ್ರೀನಗರದಲ್ಲಿ ಜಿ ೨೦ ಸಭೆಯ ದಿನಾಂಕಗಳನ್ನು ಘೋಷಿಸಿತು, ಪಾಕಿಸ್ತಾನ ಮತ್ತು ಚೀನಾ ಎರಡೂ ಆಕ್ಷೇಪಣೆಗಳಿಂದ ಹಿಂಜರಿಯಲಿಲ್ಲ. ಅರುಣಾಚಲ ಪ್ರದೇಶದ ಇತ್ತೀಚಿನ ಉದ್ವಿಗ್ನತೆಗಳು ಜಿ-೨೦ ಸಭೆ ನಡೆಸಲು ಮುಂದಾಗಿದೆ.