ಚಿಲ್ಲರೆ ಮಾರುಕಟ್ಟೆಯಲ್ಲಿ ಇ- ರೂಪಾಯಿ ಬಳಕೆ ಉತ್ತೇಜನಕ್ಕೆ ಆರ್ ಬಿಐ ಕ್ರಮ

ನವದೆಹಲಿ,ಸೆ.6-ದೇಶೀಯ  ಚಿಲ್ಲರೆ  ಮಾರುಕಟ್ಟೆಗಳಲ್ಲಿ ಇ-ರೂಪಾಯಿ ಬಳಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

ಡಿಜಿಟಲ್ ಹಣ ಅಥವಾ ಇ-ರೂಪಾಯಿಯ ವ್ಯಾಪಕ ಬಳಕೆ ಜೊತೆಗೆ  ಸಗಟು ವಹಿವಾಟುಗಳ ಬಳಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಂತರ ಬ್ಯಾಂಕ್ ಕರೆ ಹಣ ಮಾರುಕಟ್ಟೆ- ಸಿಬಿಡಿಸಿ ಟೋಕನ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ.

ಸೆಂಟ್ರಲ್ ಬ್ಯಾಂಕ್ 2022 ರಲ್ಲಿ ಸಗಟು ಮತ್ತು ಚಿಲ್ಲರೆ ವಹಿವಾಟುಗಳಿಗಾಗಿ ಸಿಬಿಡಿಸಿ  ಪ್ರಯೋಗ ಪ್ರಾರಂಭಿಸಿದೆ. ಪ್ರಾರಂಭವಾದಾಗಿನಿಂದ, 1.75 ದಶಲಕ್ಷ ಜನರು   ಬಳಕೆ ಮಾಡಿದ್ದಾರೆ .ಇದನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚುವರಿಯಾಗಿ, ಚಿಲ್ಲರೆ ವಲಯದಲ್ಲಿ ಇ-ರೂಪಾಯಿಯನ್ನು ಉತ್ತೇಜಿಸಲು  ಕೇಙದ್ರ ಸರ್ಕಾರದ   ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ‌

ಜುಲೈನಲ್ಲಿ ದಿನಕ್ಕೆ 20,000 ರಿಂದ 25,000 ರಿಂದ ಡಿಸೆಂಬರ್ ಅಂತ್ಯದ ವೇಳೆಗೆ 1 ದಶಲಕ್ಷ  ಚಿಲ್ಲರೆ ವಲಯದಲ್ಲಿ ಇ-ರೂಪಾಯಿ ವಹಿವಾಟುಗಳ ಸಂಖ್ಯೆಯನ್ನು 40 ಪಟ್ಟು ಹೆಚ್ಚಿಸಲು ಆರ್‌ಬಿಐ ಉದ್ದೇಶಿಸಿದೆ.

ಡಿಜಿಟಲ್ ಕರೆನ್ಸಿಗಳ ಬಳಕೆಯಿಂದ ಗಡಿಯಾಚೆಗಿನ ಪಾವತಿಗಳ ದಕ್ಷತೆ ಸುಧಾರಿಸಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್  ಹೇಳಿದ್ದಾರೆ.

ರುಪೇ ಮತ್ತು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೇರಿದಂತೆ ತನ್ನ ಇತರ ಡಿಜಿಟಲ್ ಉತ್ಪನ್ನಗಳನ್ನುತ್ತು ಪ್ರಚಾರ ಮಾಡಲು  ಪ್ರಯತ್ನಿಸುತ್ತಿದೆ. ರುಪೇಯನ್ನು ಜಾಗತಿಕ ಉತ್ಪನ್ನವನ್ನಾಗಿ ಮಾಡಲು ಮತ್ತು ಯುಪಿಐ ಅನ್ನು ಅಂತರಾಷ್ಟ್ರೀಯಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದರ ಎಂದು ಹೇಳಲಾಗಿದೆ‌

ಯುಪಿಐ ಅಳವಡಿಕೆಗಾಗಿ ಭಾರತ, ಈಗಾಗಲೇ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳೊಂದಿಗೆ ವಿವಿಧ ಹಂತದ ಮಾತುಕತೆಗಳು ಮತ್ತು ಚರ್ಚೆಗಳನ್ನು ನಡೆಸಿದೆ ಎನ್ನಲಾಗಿದೆ.