ಚಿರು ಫೋಟೋ ಹಂಚಿಕೊಂಡು ಭಾವುಕರಾದ ಮೇಘನಾ ರಾಜ್

ಬೆಂಗಳೂರು, ಏ.೩೦- ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ ನಿಧನರಾಗಿ ಜೂನ್‌ಗೆ ಒಂದು ವರ್ಷ ಆಗಲಿದೆ.
ಈ ಹಿನ್ನೆಲೆಯಲ್ಲಿ ಅಗಲಿದ ಪತಿ ನೆನೆದು ಪತ್ನಿ ಮೇಘನಾ ಭಾವುಕರಾಗಿದ್ದಾರೆ. ಲವ್ ಯೂ ಚಿರು.. ಮರಳಿ ಬಾ ಎಂದು ಬರೆದು ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ಅನ್ನು ನಟಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ.
ಮೇಘನಾ ತಮ್ಮ ಪತಿ ದಿವಂಗತ ಚಿರು ಅವರನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ. ಚಿರು ಜತೆ ಪ್ರವಾಸಕ್ಕೆ ಹೋದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಮತ್ತೆ ಹುಟ್ಟಿ ಬಾ ..
ಪತಿ ಪತ್ನಿ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರೂ ನಗು ನಗುತ್ತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತೆ. ಈ ಸುಂದರವಾದ ಹಳೆಯ ಫೋಟೋವನ್ನು ಹಂಚಿಕೊಂಡು, ಲವ್ ಯೂ ಚಿರು.. ಮರಳಿ ಬಾ ಎಂದು ಬರೆದು ಮೇಘನಾ ಭಾವುಕರಾಗಿದ್ದಾರೆ.
ಮೇಘನಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಮೇಘನಾ ರಾಜ್ ತಮ್ಮ ಮಗನ ೬ ತಿಂಗಳ ತುಂಬಿದ ಹಿನ್ನೆಲೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದರು.
ಮೇಘನಾ ಮಗನಿಗೆ ಜೂ. ಚಿರು ಅಂತಾನೇ ಎಲ್ಲರೂ ಕರೆಯುತ್ತಿದ್ದಾರೆ. ಆದರೆ ಮೇಘನಾ ರಾಜ್?ಗೆ ಮಗನ ಜತೆ ಆಡುತ್ತಾ, ನಲಿಯುತ್ತಾ, ಆರೈಕೆ ಮಾಡುವುದರೊಂದಿಗೆ ಪತಿಯ ನೆನಪು ಕಾಡೋದು ಸಹಜ ಎಂದಿದ್ದಾರೆ.