ಚಿರು ಜನ್ಮದಿನ : ‘ಕ್ಷತ್ರಿಯ’ ಟೀಸರ್ ಬಿಡುಗಡೆ, ಪತಿ ಸಮಾಧಿಗೆ ಮೇಘನಾ ಪೂಜೆ


ಬೆಂಗಳೂರು,ಅ 17- ನಟ ಚಿರಂಜೀವಿ ಅವರ ಜನ್ಮದಿನದಂದು ನಟ, ನಟಿಯರು, ಆತ್ಮೀಯರು ಸಾಮಾಜಿಕ ಜಾಲತಾಣದಲ್ಲಿ ನಗೆಮೊಗದರಸ ಚಿರುವನ್ನು ಸ್ಮರಿಸಿದ್ದಾರೆ.
ಚಿರು ಜನ್ಮದಿನದಂದೇ ಅವರ ನಟನೆಯ ಕೊನೆ ಚಿತ್ರ ‘ಕ್ಷತ್ರಿಯ’ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಸಾಹಸ ದೃಶ್ಯಗಳ ಜತೆಗೆ ಅವರು ಮಗುವೊಂದನ್ನು ಆಡಿಸುವ ದೃಶ್ಯವಿದೆ. ಇದೇ ವೇಳೆ ಮೇಘನಾ ರಾಜ್‍ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ಸರ್ಜಾ ಮತ್ತು ಕುಟುಂಬ ಸದಸ್ಯರು ಸಾಥ್ ನೀಡಿದ್ದಾರೆ.
ಚಿರು ಜನ್ಮದಿನದಂದೇ ಜ್ಯೂನಿಯರ್ ಸರ್ಜಾ ಆಗಮನವಾದೀತೇ ಎಂಬ ಪ್ರಶ್ನೆಗೆ ಆದರೂ ಆಗಬಹುದು ಎಂದಿದ್ದು, ಮತ್ತೊಂದು ಪ್ರಶ್ನೆಗೆ ಅವಳಿ ಮಕ್ಕಳು ಆದರೂ ಆಗಬಹುದು ಎಂದು ಮೇಘನಾ ಹೇಳಿದ್ದಾರೆ.