ಚಿರಸ್ತಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ

ಹರಪನಹಳ್ಳಿ.ಜು.೨೧ : ತಾಲೂಕಿನ ಚಿರಸ್ತಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ  ಶಾಸಕ ಜಿ. ಕರುಣಾಕರೆಡ್ಡಿ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಗ್ರಾಮಗಳಲ್ಲಿನ ಕುಂದು ಕೊರತೆಗಳನ್ನ ಆಲಿಸಿ ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ನಡೆಸಿದರು.ಚಿರಸ್ತಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಸರಿಪಡಿಸುವಂತೆ ಪದೇ-ಪದೆ ಗ್ರಾಮ ಪಂಚಾಯ್ತಿಗೆ ತಿಳಿಸಿದರೂ ಪಿಡಿಒ ಶಿವಣ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಪಂಚಾಯ್ತಿಗೆ ಸರಿಯಾಗಿ ಬರುವುದಿಲ್ಲ. ಇದ್ದರಿಂದ ಸಾರ್ವಜನಿಕರ ಕೆಲಸ ಆಗುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಸಮಸ್ಯೆ ತೋಡಿಕೊಂಡರು,ಆಗ ಶಾಸಕರು ದಿಢೀರ್ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ಪಿಡಿಒ ಹಾಜರಾತಿ ಪರಿಶೀಲಿಸಿದರು. ಈ ವೇಳೆ ಗ್ರಾಪಂ ಸದಸ್ಯರು ಪಿಡಿಒ ಸಂಜೆ 4-5 ಗಂಟೆಗೆ ಬರುತ್ತಾರೆ. ಆ ಸಮಯದಲ್ಲಿ ಪಂಚಾಯ್ತಿಯಲ್ಲಿ ಯಾವುದೇ ಕೆಲಸ ಆಗುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಬೇರೆ ಬೇರೆ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ದೂರಿದರು,ಇದೆಲ್ಲವನ್ನು ಗನಮನಿಸಿದ ಶಾಸಕರು ಈ ල ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ನಿಮ್ಮ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಸರ್ಕಾರದ ಸಂಬಳ ಪಡೆಯುತ್ತೀರಿ. ಸರಿಯಾಗಿ ಕರ್ತವ್ಯ ಯಾಕೆ ನಿರ್ವಹಿಸುವುದಿಲ್ಲ, ಸರ್ಕಾರದ ಕೆಲಸ ದೇವರ ಕೆಲಸ ಎಂದು ಪಂಚಾಯ್ತಿ ಕಚೇರಿ ಮೇಲೆ ಬರೆಯಲಾಗಿದೆ. ಇದನು ನೋಡಿಯಾದರೂ ಕೆಲಸ ಮಾಡಿ ಎಂದು ತಾಕೀತು ಮಾಡಿದರು.ಇ-ಸ್ವತ್ತು ಮಾಡಿಸಿಕೊಳ್ಳಲು 2015ರಲ್ಲಿ ಅರ್ಜಿ ಹಾಕಿದ್ದೇನೆ. ಇದುವರೆಗೂ ಇ ಸ್ವತು ಆಗಿಲ್ಲ ಎಂದು ಸಾರ್ವಜನಿಕರೊಬ್ಬರು ಶಾಸಕರಿಗೆ ತಿಳಿಸಿದಾಗ ಆಗ ಅಧಿಕಾರಿಗಳು ತಾಂತ್ರಿ ಸಮಸ್ಯೆ ಯಿಂದಾಗಿ ಇ ಸತ್ತು ಆಗುತ್ತಿಲ್ಲ ಎಂದರು. ಆಗ ಶಾಸಕರು ಅದನ್ನ ರೈಟಿಂಗ್‌ನಲ್ಲಿ ಕೊಡಿ ಸಾರ್ವಜನಿಕರನ್ನು ಯಾಕ ಅಲೆದಾಡುಸುತ್ತಿಲ್ಲ ಎಂದರು.ನAತರ ಜಿ.ದಾದಾಪುರ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸುವ ವೇಳೆ ಸಾರ್ವಜನಿಕನೊಬ್ಬ ಸರ್ಕಾರದಿಂದ ಬರುವ ವಸತಿ ಯೋಜನೆಯಡಿ ಮನೆ ಮಂಜೂರಾತಿಗೆ ಗ್ರಾಪಂ ಸದಸ್ಯರು 20 ರಿಂದ 30 ಸಾವಿರ ಹಣ ಕೇಳುತ್ತಾರೆ. ನಾವು ಬಡವರು ಎಲ್ಲಿಂದ ಕೊಡಬೇಕು ಎಂದಾಗ ಅಲ್ಲಿದ್ದ ಗ್ರಾಪಂ ಸದಸ್ಯರಿಗೆ ಅವರಿಗೆ ಮನೆ ವಸತಿ ಸೌಲಭ್ಯ ಕಲ್ಪಿಸಿ ಎಂದು ಹೇಳಿದರು.ಬಳಿಕ ಅಲಗಿಲವಾಡ ಗ್ರಾಮಕ್ಕೆ ಭೇಟಿ ನೀಡಿದಾಗ ಶಾಲಾ ಕೊಠಡಿ,ಅಲಗಿಲವಾಡ-ಕ0ಡಿಕೇರಿಗೆ ಸ0ಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡರು. ಆಗ ಶಾಸಕರು ಸಂಬAಧಪಟ್ಟ ಎಂಜಿನಿಯರ್‌ಗೆ ರಸ್ತೆ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಿ ಎ0ದು ಸೂಚಿಸಿದರು.ಇದೇ ಸಮಯದಲ್ಲಿ ಗ್ರಾಮದ ಸ್ಥಶಾನ ಅಭಿವೃದ್ಧಿ ಪಡಿಸಿಕೊಡುವಂತೆ ಶಾಸಕರ ಬಳಿ ಗ್ರಾಮಸ್ಥರು ಕೇಳಿಕೊಂಡಾಗ ಶಾಸಕರು ಜೆಸಿಬಿ ಕಳಿಸಿಕೊಡುತ್ತೇನೆ. ಉಳಿದಂತೆ ಟ್ರ‍್ಯಾಕ್ಟರ್ ಬಳಸಿಕೊಂಡು ಅಭಿವೃದ್ಧಿಪಡಿಸಿಕೊಳ್ಳಿ ಎಂದರು. ನಂತರ ಗ್ರಾಮದ ಕ್ಯಾಂಪ್ ಗೆ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಹಾಗೂ ಮಹಿಳಾ ಸ್ವ ಸಹಾಯ ಸಂಘಕ್ಕೆ ಕಟ್ಟಡ ಮಾಡಿಕೊಡುವಂತೆ ಕೋರಿದರು.ನಂತರ ಶಿವಪುರ, ಗಿರಿಯಾಪುರ ಗ್ರಾಮಗಳಿಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಶಿವಕುಮಾರ ಬಿರಾದರ ಇಒ ಪ್ರಕಾಶನಾಯ್ಕ, ಬಿಇಒ ಯು. ಬಸವರಾಜಪ್ಪ, ಎಇಇ ಸಿದ್ದರಾಜ, ಕೃಷಿ ಸಹಾಯಕನಿರ್ದೇಶಕ ಮಂಜುನಾಥ ಗೊಂದಿ, ತೆಲಿಗಿ ಬೆಸ್ಕಾಂ ಎಇಇ ಜಯ್ಯಪ್ಪ, ಶಿಕ್ಷಣ ಸಂಯೋಜಕ ಮಂಜುನಾಥ್ ಗಿರಜ್ಜಿ, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಿರಸ್ತಹಳ್ಳಿ ಗ್ರಾಪಂ ಅಧ್ಯಕ್ಷ ವಿಶಾಲಾಕ್ಷಮ್ಮ, ಮುಖಂಡರಾದ ಶ್ರೀಧರ್ ಸ್ವಾಮಿ, ವಿಷ್ಣುವರ್ಧನ್ ರೆಡ್ಡಿ, ಶಾಸಕರ ಆಪ್ತ ಕಾರ್ಯದರ್ಶಿ ಹೇಮಂತ್ ಕುಮಾರ್, ಸಿದ್ದೇಶ್ ರೆಡ್ಡಿ, ಚೆನ್ನಮಲ್ಲಿಕಾರ್ಜುನ, ಮೌನೇಶ್ ಬಡಿಗೇರ್, ಕಣಿವೆಹಳ್ಳಿ ಮಂಜುನಾಥ,ಭAಗಿ ಚಂದ್ರಪ್ಪ, ಶುಗಾರತೋಟ ನಿಂಗಾರಾಜ್ ಎಂ.ಮಲ್ಲೇಶ್, ಇತರರು ಇದ್ದರು.

Attachments area