ಚಿರತೆ ಸೆರೆಹಿಡಿದ ಬೆನ್ನಲ್ಲೇ ಮತ್ತೊಂದು ಚಿರತೆ ಪ್ರತ್ಯಕ್ಷ

ಸಂಜೆವಾಣಿ ವಾರ್ತೆ
ಹನೂರು: ಜು.19:- ಮೊನ್ನೆಯಷ್ಟೇ ಸಿದ್ದಪ್ಪನ ಬೆಟ್ಟದ ಹತ್ತಿರ ಚಿರತೆ ಸೆರೆ ಹಿಡಿದ ಬೆನ್ನ ಹಿಂದೆಯೇ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಜಾನುವಾರುಗಳನ್ನು ಬಲಿ ತೆಗೆದುಕೊಂಡ ಘಟನೆ ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲಿ ನಡೆದಿದೆ.
ಕಗ್ಗಲಿಗುಂದಿ ಪೆÇೀಡಿನಲ್ಲಿ ಬಾಲಕಿಯನ್ನು ಬಲಿ ತೆಗೆದುಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. ಆದರೆ ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲೇ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಕೊಂಗರಹಳ್ಳಿ ಗ್ರಾಮದ ಭರತ್ ಕೆ.ಎಸ್ ಎಂಬುವರ ಜಮೀನಿನಲ್ಲಿ ಎರಡು ಹಸುವನ್ನು ಕೊಂದು ಹಾಕಿದೆ.
ಕಗ್ಗಲಗುಂದಿ ಪೆÇೀಡಿನಲ್ಲಿ ಬಾಲಕಿಯನ್ನು ಬಲಿ ತೆಗೆದಕೂಂಡಿರುವ ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಾಯ್ತೂ ಎಂದು ಈ ಭಾಗದದ ಜನತೆ ನಿಟ್ಟಿಸಿರು ಬಿಟ್ಟಿದ್ದರು. ಆದರೆ ಈಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿರುವುದು ಈ ಭಾಗದ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.ಈ ಚಿರತೆ ಉಪಟಳದಿಂದ ಬೇಸತ್ತಿರುವ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ.
ಗುಂಡಲ್ ಜಲಾಶಯದ ಹತ್ತಿರ ಚಿರತೆ ದಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೂಂಡ ಸುದ್ದಿ ತಿಳಿದ ಸಾರ್ವಜನಿಕರು ಬೆಚ್ಚಿ ಬೀಳುವಂತಾಗಿದ್ದು.
ಬೋನಿಗೆ ಬಿದ್ದ ಚಿರತೆ ಬಾಲಕಿಯನ್ನು ಬಲಿ ತೆಗೆದುಕೂಂಡ ಚಿರತೆ ಇದೆ ಇರಬಹುದು ಎಂದು ಲೆಕ್ಕಚಾರ ಹಾಕಿದ್ದ ಜನರಿಗೆ ಇದೀಗ ಬಹಳಷ್ಟು ಚಿಂತೆಗೀಡಾಗುವಂತೆ ಮಾಡಿದೆ.
ಸಿದ್ದಪ್ಪನ ಬೆಟ್ಟದ ಹತ್ತಿರ ಮೊನ್ನೆ ತಾನೆ ಸೆರೆಹಿಡಿದ ಚಿರತೆ ಬಾಲಕಿಯನ್ನು ಬಲಿ ಪಡೆದ ಚಿರತೆ ಇದೆಯಾ ಅಥವಾ ಬೇರೇ ಚಿರತೆಯಾ ಎಂಬ ಅನುಮಾನ ವ್ಯಕ್ತವಾಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯಾಧಿಕಾರಿಗಳು ಈ ಬಗ್ಗೆ ನಿಖರವಾಗಿ ಸ್ಪಷ್ಟ ಪಡಿಸುವ ಜೊತೆಗೆ ಕಾಡಂಚಿನ ಗ್ರಾಮದಲ್ಲಿರುವ ಜಮೀನಿಗಳಿಗೆ ಚಿರತೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ನುಸಳದಂತೆ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಸಕ ಎಂ.ಆರ್. ಮಂಜುನಾಥ್ ಅವರು ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಚಿರತೆ ದಾಳಿಯಿಂದ ಮೃತಪಟ್ಟ ಕರುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು, ಚಿರತೆ ದಾಳಿಗೆ ತಪ್ಪಿಸಬೇಕು ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸಾಲನ್ ಸೇರಿದಂತೆ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಲೀಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಚಿರತೆ ಎರಡು ಕರುವಿನ ಮೇಲೆ ದಾಳಿ ದಾಳಿ ಮಾಡಿದ್ದ ಹಿನ್ನಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮಾಂಸತಿನ್ನದೆ ಇರುವ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯಲು ಮೃತ ಕರುವನ್ನು ಬೋನಿನೊಳಗೆ ಇಟ್ಟು ಬೋನಿನ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಜನರುಆತಂಕಕ್ಕೆ ಒಳಗಾಗಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.