ಚಿರತೆ ಸೆರೆಗೆ ನೆಟ್‍ವರ್ಕ್ ಟ್ರಾಪರ್ ಕ್ಯಾಮೆರಾ

•ಫಲ ನೀಡದ ಆನೆಗಳ ಕಾರ್ಯಾಚರಣೆ
•50 ಸಿಸಿ ಕ್ಯಾಮಾರ, ಡ್ರೋಣ ಕ್ಯಾಮರಾ
•ನಿತ್ಯ ಸ್ಥಳ ಬದಲಾವಣೆ ಮಾಡುತ್ತಿರುವ ಚಿರತೆ
•ಕಾರ್ಯಾಚರಣೆಗೆ ಹಿನ್ನಡೆ


ಡಿ.ವೈ.ಗುಡಿಹಾಳ
ಗಂಗಾವತಿ ಜ.8: ಚಿರತೆ ಸೆರೆಗೆ ನಾನಾ ಪ್ರಯೋಗ ಮಾಡಿ ವಿಫಲವಾಗಿರುವ ಅರಣ್ಯ ಇಲಾಖೆ ಮತ್ತೊಂದು ವಿಶೇಷ ತಂತ್ರ ರೂಪಿಸಿದೆ.
ಹೌದು, ತಾಲೂಕಿನ ಆನೆಗೊಂದಿ ವ್ಯಾಪ್ತಿಯ ಪರಿಸರದಲ್ಲಿ ಚಿರತೆ ಹಾವಳಿಯಿಂದ ಜನಭಯಭೀತರಾಗಿದ್ದಾರೆ. ಅಲ್ಲದೇ ಇಬ್ಬರನ್ನು ಕೊಂದು ಹಾಕಿ, ನಾಲ್ಕೈದು ಜನರಿಗೆ ಗಾಯಗೊಳಿಸಿದ ಚಿರತೆ ಸೆರೆಗೆ ಅರಣ್ಯ ಇಲಾಖೆ ಆನೆಗಳ ಕಾರ್ಯಾಚರಣೆ ಮಾಡಿದರೂ ಸಹ ಪ್ರಯೋಜನವಾಗಿಲ್ಲ.
ಈಗಾಗಲೇ ಹಲವು ಕಡೆ ಬೋನ್, ಸಿಸಿ ಕ್ಯಾಮರಾ, ಡ್ರೋನ್ ಕ್ಯಾಮರ್ ಅಳವಡಿಸಿ, ಚಿರತೆ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಲಾಗಿತ್ತು. ಆದರೆ, ಓಡಾಡುವ ಸ್ಥಳವನ್ನು ಚಿರತೆ ಬದಲಾಯಿಸಿದ್ದು,ಅರಣ್ಯ ಸಿಬ್ಬಂದಿಯನ್ನು ನಿದ್ದೇಗೇಡಿಸಿದೆ.
ಶಿವಮೊಗ್ಗದ ಸಕ್ರೆಬೈಲಿನಿಂದ ಎರಡು ಆನೆಗಳು ಆಗಮಿಸಿ 6 ದಿನ ಕಳೆದಿದ್ದು, ಚಿರತೆಯ ಇಂತಿಷ್ಟು ಸುಳಿವು ಸಿಕ್ಕಿಲ್ಲ. ಹಾಗಾಗಿ ನೆಟ್‍ವರ್ಕ್ ಟ್ರಾಪರ್ ಕ್ಯಾಮೆರಾಗಳ ಮೂಲಕ ಚಿರತೆ ಸೆರೆ ಹಿಡಿಯಲು ಮುಂದಾಗಿದೆ.


ನೆಟ್ ವರ್ಕ್ ಕ್ಯಾಮರಾ: ಅರಣ್ಯ ಇಲಾಖೆ ಬೆಂಗಳೂರಿನಿಂದ ಸಾಫ್ಟ್‍ವೇರ್ ತಂತ್ರಜ್ಞರನ್ನು ವಿರೂಪಾಪುರು ಗಡ್ಡೆಗೆ ಕರೆಯಿಸಿದ್ದು, ನೆಟ್‍ವರ್ಕ್ ಟ್ರಾಪರ್ ಕ್ಯಾಮೆರಾಗಳ ಮೂಲಕ ಚಿರತೆ ಸೆರೆ ಹಿಡಿಯಲು ಬುಧವಾರ ಚರ್ಚಿ ನಡೆಸಿತು. ನೆಟ್‍ವರ್ಕ್ ಟ್ರಾಪರ್ ಕ್ಯಾಮರಾ ಲೈವ್ ಕ್ಯಾಮರಾವಾಗಿದ್ದು, ಇದಕ್ಕೆ ಜಿಯೋ ಸಿಮ್ ಅಳವಡಿಸಲಾಗಿದೆ. ಈ ಕ್ಯಾಮರಾ ತಕ್ಷಣ ಚಿತ್ರ ಮತ್ತು ಸ್ಥಳದ ಮಾಹಿತಿ ಸಂಗ್ರಹಿಸಿ ಸ್ಯಾಟ್‍ಲೈಟ್ ಮೂಲಕ ಮೊಬೈಲ್, ಇ–ಮೇಲ್‍ಗೆ ಮಾಹಿತಿ ನೀಡುತ್ತ್ತಿದ್ದು, ಚಿರತೆ ಸೆರೆ ಹಿಡಿಯಲು ಸಾಧ್ಯವಾಗಲಿದೆ. ಈ ಒಂದು ಕ್ಯಾಮರಾ 2ರಿಂದ 3 ಲಕ್ಷ ರೂ.ಬೆಲೆ ಇದ್ದು, ಆರ್ಥಿಕ ಸಮಸ್ಯೆವಿದ್ದು, ಮತ್ತುಷ್ಟು ಟ್ರಾಪರ್ ಕ್ಯಾಮರಾ ಖರೀದಿಸಲು ಅರಣ್ಯ ಇಲಾಖೆಗೆ ಸವಾಲಾಗಿದೆ.
50 ಟ್ರ್ಯಾಪ್ ಕ್ಯಾಮರ್ ಕಣ್ಗಾವಲು: ಚಿರೆತೆ ಸೆರೆಗೆ ಸಾಣಾಪುರು, ಆನೆಗೊಂದಿ, ವಿರುಪಾಪುರ ಗಡ್ಡಿ, ಜಂಗ್ಲಿ ಸೇರಿ ನಾನಾ ಕಡೆ 50 ಟ್ರ್ಯಾಪ್ ಕ್ಯಾಮರಾ ಅಳವಡಿಸಲಾಗಿದೆ. ನಾನಾ ಕಡೆ ಬೋನ್ ಇಡಲಾಗಿದ್ದು, ಬೋನ್‍ಗೆ ಬೀಳದೇ ತಪ್ಪಿಸಿಕೊಳ್ಳುತ್ತಿದೆ.
ಲೈನ್ ಸರ್ವೇ ಆರಂಭ: ಚಿರತೆ ಪತ್ತೆಯಾಗದ ಹಿನ್ನೆಲೆ 20 ಜನ ಸಿಬ್ಬಂದಿ ನೇತೃತ್ವದಲ್ಲಿ ಲೈನ್ ಸರ್ವೆ ಬುಧವಾರದಿಂದ ಆರಂಭಗೊಂಡಿದ್ದು, ಮೂರು ತಂಡ ರಚಿಸಲಾಗಿದೆ. ಈ ಸರ್ವೆಯಲ್ಲಿ ಚಿರತೆ ಓಡಾಡಿದ ಸ್ಥಳ, ಮಲ, ಮೂತ್ರ ಸಿಕಿದ್ದು, ಲೈನ್ ಸರ್ವೆ ಮುಂದುವರಿದ್ದು, ನೆಟ್‍ವರ್ಕ್ ಟ್ರಾಪರ್ ಕ್ಯಾಮರಾ ಲೈವ್ ಕ್ಯಾಮರಾದಲ್ಲಿ ಚಿರತೆಯ ಸುಳಿವು ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


ನೆಟ್‍ವರ್ಕ ಟ್ರ್ಯಾಪರ್ ಕ್ಯಾಮರಾದ ವಿಶೇಷತೆ
ಉಪಗ್ರಹ ಆಧರಿತ ನೆಟ್‍ವರ್ಕ್ ಟ್ರ್ಯಾಪರ್ ಕ್ಯಾಮರಾ ಆಧುನಿಕ ತಂತ್ರಜ್ಞಾನ ಹೊಂದಿದೆ. ಅಲ್ಲದೇ 100 ಮೀಟರ್ ವ್ಯಾಪ್ತಿಯಲ್ಲಿ ಮನುಷ್ಯರು, ವನ್ಯಪ್ರಾಣಿಗಳು ಇರುವ ಪೋಟೊ, ಮಾಹಿತಿ ನೀಡುವ ಸಾಮಥ್ರ್ಯ ಹೊಂದಿದೆ. ಅಲ್ಲದೆ, ಆ ಸ್ಥಳದ ಮಾಹಿತಿ,, ಪೋಟೋ, ನೆಟ್‍ವರ್ಕ್ ಸೇರಿ ಸಮಗ್ರ ಮಾಹಿತಿಯನ್ನು ಈ ಕ್ಯಾಮರಾ ನೀಡುತ್ತಿದ್ದು, ಪ್ರಮುಖ ಸ್ಥಳದಲ್ಲಿ ಈ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಹರ್ಷಾಭಾನು ಮಾಹಿತಿ ನೀಡಿದರು.


ಚಿರಗೆ ಸೆರೆಗಾಗಿ ನಾನಾ ಕಡೆ ಬೋನ್, ಹನಿ ಟ್ರ್ಯಾಪ್ ಕ್ಯಾಮರಾ ಅಳವಡಿಸಿ ನಿಗಾವಹಿಸಲಾಗಿದೆ. ಉಪಗ್ರಹ ಆಧರಿತ ನೆಟ್‍ವರ್ಕ ಟ್ರ್ಯಾಪರ್ ಕ್ಯಾಮರ್ ಅಳವಡಿಸಿದ್ದು, ಆದಷ್ಟು ಬೇಗ ಚಿರತೆ ಸುಳಿವು ಸಿಗುವ ಸಾಧ್ಯತೆ ಇದೆ.
ಹರ್ಷಾಭಾನು, ಜಿಲ್ಲಾ ಅರಣ್ಯಾಧಿಕಾರಿ, ಕೊಪ್ಪಳ