ಚಿರತೆ ಸೆರೆಗಾಗಿ ಆನೆಗಳಿಂದ ಕೂಬಿಂಗ್ ಕಾರ್ಯಾಚರಣೆ

ಗಂಗಾವತಿ ಜ.4: ಚಿರತೆ ಸೆರೆಗಾಗಿ ಶಿವಮೊಗ್ಗದ ಜಿಲ್ಲೆಯ ಸಕ್ರೆಬೈಲಿನ ಆನೆಗಳನ್ನು ತರಿಸಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಎರಡು ಆನೆಗಳ ಜೊತೆಗೆ 11 ಜನರ ಅನುಭವಿ ತಂಡ ತಾಲೂಕಿನ ವಿರುಪಾಪುರ ಗಡ್ಡೆಗೆ ಭಾನುವಾರ ಬಂದಿದೆ.
ಆನೆಗೊಂದಿ, ಸಾಣಾಪೂರು ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು. ಈ ಆನೆಗಳು ದೂರದಿಂದ ಚಿರತೆ ಓಡಾಡುವ ಸ್ಥಳವನ್ನು ಗುರುತಿಸಿ ಮಾಹಿತಿ ನೀಡುತ್ತವೆ.
ವಿರೂಪಾಪುರು ಗಡ್ಡೆ, ಆನೆಗೊಂದಿ, ಸಾಣಾಪೂರು ಸೇರಿ ವಿವಿಧೆಡೆ ಸಿಸಿ ಕ್ಯಾಮರಾ ಹಾಗೂ ಬೋನ್ ಅಳವಡಿಸಿ ಚಿರತೆಯ ಮೇಲೆ ತೀವ್ರ ನಿಗಾ ‌ವಹಿಸಲಾಗಿದೆ.
ತಾಲೂಕಿನ ಆನೆಗೊಂದಿ ವ್ಯಾಪ್ತಿಯ ಬೆಟ್ಟದ ಪರಿಸರದಲ್ಲಿ ನಿತ್ಯ ಚಿರತೆ ಪ್ರತ್ಯಕ್ಷ ಆಗುತ್ತವೆ. ಆದರೆ, ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ತಂತ್ರ ರೂಪಿಸಿ ವಿಫಲವಾಗಿತ್ತು. ಈಗ ಆನೆಗಳ ಮೊರೆ ಹೋಗಿದೆ.
ಕಾರ್ಯಾಚರಣೆಯಲ್ಲಿ ಕೊಪ್ಪಳದ ಡಿಸಿಎಫ್ ಹರ್ಷಬಾನು, ಬಳ್ಳಾರಿಯ ಸಿಸಿಎಫ್ ಲಿಂಗರಾಜ್,
ಎಸಿಎಫ್ ಎಸ್.ವೈ.ಬಳಗಿ, ಗಂಗಾವತಿ ವಲಯ ಅರಣ್ಯ ಅಧಿಕಾರಿ ಶಿವಾರಾಜ್ ಮೇಟಿ, ಶ್ರೀನಿವಾಸ್, ಡಾ.ವಿನಯ ಶಂಕರೆಬಯ್ಯಾಲು, ದರೋಜಿ ಕರಡಿ ದಾಮದ ಸಿಬ್ಬಂದಿ ಹಾಗೂ ಗಂಗಾವತಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಕ್ರೆಬೈಲಿನ ಆನೆಗಳು ಆಗಮನ
ಚಿರತೆಗಳ ಸೆರೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಎರಡು ಆನೆಗಳು ತರಿಸಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಭಾನುವಾರ ಬೆಳಗ್ಗೆ ವಿರುಪಾರು ಗಡ್ಡೆ ಹಾಗೂ ಸಾಣಾಪೂರು ಸುತ್ತಲೂ ಕಾರ್ಯಾಚರಣೆ ನಡೆಸಲಾಗುತ್ತದೆ. ಅಲ್ಲದೆ ನಾನಾ ಕಡೆ ಬೋನ್ ಸಹ ಅಳವಡಿಸಿದ್ದು, ಚಿರತೆಯ ಚಲನವಲನ ಮೇಲೆ ನಿಗಾವಹಿಸಲಾಗಿದೆ ಎಂದು ಗಂಗಾವತಿ ವಲಯ ಅರಣ್ಯ ಇಲಾಖೆಯ ಶ್ರೀನಿವಾಸ್ ಸಂಜೆವಾಣಿಗೆ ಮಾಹಿತಿ ನೀಡಿದರು.