ಚಿರತೆ ದಾಳಿ 32 ಕುರಿಗಳ ಸಾವು

ಗಂಗಾವತಿ:ಮೇ.18-ಹೊಲದಲ್ಲಿ ಹಾಕಿದ್ದ ಕುರಿಹಟ್ಟಿ ‌ಮೇಲೆ ಮೂರು‌ ಚಿರತೆ ದಾಳಿ ಮಾಡಿ 32 ಕುರಿಗಳನ್ನು ಕೊಂದು ಹಾಕಿ, ಅವುಗಳಲ್ಲಿ ಎಂಟು ಕುರಿಗಳನ್ನು ಹೊತ್ತುಕೊಂಡು ಹೋದ ಘಟನೆ ತಾಲೂಕಿನ ಸಿದ್ದಿಕೇರಿಯ ಹೊರವಲಯದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಯಮನೂರಪ್ಪ ನಾಯಕ ಎಂಬುವವರಿಗೆ ಸೇರಿದ ಕುರಿಗಳು. ಹೊಲದಲ್ಲಿ ಕುರಿಹಟ್ಟಿ ಹಾಕಿದ್ದರು. ಆದರೆ, ಮಂಗಳವಾರ ಬೆಳಗಿನ ಜಾವ ಮೂರು ಚಿರತೆಗಳು ಕುರಿಹಟ್ಟಿಯಲ್ಲಿದ್ದ ಕುರಿಗಳ ಮೇಲೆ ದಾಳಿ ನಡೆಸಿ 24 ಕುರಿಮರಿಗಳನ್ನು ಕೊಂದು ಹಾಕಿ ಎಂಟು ಕುರಿಗಳನ್ನು ಹೊತ್ತುಕೊಂಡು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಘಟನೆ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಗಂಗಾವತಿ ಅರಣ್ಯಧಿಕಾರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಯಮನೂರಪ್ಪ ಇವರಿಗೆ ಸೂಕ್ತ ಪರಿಹಾರ
ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಹೆಚ್.ಗಿರೀಗೌಡ, ಮಾಜಿ ನಗರಸಭೆ ಅಧ್ಯಕ್ಷ ಹನಮಂತಪ್ಪ ನಾಯಕ, ಬಿಜೆಪಿ ಮುಖಂಡ ಯಂಕಪ್ಪ ಕಟ್ಟಿಮನಿ, ಪತ್ರಕರ್ತ ಕೃಷ್ಣಪ್ಪ ನಾಯಕ, ಅರಣ್ಯಾಧಿಕಾರಿ ಶಿವರಾಜ ಮೇಟಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇದ್ದರು.