ಚಿರತೆ ದಾಳಿ;ನಾಯಿ ಬಲಿ:ಗ್ರಾಮಸ್ತರಲ್ಲಿ ಆತಂಕ

ಕೊಟ್ಟೂರು ಸೆ 17: ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಜಮೀನೊಂದರಲ್ಲಿ ಚಿರತೆ ದಾಳಿ ನಡೆಸಿ ನಾಯಿಯನ್ನು ಹೊತೊಯ್ದು ಕೊಂದಿರು ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ.
ನಿಂಬಳಗೆರೆ ಗ್ರಾಮದ ಚಂದ್ರಶೇಖರ ಎಂಬುವವರು ಜಮೀನಿನಲ್ಲಿ ಘಟನೆ ನಡೆದಿದ್ದು, ಜಮೀನಿನ ಮನೆಯಮುಂದೆ ಕಟ್ಟಿ ಹಾಕಲಾಗಿದ್ದ ಕುರಿಗಳ ಮೇಲೆ ದಾಳಿ ಮಾಡಲು ಚಿರತೆ ಹೊಂಚು ಹಾಕಿದಾಗ ಎರಡು ನಾಯಿಗಳು ಚಿರತೆ ದಾಳಿಯನ್ನು ತಪ್ಪಿಸಿದ್ದು,ಚಿರತೆ ನಾಯಿಯನ್ನು ಹೊತೊಯ್ದು ತಿಂದಿದೆ. ತೋಟದ ಮನೆಯಲ್ಲಿ ನಾನು ಸಹೋದರ ರಾತ್ರಿ ಮಲಗಿದಾಗ ನಾಯಿಗಳು ಬೊಗಳಲು ಆರಂಭಿಸಿದವು, ನಾವು ಹೊಳಗಡೆಯ ಭಯದಿಂದ ಇದ್ದೆವು, ನಾಯಿಯನ್ನು ಹೊತೊಯ್ದದ್ದು ಕಂಡು ಗಾಭರಿಗೊಂಡೆವು, ಕತ್ತಲಿದರಿಂದ ಸ್ಪಷ್ಟವಾಗಿ ಕಾಣಲಿಲ್ಲ ಎಂದು ಪ್ರತ್ಯಕ್ಷದರ್ಶಿ ತಿಪ್ಪೇಸ್ವಾಮಿ ಹೇಳಿದರು
ಈ ಭಾಗದಲ್ಲಿ ಈ ಹಿಂದೆ ಚಿರತೆ ಹೊಡಿಸಿದ್ದೇವು, ಪುನಃ ಬಂದಿರಬಹುದು, ಚಿರತೆ ದಾಳಿಯೇ ನಡೆದಿರಬಹುದು, ಚಿರತೆ ಇರುವಿಕೆ ಸ್ಪಷ್ಟಪಡಿಸಿಕೊಂಡು ಬೋನನ್ನು ಅಳವಾಡಿಸಲಾಗುವುದಾಗಿ ವಲಯ ಅರಣ್ಯಧಿಕಾರಿ ರೇಣುಕಮ್ಮ ಹೇಳಿದರು