ಚಿರತೆ ದಾಳಿಗೆ ವ್ಯಕ್ತಿಗೆ ಗಾಯ

ಹರಪನಹಳ್ಳಿ.ಜು.೨೦; : ತಾಲ್ಲೂಕಿನ ತೆಲಗಿ ಹೋಬಳಿ ವ್ಯಾಪ್ತಿಯ ಕಂಡಿಕೇರಿ ಗ್ರಾಮದಲ್ಲಿ ಚಿರತೆ ಕುರಿಗಾಹಿ ಮೇಲೆ ದಾಳಿ ಮಾಡಿದ್ದು ಕೊಡಲಿಯಿಂದ ಹೊಡೆದು ಪ್ರಾಣ ಅಪಾಯದಿಂದ ಪಾರದ ಘಟನೆ ಜರುಗಿದೆ. ಅಲ್ಲದೇ ಅದೇ ಚಿರತೆಯ ಚಲನವಲನ ಮೊಬೈಲ್‌ನಲ್ಲಿ ಚಿತ್ರಿಕರಿಸಿ ಸಾಹಸ ಮಾಡಿರುವ ಕುರಿಗಾಹಿ ಕೂಗಾ ಕರಿಬಸಪ್ಪ ಸಾಹಸ ಮಾಡಿದ್ದಾರೆ. ತೆಲಗಿ ಗ್ರಾಮದ ಕರಿಬಸಪ್ಪ ಎಂಬ ಯುವಕ (21) ಗ್ರಾಮದ ಜಮೀನುಗಳಿಗೆ ಹೊಂದಿಕೊಂಡಿರುವ ಕಂಡಿಕೇರಿ ಅರಣ್ಯ ಪ್ರದೇಶದಲ್ಲಿ ಎಂದಿನಂತೆ ಕುರಿಗಳನ್ನು ಮೇಯಿಸಲು ತೆರಳಿದ್ದಾರೆ. ಏಕಾ ಏಕಿ ಚಿರತೆ ಅವರ ಮೇಲೆ ಎರಗಿದೆ. ಹೆದರದೇ ಕೈಯಲ್ಲಿದ್ದ ಕೂಡಲಿಯಿಂದ ಪ್ರತಿ ದಾಳಿ ಮಾಡಿದ ಯುವಕ ಚಿರತೆಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲನಾಗಿದ್ದಾರೆ. ಅದರೂ ಬೆನ್ನು ಬಿಡದ ಚಲನವಲನವನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಾರೆ. ಚಿರತೆಯ ತನ್ನ ದಾಳಿಯಿಂದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಚಿರತೆಗಳ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು. ಮಾನವರ ಮೇಲೆ ದಾಳಿ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಗ್ರಾಮಸ್ಥರಲ್ಲಿ ಆತಂಕವಾಗಿದೆ ಎಂದು ಗ್ರಾಮದ ಮಂಜುನಾಥ ವ್ಯಕ್ತಪಡಿಸಿದ್ದಾರೆ.