ಚಿರತೆ ದಾಳಿಗೆ ಬಲಿಯಾದ ಅಡುಗೆ ಭಟ್ಟ

ಗಂಗಾವತಿ, ನ.05: ಬರ್ಹಿದೆಸೆಗೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ತಾಲೂಕಿನ ಆನೆಗೊಂದಿ ಸಮೀಪ ಬುಧವಾರ ರಾತ್ರಿ ನಡೆದಿದೆ.
ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಅಡುಗೆ ಭಟ್ಟ ಹುಲಗೇಶ (24) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿ. ರಾತ್ರಿ ವೇಳೆ ಬರ್ಹಿದೆಸೆಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗುರುವಾರ ಬೆಳಗಿನ ಜಾವ ಸುದ್ದಿ ಬೆಳಕಿಗೆ ಬಂದಿದೆ. ಆನೆಗೊಂದಿ ಸಮೀಪದ ಮ್ಯಾಗೋಟದ ಹತ್ತಿರ ಹುಲುಗೇಶ ಅವರ ದೇಹದ ಭಾಗಗಗಳು ಪತ್ತೆಯಾಗಿವೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಬಲಿ ಬೀಸಿದ್ದಾರೆ.
ಈ ಭಾಗದಲ್ಲಿ ಚಿರತೆ, ಕರಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕದ ಮನೆ ಮಾಡಿದೆ.