ಚಿರತೆ ದಾಳಿಗೆ ದನಗಾಹಿ ಯುವಕ ಬಲಿ

ಗಂಗಾವತಿ ಜ.1:  ತಾಲೂಕಿನ  ವಿರುಪಾಪುರ  ಗಡ್ಡೆಯಲ್ಲಿ ಹಸು ಮೇಯಿಸಲು ಹೋದ ಯುವಕನೋರ್ವನ  ಚಿರತೆ ದಾಳಿಗೆ ಬಲಿಯಾದ ಘಟನೆ ಶುಕ್ರವಾರ ನಡೆದಿದೆ.ಕರಿಯಮ್ಮನಗಡ್ಡಿಯ ರಾಘವೇಂದ್ರ ವೆಂಕಟೇಶ (19)ಚಿರತೆಗೆ ಬಲಿಯಾದ ಯುವಕ. ಕುರುಚಲು ಗುಡ್ಡದ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಗಂಗಾವತಿ ಅರಣ್ಯ ವಲಯದ ಆರ್ ಎಫ್ ಓ ಶಿವರಾಜ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ.