ಚಿರತೆ ದಾಳಿಗೆ ಎರಡು ಜಾನುವಾರು ಬಲಿ

ಹರಪನಹಳ್ಳಿ.ಜ.೮; ಚಿರತೆ ದಾಳಿ ನಡೆಸಿ ಒಂದು ಆಕಳು ಕರು ಮತ್ತು ಒಂದು ಎಮ್ಮೆ ಕರುವನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಕೂಂಚೂರು ಗ್ರಾಮದ ಹೊರವಲಯದಲ್ಲಿರುವ ಕೊಟ್ಟಿಗೆಯಲ್ಲಿ  ನಡೆದಿದೆ. ಕುಂಚೂರು ಗ್ರಾಮದ ಎಂ.ಅಬ್ದುಲ್ ರಹಿಮಾನ್‌ಸಾಬ್ ಎಂಬುವವರಿಗೆ ಸೇರಿರುವ ದನ ಕೊಟ್ಟಿಗೆ ಹಲುವಾಗಲು ರಸ್ತೆಯ ಶಾಲೆಯ ಬಳಿ ನಿರ್ಮಾಣ ಮಾಡಲಾಗಿದೆ. ದನ ಕೊಟ್ಟಿಗೆಗೆ ನುಗ್ಗಿದರುವ ಚಿರತೆ ಹಿಂಡು ಎಮ್ಮೆ ಕರುವನ್ನು ಸಮೀಪದ ಗುಡ್ಡದಲ್ಲಿ ಹೊತ್ತು ಹೊಯ್ದು ತಿಂದು ಕಳೆಬರ ಉಳಿಸಿವೆ. ಅಲ್ಲದೇ ಕೊಟ್ಟಿಗೆಯಲ್ಲಿಯೇ ಹೋರಿ ಕರುವನ್ನು ತಿಂದು ಹಾಕಿದೆ. ಕಳೆದ ಮೂರು ದಿನಗಳ ಹಿಂದೆ 1 ಆಕಳು ಕರು ಮತ್ತು 1 ಹೋರಿ ಕರುವನ್ನು ಚಿರತೆಗಳು ಹೊತ್ತು ಹೊಯ್ದು ತಿಂದು ಹಾಕಿವೆ.  ಇದೀಗ ಪುನಃ ಎರಡು ಜಾನುವಾರುಗಳನ್ನು ತಿಂದು ಹಾಕಿದೆ. ಅರಣ್ಯ ಇಲಾಖೆ ಅದಿಕಾರಿಗಳು ಕೂಡಲೇ ಚಿರತೆಗಳನ್ನು ಹಿಡಿದು ಬೇರೆಡೆಗೆ ಸಾಗಿಸುವುದರ ಜೊತೆಗೆ ಜಾನುವಾರುಗಳಿಗೆ ಪರಿಹಾರ ವಿತರಿಸಬೇಕು ಎಂದು ಜಾನುವಾರುಗಳ ಮಾಲೀಕ ಎಂ.ಅಬ್ದುಲ್ ರಹಿಮಾನ್‌ಸಾಬ್ ಒತ್ತಾಯಿಸಿದ್ದಾರೆ.