ಚಿರತೆ ಕಾಣಿಸಿಕೊಂಡ ಸ್ಥಳಗಳಿಗೆ ತಹಸೀಲ್ದಾರರ ಭೇಟಿ

ಗುರುಮಠಕಲ್:ಸೆ.22:ತಾಲೂಕು ಚಂಡ್ರಿಕಿ ಸಿಮಾಂತರದಲ್ಲಿ ಚಿರತೆ ಅಡ್ಡಾಡುತ್ತಿದ್ದ ಸುದ್ದಿ ಮೋಬೈಲ್ ಮತ್ತು ವಾಟ್ಸ್ ಆ್ಯಪ್ ನಲ್ಲಿ ಸುದ್ದಿ ಹರಿದಾಡುತ್ತಿದ್ದು ಜನರು ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಹಂಜುತ್ತಿದ್ದು ರೈತರು ಪ್ರತ್ಯೇಕವಾಗಿ ನೋಡಿದ ಹೊಲಗಳಿಗೆ ಮಾನ್ಯ ಶ್ರೀ ತಹಸೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಶರಣಬಸವ ರಾಣಪ್ಪ ಅವರು ಭೇಟಿ ನೀಡಿ ರೈತರನ್ನು ಸ್ವತಃ ವಿಚಾರಿಸಿ ಮಾತನಾಡಿದರು. ಈಗಾಗಲೇ ತಾಲೂಕು ಅಧಿಕಾರಿಗಳ ಸಭೆ ಮಾಡಿ ಸಂಬಂಧ ಪಟ್ಟ ಚಂಡ್ರಿಕಿ ವಲಯದ ಅಧಿಕಾರಿಗಳ ಜೋತೆ ಚರ್ಚೆ ಮಾಡಿ ಆರೋಗ್ಯ ಇಲಾಖೆ. ಪೆÇೀಲಿಸ್ ಇಲಾಖೆ. ಕಂದಾಯ ಇಲಾಖೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಯವರಿಗೆ ಹಾಗು ಸುತ್ತಮುತ್ತಲಿರುವ ಹಳ್ಳಿ ಗ್ರಾಮಗಳಲ್ಲಿ ಟಂಟಂ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಿವಿ. ಜನರು ಒಬೋಂಟಿಗರಾಗಿ ಸಾಯಂಕಾಲ ಹೋತ್ತಿನಲ್ಲಿ ಸುಮ್ಮನೆ ಹೊಲಗದ್ದೆಗಳಲ್ಲಿ ಅಡ್ಡಾಡ ಬಾರದು ತಮಗೆ ಅಂತಹಾ ಕೆಲಸ ವಿದ್ದಾಗ ಮಾತ್ರ ತಾವೆಲ್ಲರೂ ಗುಂಪು ಕಟ್ಟಿಕೊಂಡು ಒಬ್ಬರಿಗೊಬ್ಬರು ಸಹಕಾರ ದಿಂದ ಇದ್ದು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು ಹಾಗೂ ಮುಖ್ಯವಾಗಿ ರೈತರು ಇರಲಿ ಸಾರ್ವಜನಿಕರು ಇರಲಿ ಕಾದಿಟ್ಟ ಅರಣ್ಯದಲ್ಲಿ ನಿಮಗೆಲ್ಲ ಗೊತ್ತಿರುವಂತೆ ಅರಣ್ಯದ ಭಾಗದಲ್ಲಿ ಕೃರತರಹವಾದ ಕಾಡು ಮೃಘ ಗಳಾಗಲಿ. ಸಾಧು ಜಂತುಗಳಾಗಲಿ. ಪಕ್ಷಿ ಗಳು.ವಿಷ ಸರ್ಪಗಳಾಗಲಿ ವಿರುವುದು ಸಹಜ ಸರ್ಕಾರವು ಅವು ಸ್ವಾತಂತ್ರವಾಗಿ ಜಿವಿಸಲಿಕ್ಕೆ ಸರ್ಕಾರವು ಮಾಡಿರುವ ಕಾದಿಟ್ಟ ಅರಣ್ಯ ಪ್ರದೇಶ. ಅದರಿಂದಾಗಿ ರೈತರಾಗಲಿ ಸಾರ್ವಜನಿಕರಾಗಲಿ ಜನಸಾಮಾನ್ಯರು ಅಡ್ಡ ತಿಡ್ಡವಾಗಿ ಹೋಗಿ ಏನಾದರೂ ಅಪಾಯವನ್ನು ಮಾಡಿಕೊಂಡರೆ ಸರ್ಕಾರವು ಯಾವುದೇ ತರಹದ ಅನುದಾನ ಕೊಡುವುದಿಲ್ಲ ಆದುದರಿಂದ 84 ಲಕ್ಷ ಜೀವರಾಶಿ ಗಳಲ್ಲಿ ಮಾನವ ಬಹಳ ಉತ್ತಮ ವಾದ ಜನ್ಮ ಆದುದರಿಂದ ಕೃರಮೃಘ ಗಳ ಜೋತೆ ಬಹಳ ಜಾಗರುಕತೆಯಿಂದ ಇರಬೇಕು. ತಾವು ನೋಡಿರುವ ಚಿರತೆ ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೊನು ಹಾಕಿದ್ದಾರೆ ಎಂದು ಹೇಳಿದ್ದಾರೆ ಆದರು ತಾವು ಚಿರತೆ ಸಿಗುವವರೆಗೂ ಬಹಳಷ್ಟು ಜಾಗೃತ ರಾಗಿ ಇರಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ರಾದ ನರಸಿಂಹ ಸ್ವಾಮಿ ಹಾಗೂ ಲಿಂಗರೇಡ್ಡಿ. ಜನಾರ್ಧನ. ನವಿನ್. ಬಸಲಿಂಗಪ್ಪ. ರಮೇಶ್.ಬೋಜಪ್ಪ. ಹರ್ಷಪ್ಪ. ಲಕ್ಷ್ಮಪ್ಪ. ಇತರರು ಇದ್ದರು.