ಚಿರತೆಗುಂಪು ಪ್ರತ್ಯೇಕ ಆತಂಕದಲ್ಲಿ ಬೆಟ್ಟದೂರು ಗ್ರಾಮಸ್ಥರು

ಮಾನ್ವಿ,ಆ.೨೮ – ಕಳೆದ ಎರಡು ವರ್ಷಗಳಿಂದ ನೀರಮಾನವಿ ಹಾಗೂ ಬೆಟ್ಟದೂರು ಗ್ರಾಮದ ಗುಡ್ಡದಲ್ಲಿ ಚಿರತೆಗಳು ಕಂಡು ಬರುತ್ತಿದೆ ಇದಕ್ಕೆ ಸಂಬಂಧಿಸಿದಂತೆ ತಾಲೂಕ ಆರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಎಷ್ಟೇ ಪ್ರಯತ್ನ ಪಟ್ಟರು ಚಿರತೆಗಳನ್ನು ಸೆರೆ ಹಿಡಿಯುವುದಕ್ಕೆ ಆಗುತ್ತಿಲ್ಲ ಅದರಂತೆಯೇ ಶನಿವಾರ ಬೆಟ್ಟದೂರು ಗುಡ್ಡದಲ್ಲಿ ಚಿರತೆಗಳ ಗುಂಪೊಂದು ಕಂಡು ಬಂದಿದ್ದು ಅರಣ್ಯಧಿಕಾರಿಗಳು ಬೇಟಿ ನೀಡಿ ಹೆಜ್ಜೆಗಳನ್ನು ಪರಿಶೀಲನೆ ಮಾಡಿದ ಘಟನೆ ನಡೆದಿದೆ.
ಭಾನುವಾರ ಬೆಟ್ಟದೂರು ಗ್ರಾಮದ ಗುಡ್ಡದ ಹತ್ತಿರದಲ್ಲಿರುವ ಜಮೀನುಗಳಲ್ಲಿ ರಾತ್ರಿ ಗ್ರಾಮಸ್ಥರಿಗೆ ೨ ಚಿರತೆಗಳು ಕಂಡುಬಂದಿದ್ದು ತಕ್ಷಣವೇ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣವೇ ಉಪ ಅರಣ್ಯಧಿಕಾರಿ ಹನುಮಂತ್ರಾಯ ಬಿರದಾರ್ ಹಾಗೂ ಬೂದೆಪ್ಪ ಹಾಗೂ ಸಿಬ್ಬಂದಿ ಹಾಗೂ ಛಾಯಾಗ್ರಾಹಕ ಸಲ್ಲಾವುದ್ದೀನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಭಾನುವಾರ ಬೆಳಿಗ್ಗೆ ಜಮೀನುಗಳಲ್ಲಿ ಪರಿಶೀಲನೆ ನಡೆಸಿದಾಗ ಚಿರತೆಗಳ ಹೆಜ್ಜೆ ಗುರುತುಗಳು ಕಂಡು ಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡ ಸೇರಿದಂತೆ ಸುತ್ತ ಮುತ್ತ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ಕೈಗೊಂಡಿದ್ದಾರೆ.
ಕೆಲ ದಿನಗಳಿಂದೆ ಇದೇ ಗ್ರಾಮಕ್ಕೆ ಹೊಂದಿಕೊಂಡಿರುವ ನೀರಮಾನ್ವಿ ಗ್ರಾಮದಲ್ಲಿನ ಸಿದ್ದರೂಡ ಮಠದ ಹತ್ತಿರ ಚಿರತೆ ಕಂಡು ಬಂದಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಇರುವಚ ಅನುಮಾನ ಇದ್ದು ಅರಣ್ಯ ಇಲಾಖೆ ಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದಿದ್ದು ಜಮೀನಿಗೆ ಹೋಗಲು ಬಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪಕ್ಷಿ ಪ್ರೇಮಿ ಸಲ್ಲಾವುದ್ದಿನ್ ಸೇರಿ ಇನ್ನಿತರರು ಚಿರತೆಗಳ ಹೆಜ್ಜೆಯ ಜಾಡು ಹಿಡಿದು ಚಿರತೆಗಳನ್ನು ಹುಡುಕುತ್ತಿದ್ದಾರೆ.