ಚಿರತನಾಳ, ಓರ್ವನ ಮೇಲೆ ಹಲ್ಲೆ – ಪರಾರಿ

ಸಿಂಧನೂರು.ನ.12- ರಾಜಕೀಯ ವೈಷಮ್ಯದಿಂದ ವಾಲ್ಮೀಕಿ ಜನಾಂಗದ ವ್ಯಕ್ತಿ ಮೇಲೆ ಇನ್ನೊಂದು ‌ಕೋಮಿನ ಒಂಬತ್ತಕ್ಕೂ ಮೇಲ್ಪಟ್ಟ ಜನ ಅಕ್ರಮ ಕೂಟ ಕಟ್ಟಿಕೊಂಡು ಬಂದು ಮಾರಣಾಂತಿಕ ಹಲ್ಲೆ ಮಾಡಿ ಹಲ್ಲೆಗೊಳಗಾದ ವ್ಯಕ್ತಿ ‌ಪ್ರಜ್ನೆತಪ್ಪಿ ನೆಲಕ್ಕೆ ಬಿದ್ದ ಮೇಲೆ ಆರೋಪಿಗಳು ಘಟನೆ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕಿನ ಚಿರತನಾಳ ಗ್ರಾಮದ ಶರಣಪ್ಪ‌ ನಾಯಕ ಎನ್ನುವ ವ್ಯಕ್ತಿ ತನ್ನ ಹೊಲಕ್ಕೆ ಹೋಗಿ ಮರಳಿ ಬೈಕ್ ನಲ್ಲಿ ಮನೆಗೆ ಬರವಾಗ ದ್ಯಾವಣ್ಣ ,ಶರಣಪ್ಪ‌, ದೊಡ್ಡ ಬಂಡೆಪ್ಪ ,ಸಣ್ಣ ಬಂಡೆಪ್ಪ ನಿಂಗಪ್ಪ ಮಾಡಿಗೇರಿ ಸೇರಿದಂತೆ ಒಂಬತ್ತಕ್ಕೂ ಮೇಲ್ಪಟ್ಟು ಜನ ರಸ್ತೆಗೆ ಅಡ್ಡಗಟ್ಟಿ ನಿಂತು‌ ಕಬ್ಬಿಣದ ರಾಡಿನಿಂದ ಹಾಗೂ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ಮಾಡಿದ ಕಾರಣ ತೀವ್ರ ಗಾಯಗೊಂಡು ಶರಣಪ್ಪ ಎನ್ನುವ ವ್ಯಕ್ತಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಾಗ ವಿಷಯ ತಿಳಿದು ಕುಟುಂಬಸ್ಥರು ಘಟನೆ ಸ್ಥಳಕ್ಕೆ ಬಂದು ಹಲ್ಲೆ ಗೊಳಗಾದ ವ್ಯಕ್ತಿಯನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಗಾಗಿ ದಾಖಲು ಮಾಡಿದ್ದಾರೆ.
‌ಶರಣಪ್ಪ‌ನ ನಾಯಕನ‌ ಮೇಲೆ‌ ಹಲ್ಲೆ ಮಾಡಿದ ದ್ಯಾವಣ್ಣ, ಶರಣಪ್ಪ ಸೇರಿದಂತೆ ಒಂಬತ್ತು ಜನಕ್ಕೂ ಮೇಲ್ಪಟ್ಟು ‌ಅಕ್ರಮ ಕೂಟ ಕಟ್ಟಿಕೊಂಡು ಶರಣಪ್ಪ ನಾಯಕನ ಮನೆಗೆ ಬಂದು ಪುನಃ ಶರಣಪ್ಪನ ಕುಟುಂಬಸ್ಥರ ಮೇಲೆ‌ ಹಲ್ಲೆ ‌ಮಾಡಿ ಅವಾಚ್ಯ ಶಬ್ದಗಳಿಂದ ಬೈಯದು ,ಕೊಲೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಶರಣಪ್ಪ ನಾಯಕ ನೀಡಿದ ದೂರಿನ ಮೇರೆಗೆ ತುರವಿಹಾಳ ಪೋಲಿಸ್ ಠಾಣೆಯಲ್ಲಿ ಜಾತಿ ನಿಂದನೆ ,ಜೀವ ಬೆದರಿಕೆ , ಸೇರಿದಂತೆ ಇನ್ನಿತರ ಕಾಯ್ದೆಗಳ ಅಡಿಯಲ್ಲಿ ತಡ ರಾತ್ರಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಶರಣಪ್ಪ ನಾಯಕ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದು ಶರಣಪ್ಪ ನಾಯಕ ಹಾಗೂ ದ್ಯಾವಣ್ಣ ಹಾಗೂ ಶರಣಪ್ಪ‌, ನಿಂಗಪ್ಪ ಮಾಡಗೇರಿ ಸೇರಿದಂತೆ ಇತರರ ಜೊತೆ ಮೊದಲಿಂದ ರಾಜಕೀಯ ವೈಷಮ್ಯ ಇತ್ತು .ಈಗಾಗಲೇ ಇವರ ಮಧ್ಯೆ ಹಲವಾರು ಸಲ ಗಲಾಟೆಗಳು ನಡೆದಿವೆ. ಇಂದು ಮಧ್ಯಾಹ್ನ ಹೊಲಕ್ಕೆ ನೀರು ಕಟ್ಟುವ ನೆಪ‌ ಮಾಡಿಕೊಂಡು ಶರಣಪ್ಪ ನಾಯಕ ನ ಮೇಲೆ ಹಲ್ಲೆ ‌ಮಾಡಿ‌ ಆರೋಪಿಗಳು ರಾಜಕೀಯ ಹಗೆ ತೀರಿಸಿಕೊಂಡಿದ್ದಾರೆ.
ತುರವಿಹಾಳ ಪಿಎಸ್ಐ ಯರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿಗಳು ನಗರದ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳಿಂದ ದೂರು ಪಡೆದು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸುವದಾಗಿ ಪತ್ರಿಕೆಗೆ ತಿಳಿಸಿದ್ದು, ಅತ್ತ ಹಲ್ಲೆ ಮಾಡಿದ ಇನ್ನೊಂದು ಕೊಮಿನ ಮುಖಂಡರು ಮತ್ತು ಜನರು ತುರವಿಹಾಳ ಪೋಲಿಸ್ ಠಾಣೆಗೆ ಬಂದು ನಮ್ಮ ಮೇಲೆಯೂ ಸಹ ಹಲ್ಲೆಯಾಗಿದ್ದು ನಾಯಕ ಜನಾಂಗದವರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ದೂರಿಗೆ ಪ್ರತಿ ದೂರು ನೀಡಲು ಬಂದಿದ್ದಾರೆಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
ಪಿಎಸ್ಐ ಯರಿಯಪ್ಪ ಯಾವ ರೀತಿ ಮುಂದೆ ಕ್ರಮ‌ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ. ಈಗಾಗಲೇ ತಾಲುಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿ ಸವರ್ಣಿಯರು ‌ಮತ್ತು ದಲಿತರ ‌ಮದ್ಯ ಗಲಾಟೆಯಾಗಿದ್ದು ದೂರು ಮತ್ತು ಪ್ರತಿದೂರು ದಾಖಲು ಮಾಡಿಕೊಂಡ ಕಾರಣ ಪಿಎಸ್ಐ ಯರಿಯಪ್ಪ ನ ವಿರುದ್ಧ ಡಿಎಸ್ಎಸ್ ಸಂಘಟನೆ ಯರಿಯಪ್ಪ ನ ಅಮಾನತ್ತಿಗಾಗ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದನ್ನು ಸ್ಮರಿಸಬಹುದು. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವ ಬದಲು ಹಲ್ಲೆಗೊಳಗಾದ ಶರಣಪ್ಪ ನಾಯಕನ ಸೋದರರನ್ನು ಪಿ.ಎಸ್.ಐ ಯರಿಯಪ್ಪ ರಾತ್ರಿ 2 ಘಂಟೆಗೆ ಬಂದಿಸುವ ಮೂಲಕ ಎರಡನೆ ಸಲ ವಿವಾದಕ್ಕೆ ಒಳಗಾದ ಯರಿಯಪ್ಪ ಪಿ.ಎಸ್.ಐ ಎಂದು ಬಿರುದು ಪಡೆದುಕೊಂಡಿದ್ದಾರೆ.