ಚಿರಂತನದ ದೀಪಗೆ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಸಂಜೆವಾಣಿ ವಾರ್ತೆ
ದಾವಣಗೆರೆ. ನ.೪; ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ‘ಚಿರಂತನ’ ಸಂಸ್ಥೆಯ ಮುಖಾಂತರ ಕಳೆದ 23 ವರ್ಷಗಳಿಂದ ಸತತವಾಗಿ ಸೇವಿ ಸಲ್ಲಿಸುತ್ತಾ ಬಂದಿರುವ ಶ್ರೀಮತಿ ದೀಪ ಎನ್ ರಾವ್ ರವರಿಗೆ ನವೆಂಬರ್ 1 ರಂದು ಜಿಲ್ಲಾಡಳಿತದ ವತಿಯಿಂದ ನಡೆದ ‘ಕರ್ನಾಟಕ ರಾಜ್ಯೋತ್ಸವ, ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಖ್ಯಾತ ನಾಮರಾಗಿರುವ ರಾಷ್ಟ್ರ ಹಾಗೂ  ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ದಾವಣಗೆರೆಗೆ ಕರೆಯಿಸಿ ಕಾರ್ಯಕ್ರಮಗಳನ್ನ ಆಯೋಜಿಸಿದಲ್ಲದೆ ಇಲ್ಲಿಯವರೆಗೂ 16000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಚಿರಂತನ’ ಸಂಸ್ಥೆಯ ಮೂಲಕ ಕಲಾ ಶಿಕ್ಷಣ ನೀಡುವಲ್ಲಿ ದೀಪಾ ಪ್ರಮುಖ ಪಾತ್ರ ವಹಿಸಿದ್ದಾರೆ ಯುಕೆ, ದುಬೈ, ಲಂಡನ್, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಅಂತರಾಷ್ಟ್ರೀಯ ನೃತ್ಯ ಸಂಗೀತಗಳನ್ನು ಆಯೋಜಿಸಿ ದಾವಣಗೆರೆಗೆ ಹೆಸರನ್ನು ತಂದಿದ್ದಾರೆ.