ಚಿರಂಜೀವಿ ನಟನೆಯ 25 ಕೋಟಿ ವೆಚ್ಚದ ಆಚಾರ್ಯ ಸಿನಿಮಾದ ಸೆಟ್ ಸುಟ್ಟು ಭಸ್ಮ

ಹೈದರಾಬಾದ್ (ತೆಲಂಗಾಣ),ಫೆ.28- ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಸೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಹೈದರಾಬಾದ್‌ನ ಹೊರವಲಯದಲ್ಲಿರುವ ಕೋಕಾಪೇಟ್ ಸರೋವರದಲ್ಲಿ ಕೋಟಿ ಕೋಟಿ ಬೆಲೆಯ ಸೆಟ್ ನಿರ್ಮಾಣ ಮಾಡಲಾಗಿತ್ತು.
ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಆಚಾರ್ಯ ಸಿನಿಮಾದಲ್ಲಿ ಅಪ್ಪ ಮಗ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು.
ಫೆ. 27ರಂದು ಸೆಟ್ ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆಚಾರ್ಯ ಸಿನಿಮಾದ ಬಹುಕೇಟಿ ವೆಚ್ಚದ ಸುಂದರ ಸೆಟ್ ಅನ್ನು ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್ ನಿರ್ಮಿಸಿದ್ದರು. ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. 
ಸದ್ಯ ಬೆಂಕಿಗೆ ಆಹುತಿ ಆಗಿರುವ ಆಚಾರ್ಯ್ ಬೆಂಕಿಗೆ ಆಹುತಿ ಆಗಿರುವ ಸೆಟ್ ಮಿನಿ ಟೆಂಪಲ್ ಟೌನ್, ಧರ್ಮಸ್ಥಳಿಯಾಗಿತ್ತು. ಭವ್ಯವಾದ ಟೆಂಪಲ್ ಸೆಟ್ ನಿರ್ಮಾಣ ಮಾಡಲಾಗಿತ್ತು. ದುರದೃಷ್ಟವಶಾತ್ ಧರ್ಮಸ್ಥಳವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸೆಟ್ ಧಗಧಗ ಎಂದು ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಗ್ನಿ ಅವಘಡದ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದೆ. ಆದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಅಷ್ಟೊತ್ತಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸೆಟ್‌ಗೆ ಬೆಂಕಿ ತಗುಲಲು ನಿಖರ ಕಾರಣ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಸೆಟ್ ನಲ್ಲಿ ಯಾರೋ ಸಿಗೇಟು ಸೇದ ಎಸೆದಿದ್ದಾರೆ. ಹಾಗಾಗಿ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ ಎಂದು ಶಂಕಿಸಲಾಗಿದೆ.
ಸೆಟ್ ನಿರ್ಮಾಣ ನೋಡಿ ನಿರ್ದೇಶಕ ಕೊರಟಾಲ ಶಿವ ಕಲಾ ನಿರ್ದೇಶಕರ ಕಲ್ಪನೆಯನ್ನು ಹಾಡಿಹೊಗಳಿದ್ದರು. ಆಚಾರ್ಯ ಸಿನಿಮಾದ ಬಹುತೇಕ ಚಿತ್ರೀಕರಣ ಅದೇ ಸೆಟ್ ನಲ್ಲಿ ನಿರ್ಮಾಣವಾಗಿತ್ತು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಆಚಾರ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ್ದ ಚಿತ್ರತಂಡ ದೊಡ್ಡ ನಷ್ಟ ಅನುಭವಿಸಿತ್ತು. ಹೀನಾಯ ಸೋಲು ರಾಮ್ ಚರಣ್ ಮತ್ತು ಚಿರಂಜೀವಿ ಅವರಿಗೆ ದೊಡ್ಡ ಹಿನ್ನಡೆ ಆಗಿತ್ತು. ಇದೀಗ ಅದ್ದೂರಿಯಾಗಿ ನಿರ್ಮಾಣವಾಗಿದ್ದ ದುಬಾರಿ ಸೆಟ್ ಕೂಡ ಬೆಂಕಿಗೆ ಆಹುತಿ ಆಗಿರುವುದು ಸಹ ಚಿರಂಜೀವಿ ಮತ್ತು ರಾಮ್ ಚರಣ್ ತಂಡಕ್ಕೆ ಭಾರಿಬೇಸರ ತಂದಿದೆ ಎನ್ನಲಾಗಿದೆ.