ಚಿರಂಜೀವಿ ಎಂದರೆ ಸಾವಿನ ನಂತರ ಬದುಕುವುದಾಗಿದೆ; ಬಸವಪ್ರಭು ಶ್ರೀ

ದಾವಣಗೆರೆ. ;12 ನೇ ಶತಮಾನದಲ್ಲಿ ಶಿವಯೋಗಿ ಸಿದ್ದರಾಮೇಶ್ವರು ಅನುಷ್ಠಾನಗೊಳಿಸಿದ ಸಾಮಾಜಿಕ ಕ್ರಾಂತಿಯು ಇಂದಿಗೂ ಶಾಶ್ವತವಾಗಿದೆ. ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.ದಾವಣಗೆರೆಯ ವೆಂಕಾಭೋವಿ ಕಾಲೋನಿಯಲ್ಲಿರುವ ಶಿವಯೋಗಿ ಸಿದ್ದರಾಮೇಶ್ವರ ಸಂಸ್ಥಾನ ಮಠದಲ್ಲಿ ನಡೆದ 60 ನೇ ವರ್ಷದ ರಥೋತ್ಸವ ಅಂಗವಾಗಿ ಲಿಂ. ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಅಮೃತ ಶಿಲೆಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ  ಸಮ್ಮುಖ ವಹಿಸಿಕೊಂಡು ಮಾತನಾಡಿದರು.ಶಿವಯೋಗಿ ಸಿದ್ದರಾಮರು  ಮಹಾಯೋಗಿದ್ದರು ಬಳಿ ಬಂದವರಿಗೆ ಆಶೀರ್ವದಿಸಿ ಜನರನ್ನು ಉದ್ದರಿಸಿದ್ದಾರೆ. ಅಷ್ಟೇ ಅಲ್ಲದೇ ಕೆರೆಗಳನ್ನು ನಿರ್ಮಾಣ ಮಾಡಿ ಸಮಾಜಯೋಗಿಯಾಗಿ ಇಂದಿಗೂ ಶಾಶ್ವತವಾಗಿದ್ದಾರೆ. ಯಾರು ಸಮಾಜಮುಖಿಯಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅವರು ಚಿರಂಜೀವಿಯಾಗುತ್ತಾರೆ. ಚಿರಂಜೀವಿ ಎಂದರೆ ಸಾವಿನ ನಂತರ ಬದುಕುವುದಾಗಿದೆ. ಶಿವಯೋಗಿ ಸಿದ್ದರಾಮರು ಚಿರಂಜೀವಿಗಳಾಗಿದ್ದಾರೆ ಹಾಗಾಗಿ ಅವರು ನಮಗೆ ಸದಾ ಸ್ಮರಣೀಯರು . ಅಂತಹ ಶಿವಯೋಗಿ ಸಿದ್ದರಾಮರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು ದಾವಣಗೆರೆಯ ವೆಂಕಾಭೋವಿಕಾಲೋನಿಯ ಸಿದ್ದರಾಮೇಶ್ವರ ಸ್ವಾಮೀಜಿ ಆಗಿದ್ದಾರೆ. ಅವರು ದಾವಣಗೆರೆ ಭೋವಿಕಾಲೋನಿಯಲ್ಲಿ 75  ವರ್ಷಗಳ ಹಿಂದೆ ಶ್ರೀ ಸಿದ್ದರಾಮೇಶ್ವರ ಮಠವನ್ನು ಸ್ಥಾಪಿಸಿ ಜನರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡುವ ಮೂಲಕ ಜನರನ್ನು ಉದ್ದರಿಸುವ ಕಾರ್ಯವನ್ನು ಸಿದ್ದರಾಮೇಶ್ವರ ಸ್ವಾಮೀಜಿ ಮಾಡಿದ್ದಾರೆ. ಬಾಲ ಬ್ರಹ್ಮಚಾರಿ ಯಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿ ಯೋಗಿಯಾಗಿದ್ದರು ಅವರನ್ನು ಗುರುತಿಸಿದ ಮುರುಘಾ ಶರಣರು ನೀವು ಸಿದ್ದರಾಮರಂತೆ ಸಮಾಜಯೋಗಿಗಳಾಗಿರಿ ಎಂದು 1999 ರಲ್ಲಿ  ಸಮಾಜಸೇವಾ ದೀಕ್ಷೆಯನ್ನು ನೀಡಿದರು. ಭೋವಿ ಜನಾಂಗವನ್ನು   ಜಾಗೃತಿಗೊಳಿಸಿ   ಸಮಾಜವನ್ನು ಕಟ್ಟಿದ ಕೀರ್ತಿ ಸಿದ್ದರಾಮೇಶ್ವರ ಸ್ವಾಮೀಜಿಗೆ ಸಲ್ಲುತ್ತದೆ. ಅಂತಹ ಮಹಾನ್ ಸ್ವಾಮೀಜಿಯವರ ಅಮೃತಶಿಲೆಯ ಮೂರ್ತಿಯನ್ನು ಸ್ಥಾಪಿಸುವ ಕಾರ್ಯವನ್ನು ಶ್ರೀ ಇಮ್ಮಡಿ ಸಿದ್ದರಾಮ ಮಹಾಸ್ವಾಮಿಗಳವರು ಮಾಡಿದ್ದಾರೆ. ಅವರ ತತ್ವಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಇವತ್ತು ಸಮಾಜವನ್ನು ಸಂಘಟನೆ ಮಾಡಿದ್ದಾರೆ ಅಂತಹ ಕ್ರಿಯಾಶೀಲತೆಯ ಸ್ವಾಮೀಜಿಯನ್ನು ಕೊಡುಗೆಯಾಗಿ ಸಿದ್ದರಾಮೇಶ್ವರ ಸ್ವಾಮೀಜಿ ನೀಡಿದ್ದಾರೆ ಎಂದರು.

ಸಮಾರಂಭದ ನೇತೃತ್ವವನ್ನು ವಹಿಸಿಕೊಂಡಿದ್ದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮ ಮಹಾಸ್ವಾಮಿಗಳವರು ಮಾತನಾಡುತ್ತಾ ಶಿಲೆಗಳು ಇತಿಹಾಸವನ್ನು ಉಳಿಸುವಂತ ಕಾರ್ಯವನ್ನು ಮಾಡುತ್ತವೆ ದಾರ್ಶನಿಕರ ಶರಣರ ಸಂತರ ಸ್ವಾಮೀಜಿಗಳ ಮೂರ್ತಿಗಳು ಅವರು ಸಮಾಜಕ್ಕೆ ನೀಡಿದ ಸತ್ ಕಾರ್ಯಗಳನ್ನು ಸ್ಮರಿಸುವಂತೆ ಮಾಡುತ್ತವೆ ಶಿಲೆಗಳಿಗೆ ಜೀವ ತುಂಬಿವ ಕೆಲಸವಲ್ಲ ಶಿಲೆಗಳ ಸ್ಮಾರಕ ಮೂಲಕ ಬೌದ್ದಿಕ ಸಂಪತ್ತನ್ನು ಪಡೆದು ಆಚಾರ ವಿಚಾರದಲ್ಲಿ ಶಕ್ತಿವಂತರಾಗಲು ಪ್ರೇರಣೆಯನ್ನು ನೀಡುತ್ತವೆ ನಮ್ಮ ಗುರುಗಳಾದ ಲಿಂ.ಸಿದ್ದರಾಮೇಶ್ವರ ಸ್ವಾಮೀಜಿಯವರು ಬಾಲ ಬ್ರಹ್ಮ ಚಾರಿಯಾಗಿ ಯೋಗಸಿದ್ದಿಯನ್ನು ಪಡೆದ ಮಹಾನ್ ಸಾಧಕರಾಗಿದ್ದಾರೆ.  ತಮ್ಮ ವಾಕ್ ಸಿದ್ದಿಯಿಂದ ಜನರ ಕಷ್ಟಗಳನ್ನು ನಿವಾರಿಸಿದ್ದಾರೆ.ಜೋಳಿಗೆ ಹಿಡಿದು ಮಠವನ್ನು ಕಟ್ಟಲಿಲ್ಲ ಸ್ವತಃ ಕಾಯಕವನ್ನು ಮಾಡಿ ಮಠವನ್ನು ಕಟ್ಟಿದ ಕೀರ್ತಿ ಸಿದ್ದರಾಮೇಶ್ವರ ಸ್ವಾಮೀಜಿಗೆ ಸಲ್ಲುತ್ತದೆ ಎಂದರು. ಈ ಸಂಧರ್ಭದಲ್ಲಿ ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ , ತುಮಕೂರಿನ ಮಹಾಲಿಂಗ ಸ್ವಾಮೀಜಿ , ಐಮಂಗಲದ ಹರಳಯ್ಯ ಸ್ವಾಮೀಜಿ , ಜಿಲ್ಲಾಧಿಕಾರಿ ಶಿವಾನಂದ ಕಾಪಸಿ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ , ಆನಂದಪ್ಪ , ಜಯಣ್ಣ ,ಶೇಖರಪ್ಪ , ಗಣೇಶ್ , ನಾಗರಾಜು , ಉಮಕ್ಕ  ಇತರರು ಇದ್ದರು.

Attachments area