ಚಿಮ್ಮಾಇದ್ಲಾಯಿ ವೀರಭದ್ರೇಶ್ವರ ಜಾತ್ರೆ ರದ್ದು

ಚಿಂಚೋಳಿ,ಮೇ.16-ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ವೀರಭದ್ರೇಶ್ವರ ಜಾತ್ರೆ ಮತ್ತು ರಥೋತ್ಸವವನ್ನು ಮಾಡಲಾಗುತ್ತಿತ್ತು. ಆದರೆ ಈಗ ಕೋವಿಡ್ 19 ಸೋಂಕು ಎರಡನೇ ಅಲ್ಲೇ ಬಂದಿರುವ ಕಾರಣದಿಂದಾಗಿ ಚಿಮ್ಮಾಇದ್ಲಾಯಿ ಗ್ರಾಮದಲ್ಲಿ ನಾಳೆ ನಡೆಯಬೇಕಿದ್ದ ಜಾತ್ರೆ ಹಾಗೂ ರಥೋತ್ಸವವನ್ನು ಸರ್ಕಾರದ ಆದೇಶದಂತೆ ರದ್ದು ಮಾಡಲಾಗಿದೆ ಎಂದು ಗ್ರಾಮದ ಮುಖಂಡರಾದ ಶಿವಯೋಗಿ ರುಸ್ತಂಪುರ ತಿಳಿಸಿದ್ದಾರೆ.
ಅದಕ್ಕಾಗಿ ಗ್ರಾಮದ ಸಮಸ್ತ ಭಕ್ತಾದಿಗಳು ಹಾಗೂ ಸಮಸ್ತ ಚಿಮ್ಮಾಇದ್ಲಾಯಿ ಗ್ರಾಮದ ಜನರು ಎಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಗ್ರಾಮಸ್ಥರು ಸರಕಾರದ ನಿಯಮಗಳನ್ನು ಪಾಲಿಸಬೇಕು, ಹಾಗೇ ಎಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಆ ಮೂಲಕ ನಮ್ಮ ಜೀವನ ಉಳಿಸಿಕೊಳ್ಳವುದರ ಜೊತೆಗೆ ಮೊತ್ತೊಬ್ಬರ ಜೀವಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದ್ದಾರೆ.