ಚಿಮ್ಮಾಇದ್ಲಾಯಿ ತಾಪಂ ಕ್ಷೇತ್ರ ಮುಂದುವರೆಸಲು ಒತ್ತಾಯ

ಚಿಂಚೋಳಿ,ಏ.4- ತಾಲೂಕಿನ ಚಿಮ್ಮಾಇದ್ಲಾಯಿ ತಾಲೂಕ ಪಂಚಾಯತ ಕ್ಷೇತ್ರ ಬದಲಾವಣೆ ಮಾಡಿದ ಹಿನ್ನಲೆಯಲ್ಲಿ ಗ್ರಾಮದ ವಿವಿಧ ಪಕ್ಷದ ಮುುಖಂಡರು ಸಭೆ ಸಭೆ ಸೇರಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಕಳೆದ ಐದು ವರ್ಷ ಹಿಂದೆ ನೂತನ ಚಿಮ್ಮಾಇದ್ಲಾಯಿ ತಾಲೂಕ ಪಂಚಾಯತ ಕ್ಷೇತ್ರವನ್ನು ಘೋಷಣೆ ಮಾಡಿ ಚುನಾವಣೆ ನಡೆಸಲಾಯಿತಾದರೂ, ಆದರೆ ಇದನ್ನು ರದ್ದುಪಡಿಸಿರುವುದು ಯಾವ ನ್ಯಾಯಾ ಎಂದು ಮುಖಂಡು ಸಭೆಯಲ್ಲಿ ಆಕ್ರೋಷ ವ್ಯಕ್ತಪಡಿಸಿದರು.
ಕೂಡಲೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿ ಈ ಹಿಂದಿನ ತಾಪಂ ಕ್ಷೇತ್ರವಾಗಿದ್ದ ಚಿಮ್ಮಾಇದ್ಲಾಯಿಯನ್ನು ಮುಂದುವರೆಸಬೇಕು ಎಂದು ಚಿಂಚೋಳಿಯ ತಹಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಚಿಮ್ಮಾಇದ್ಲಾಯಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಶಿವಶರಣಪ್ಪ ಪೆÇಲೀಸ್ ಪಾಟೀಲ್. ಮಲ್ಲಿಕಾರ್ಜುನ ದಳಪತಿ. ರೇವಣಸಿದ್ದಪ್ಪ. ಬಂಡಪ್ಪ ಹೊಳ್ಕರ್. ಸತೀಶ್ ದೇಸಾಯಿ. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಚಿಂಚೋಳಿಕರ್. ಮೊಗಲಪ್ಪ ದಾಸ್. ಅಮೃತ. ಗುಂಡಪ್ಪ ಅವರದಿ. ಚನಬಸಪ್ಪ. ಶಾಮರಾವ್. ಸುನಿಲ್. ಯಲ್ಲಲಿಂಗ್ ದಂಡಿನ್. ಈರಪ್ಪ ಸುಣಗಾರ್. ಲಕ್ಷ್ಮಣ್ ಸುಣಗಾರ್. ಮತ್ತು ಅನೇಕ ಗ್ರಾಮದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.