ಚಿಮ್ಮಾಇದಲಾಯಿಗೆ ರಾಜ್ಯ ಯುವ ಪ್ರಶಸ್ತಿ

ಕಲಬುರಗಿ:ಜ.17: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರತಿ ವರ್ಷ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಕು.ಯಲ್ಲಾಲಿಂಗ ಝರಣಪ್ಪ ದಂಡಿನ್ ಇವರು ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಭಾಂಗಣದಲ್ಲಿ ಶಿಕ್ಷಣ ಸಚಿವರಾದ ಸನ್ಮಾನ ಶ್ರೀ ಬಿ.ಸಿ ನಾಗೇಶ್’ರವರು ಪ್ರದಾನ ಮಾಡಲಿದ್ದಾರೆ ಎಂದು ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿ’ರವರು ಹಾಗೂ ಜಿಲ್ಲಾಧ್ಯಕ್ಷರಾದ ಡಾ.ಸುನೀಲಕುಮಾರ.ಎಚ್ ವಂಟಿ’ಯವರು ತಿಳಿಸಿದ್ದಾರೆ.